ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಆಳ್ವಾಸ್ ಧೀಕಿಂಟ ಯಕ್ಷಗಾನ ಅಧ್ಯಯನ ಕೇಂದ್ರ ಆಶ್ರಯದಲ್ಲಿ ಆರು ದಿನಗಳ ಕಾಲ ವಿದ್ಯಾಗಿರಿಯ ಡಾ.ವಿ.ಎಸ್.ಆಚಾರ್ಯ ಸಭಾಭವನಲ್ಲಿ ನಡೆಯುವ ತೆಂಕು ತಿಟ್ಟು ಯಕ್ಷವೈಭವ ವೀರ ಅಭಿಮನ್ಯು ಸೋಮವಾರ ಆರಂಭಗೊಂಡಿತು.

ಉದ್ಯಮಿ ಶ್ರೀಪತಿ ಭಟ್ ಯಕ್ಷವೈಭವಕ್ಕೆ ಚಾಲನೆ ನೀಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಸಂಯೋಜಕ, ಯಕ್ಷ ಕಲಾವಿದ ಎಂ.ದೇವಾನಂದ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ವೀರ ಅಭಿಮನ್ಯು ಯಕ್ಷಗಾನ ನಡೆಯಿತು.

