ಮುಂಬಯಿ, ಜು.28: ತೆಂಕಣದ ಗಾನಗಾಪುರ ಎಂದೇ ಜನಜನಿತ  ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀದತ್ತಗುರು ವೀರಾಂಜನೆಯ ಸ್ವಾಮಿ ಒಡಿಯೂರು ಕ್ಷೇತ್ರದ ಶ್ರೀ ಗುರು ದೇವಾನಂದ ಸ್ವಾಮೀಜಿ ಅವರು ತಮ್ಮ ವಾರ್ಷಿಕ ಭೇಟಿಗಾಗಿ ಇಂದಿಲ್ಲಿ ಮಂಗಳವಾರ ಸಂಜೆ ಮುಂಬಯಿ ಸಾಂತಕ್ರೂಜ್ನಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಾದಾರ್ಪಣೆಗೈದರು.

Odiyoorshree Mumbai Airport-2

Odiyoorshree Mumbai Airport-A2

Odiyoorshree Mumbai Airport-C1

Odiyoorshree Mumbai Airport-1

ಸಾಧ್ವಿ ಶ್ರೀಮಾತಾನಂದಮಯಿ ಅವರನ್ನೊಳಗೊಂಡು ಆಗಮಿಸಿದ್ದ ಒಡಿಯೂರುನಶ್ರೀಗಳನ್ನು ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಅಧ್ಯಕ್ಷ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ಅವರು ಬಳಗದ ಪದಾಧಿಕಾರಿಗಳನ್ನೊಳಗೊಂಡು ತುಳಸೀಹಾರವನ್ನಿತ್ತು ಭಕ್ತಿಪೂರ್ವಕ ಸುಖಾಗಮನ ಬಯಸಿದರು.

ಪ್ರಸಕ್ತ ಜನತೆ ಅವಿಷ್ಕಾರ, ಸಂಶೋಧನೆಗಳಿಂದ ವೈಜ್ಞಾನಿಕವಾಗಿ ಮುನ್ನಡೆದರೂ ಭಕ್ತಿಯ ಶಕ್ತಿಯನ್ನು ಮೀರಿ ಬೆಳೆಯಲಾಗದು. ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಬಲವರ್ಧನೆಗೆ ಧರ್ಮಗಳೇ ಅಡಿಪಾಯಗಳಾಗಿದ್ದು, ಪಾವಿತ್ರ್ಯತೆಯ ಭಕ್ತಿ ಮನುಕುಲದ ಧೀಶಕ್ತಿಯಾಗಿದೆ. ಜನರ ಜೀವನಮಟ್ಟ ಮತ್ತು ಜೀವನಶೈಲಿಯ ಶುದ್ಧೀಕರಣವೇ ಧರ್ಮವಾಗಿದೆ. ಆದುದರಿಂದ ಭಕ್ತರೇ ಆಧ್ಯಾತ್ಮಿಕತೆಯ ಆಸ್ತಿ ಆಗಿದ್ದು, ಇಂತಹ ಭಕ್ತರಲ್ಲಿ ಸಂಸ್ಕಾರಯುತ ಬದುಕು ಕಾಣಬಹುದು. ಧರ್ಮ ಪಾಲನೆಯಿಂದ ಸಮಾಜಮುಖಿ ಸಾಧನೆಗಳು ಸಾಧ್ಯವಾಗುವುದು ಎಂದು ಗುರು ದೇವಾನಂದ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ಎಪಿಜೆ ಅಬ್ದುಲ್ ಕಲಾಂ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದ ಶ್ರೀಗಳು ಅವರೋರ್ವ ಅತ್ಯಾದ್ಭುತ ಪ್ರತಿಭಾನ್ವಿತ ಭಾರತೀಯನಾಗಿದ್ದರು. ಸ್ವಂತಿಕೆಯ ತತ್ವಚಿಂತನೆಯಲ್ಲಿ ಬದುಕುತ್ತಾ ಇತರರಿಗೂ ಮೌಲ್ಯಯುತ ಬದುಕನ್ನು ಚಿಂತಿಸಿದ ಮೇಧಾವಿಯಾಗಿದ್ದಾರೆ. ಅವರಲ್ಲಿನ ಮಾನವೀಯತೆಯ ಗುಣಮಟ್ಟದ ಬದುಕು ವಿಶ್ವಕ್ಕೇ ಮಾದರಿ. ಆರು ರಾಷ್ಟ್ರದ ವಿಜ್ಞಾನಿಯಾಗಿ, ಸರ್ವೊನ್ನತ ಪ್ರಜೆಯ್ದ್, ಮಾಜಿ ರಾಷ್ಟ್ರಪತಿಯಾಗಿದ್ದು ನಮ್ಮನ್ನೆಲ್ಲ ಅಗಲಿರುವುದು ರಾಷ್ಟ್ರದ ಬಹುದೊಡ್ಡ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.

ಗುರು ಪರಂಪರೆಯ ಕರ್ಮಭೂಮಿ ಭಾರತವಾಗಿದೆ. ವಿಶ್ವದಗಲದ ರಾಷ್ಟ್ರಗಳಲ್ಲಿ ಅಧ್ಯಾತ್ಮದಲ್ಲೇ ಬೇರುಬಿಟ್ಟು ಬೆಳೆ ದು ನಿಂತ ಏಕೈಕ ನಾಗರಿಕತೆ ಭಾರತದ್ದು. ಇಲ್ಲಿನ ಸಂಸ್ಕೃತಿಕ ಇತಿಹಾಸ ಸದ್ಯೋಜಗತ್ತಿನಲ್ಲೂ ಪ್ರಕಾಶಮಾನವಾಗಿ ಬೆಳೆದು ನಿಂತಿದೆ. ಮೂಲಸ್ವರೂಪದಲ್ಲಿ ಸ್ಥಾಯಿಯಾಗಿರುವ ಇಂತಹ ಪರಂಪರೆ ಪ್ರಾಚೀನತೆಯ ಎಲ್ಲಾ ನಿಮೂರ್ತಿಗಳನ್ನೂ ಸಂರಕ್ಷಿಸಿ ಮುನ್ನಡೆಯ ಬೇಕಾದದ್ದು ನಮ್ಮ ಧರ್ಮವಾಗಬೇಕು. ಇದಕ್ಕಾಗಿ ನಮ್ಮ ಭವಿಷ್ಯತ್ತಿನ ಪೀಳಿಗೆಯಲ್ಲೂ ಧರ್ಮಪ್ರಜ್ಞೆ ಊರ್ಜಿತಗೊಳಿಸಬೇಕಾಗಿದೆ. ಮಠ ಮಾನ್ಯಗಳು ಮತ್ತು ಧರ್ಮಗುರುಗಳ ಸಮರ್ಥ ನೇತೃತ್ವ ಇದಕ್ಕೆ ಪೂರಕವಾಗಬೇಕು. ಸಾಧುಸಂತರು ಹಾಕಿಕೊಟ್ಟಿರುವ ಸತ್ಫಥದಲ್ಲೇ ಮುನ್ನಡೆಯಲು ಗುರುಸಮೂಹ ಮುಂದಾಗಬೇಕು. ಆ ನಿಟ್ಟಿನಲ್ಲೇ ನಾವೂ ಮುಂಬಯಿ ನಗರದ ಜನತೆಯನ್ನು ಹರಸಿ ಮೂಲಸ್ವರೂಪದ ಬದುಕನ್ನು ಅರ್ಥೆ ಸುವ ಪ್ರಯತ್ನಕ್ಕಾಗಿ ಈ ಭೇಟಿಯನ್ನು ಕೈಗೊಂಡಿದ್ದೇವೆ ಎಂದು ಒಡಿಯೂರುಶ್ರೀ ಪತ್ರಕರ್ತರನ್ನುದ್ದೇಶಿಸಿ ತಿಳಿಸಿದರು.

ಈ ಸಂದರ್ಭ ಶ್ರೀ ಗುರುದೇವ ಸೇವಾ ಬಳಗದ ಗೌ| ಕಾರ್ಯದರ್ಶಿ  ಪೇಟೆಮನೆ ಪ್ರಕಾಶ್ ಶೆಟ್ಟಿ, ಗೌ| ಕೋಶಾಧಿಕಾರಿ ಬೋಜ ಶೆಟ್ಟಿ, ಜೊತೆ ಕಾರ್ಯದರ್ಶಿ ಗಳಾದ ದಿವಾಕರ ಶೆಟ್ಟಿ ಮತ್ತು ದಾಮೋದರ ಶೆಟ್ಟಿ, ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮಹಾರಾಷ್ಟ್ರ ಘಟಕದ ಕಾರ್ಯಾಧ್ಯಕ್ಷೆ ಶ್ರೀಮತಿ ರೇವತಿ ವಾಮಯ್ಯ ಶೆಟ್ಟಿ, ಮಾಜಿ ಅಧ್ಯಕ್ಷೆ ಶ್ರೀಮತಿ ಸುವಾಸಿನಿ ಎಸ್.ಶೆಟ್ಟಿ, ಎ ಟು ಝೆಡ್ ನಾರಾಯಣ ಆರ್.ಶೆಟ್ಟಿ, ವಾಮಯ್ಯ ಶೆಟ್ಟಿ, ಧನಂಜಯ ಶೆಟ್ಟಿ ಸಯಾನ್, ಭುಜಂಗ ಶೆಟ್ಟಿ, ಅಶೋಕ್ ದೇವಾಡಿಗ, ಬಾಲಕೃಷ್ಣ ಶೆಟ್ಟಿ, ಆನಂದ್ ಕೆ., ಜಯರಾಮ ಸಾಂತ, ಗಂಗಾಧರ ರೈ, ಧಯನಂದ ಹೆಗ್ಡೆ, ಆನಂದ್ ಐಲ್, ಮೋಹನ್ ಹೆಗ್ಡೆ, ರಾಕೇಶ್ ಭಯಂದರ್, ಜಯಂತಿ ಎನ್.ಶೆಟ್ಟಿ, ಉಷಾ ಶೆಟ್ಟಿ, ಸುಮತಿ ಆರ್.ಶೆಟ್ಟಿ, ಶೈಲಜಾ ಎ.ಶೆಟ್ಟಿ,ಇಂದಿರಾ ಎ.ಶೆಟ್ಟಿ, ದೇವದಾಸ್ ಉಚ್ಚಿಲ್, ಗುಣಪಾಲ್ ಶೆಟ್ಟಿ ಥಾಣೆ, ಸವಿತಾ ಎ.ಶೆಟ್ಟಿ, ಕರುಣಾಕರ ಆಳ್ವ, ಗೋಪಾಲ ವೈ.ಶೆಟ್ಟಿ, ದಾಮೋದರ ಶೆಟ್ಟಿ ನೆರೂಳ್ ಹಾಗೂ ಭಕ್ತರನೇಕರು, ಸೇವಾ ಬಳಗದ ಮಹಾರಾಷ್ಟ್ರ ಘಟಕ ಹಾಗೂ ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮಹಾರಾಷ್ಟ್ರ ಘಟಕದ ಪದಾಧಿಕಾರಿ, ಸದಸ್ಯರು ಮತ್ತು ಉಪಸ್ಥಿತರಿದ್ದು ಶ್ರಿಗಳಿಂದ ಆಶೀರ್ವಚನ ಪಡೆದರು. ಬಳಿಕ ಶ್ರೀಗಳು ನೆರೂಳ್ಗೆ ಭೇಟಿಯನ್ನೀಡಿ ನೆರೆದ ಭಕ್ತರನ್ನು ಹರಸಿದರು.
ಇಂದಿನಿಂದ ಹನ್ನೆರಡು ದಿನಗಳು ಮುಂಬಯಿಯಲ್ಲಿ ನೆಲೆಯಾಗಿ ಶ್ರೀಗಳು ಮಹಾನಗರದಾದ್ಯಂತ, ಉಪನಗರ, ನವಿಮುಂಬಯಿ, ಥಾಣೆ ಪ್ರವಾಸಗೈದು ಭಕ್ತಸಂಘಟಕರು ಆಯೋಜಿಸಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತರನ್ನು ಹರಸಲಿದ್ದಾರೆ ಎಂದು ಬಳಗದ ಅಧ್ಯಕ್ಷ ನ್ಯಾ| ಪ್ರಕಾಶ್ ಶೆಟ್ಟಿ ತಿಳಿಸಿದರು.
ಚಿತ್ರ  ವರದಿ : ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *