ಮೂಡುಬಿದರೆ:ಜುಲೈ28: ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರ ನಿಧನ ಹಿನ್ನಲೆಯಲ್ಲಿ ಮಂಗಳವಾರ ಪುರಸಭೆಯಲ್ಲಿ ನಡೆಯಬೇಕಾಗಿದ್ದ ಅಧಿವೇಶನ ರದ್ದಾಗಿದ್ದು, ಅದರ ಬದಲು ಕಲಾಂ ಅವರಿಗೆ ಸಂತಾಪ ಸೂಚಕ ಸಭೆ ನಡೆಯಿತು. 15ನೇ ವಾರ್ಡ್ ನ ರಸ್ತೆಗೆ ಕಲಾಂ ಹೆಸರಿಡಲು ಮನವಿ.
ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ ಕಲಾಂ ಅವರ ಜೀವನಾದರ್ಶಗಳ ಬಗ್ಗೆ ಮಾತನಾಡಿ, ನನ್ನ 15ನೇ ವಾರ್ಡ್ ನಲ್ಲಿರುವ ರೋಟರಿ ಶಾಲೆ, ಬಾಬುರಾಜೇಂದ್ರ ಶಾಲೆ ರಸ್ತೆಗೆ ಎ.ಪಿ.ಜೆ ಅಬ್ದುಲ್ ಕಲಾಂ ರಸ್ತೆ ಎಂದು ಹೆಸರಿಡುವಂತೆ ಮನವಿ ಮಾಡಿದರು.

mbd_july28_7
ಪುರಸಭಾ ಅಧ್ಯಕ್ಷೆ ರೂಪಾ.ಎಸ್.ಶೆಟ್ಟಿ, ಮಾಜಿ ಅಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ, ಸದಸ್ಯರಾದ ಹನೀಫ್ ಅಲಂಗಾರು, ಕಂದಾಯ ಅಧಿಕಾರಿ ಧನಂಜಯ್ ಕಲಾಂ ಬಗ್ಗೆ ಮಾತನಾಡಿದರು. ಪುರಸಭಾ ಮುಖ್ಯಾಧಿಕರಿ ಶೀನ ನಾಯ್ಕ್ ಉಪಸ್ಥಿತರಿದ್ದರು.
……..

By Suddi9

Leave a Reply

Your email address will not be published. Required fields are marked *