ಬಂಟ್ವಾಳ: ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಬೀಡಿ ಕಾರ್ಮಿಕ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಅರ್ಜಿ ಸ್ವೀಕಾರ ಯೋಜನೆಯು ಬಡ ಬೀಡಿ ಕಾರ್ಮಿಕರಿಗೆ ಭಾರೀ ಗೊಂದಲ ಉಂಟು ಮಾಡಿದೆ ಎಂದು ಜಿಲ್ಲಾ ಸಿಐಟಿಯು (ಸೌತ್ ಕೆನರಾ ಬೀಡಿ ಫೆಡರೇಶನ್) ಪ್ರಧಾನ ಕಾರ್ಯದರ್ಶಿ ಜೆ.ಬಾಲಕೃಷ್ಣ ಅವರು ಆರೋಪಿಸಿದ್ದಾರೆ.
27btl-CITU1
ಬಂಟ್ವಾಳ ತಾಲ್ಲೂಕಿನ ಬೀಡಿ ಕೆಲಸಗಾರರ ಸಂಘದ ವತಿಯಿಂದ ಬಡ್ಡಕಟ್ಟೆಯಲ್ಲಿ ಭಾನುವಾರ ನಡೆದ 30ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಬೀಡಿ ಮಾಲಕರ ತುಟಿಭತ್ತೆ ರಿಯಾಯಿತಿ ಪ್ರಕಟಿಸುವ ಮೂಲಕ ಬೀಡಿ ಕಾರ್ಮಿಕರನ್ನು ಸರ್ಕಾರ ವಂಚಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿ ವಿರುದ್ಧ ಬೀಡಿ ಕಾರ್ಮಿಕರ ಸಂಘಟನೆಗಳು ಬೃಹತ್ ಜನಾಂದೋಲನ ರೂಪಿಸಲಿದೆ ಎಂದು ಅವರು ತಿಳಿಸಿದರು.
ಸಿಪಿಎಂ ಹಿರಿಯ ಮುಖಂಡ ಬಿ.ವಾಸು ಗಟ್ಟಿ, ಬೀಡಿ ಫೆಡರೇಶನ್ ಕೋಶಾಧಿಕಾರಿ ಜಯಂತ್ ನಾಕ್, ರೈತ ಮುಖಂಡರಾದ ಬಿ.ನಾರಾಯಣ, ಬೆಳ್ತಂಗಡಿ ಬೀಡಿ ಸಂಘದ ಜತೆ ಕಾರ್ಯದರ್ಶಿ ರೋಹಿಣಿ, ಮೀನಾಕ್ಷಿ ಮತ್ತಿತರರು ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಸಂಜೀವ ಬಂಗೇರ ಸ್ವಾಗತಿಸಿ, ಜನಾರ್ದನ ಕುಲಾಲ್ ವಂದಿಸಿದರು.
ಪದಾಧಿಕಾರಿಗಳ ಆಯ್ಕೆ:
ಬಂಟ್ವಾಳ ತಾಲೂಕು ಬೀಡಿ ಕೆಲಸಗಾರರ ಸಂಘದ ನೂತನ ಅಧ್ಯಕ್ಷರಾಗಿ ವಿಠಲ ಹೊಸ್ಮಾರ್, ಉಪಾಧ್ಯಕ್ಷರಾಗಿ ಗಿರಿಜಾ, ವಿಮಲ ಗುಡ್ಡೆಯಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಸಂಜೀವ ಬಂಗೇರ, ಜತೆ ಕಾರ್ಯದರ್ಶಿಯಾಗಿ ಲೋಲಾಕ್ಷಿ, ಕೋಶಾಧಿಕಾರಿಯಾಗಿ ಉದಯ ಕುಮಾರ್ ಮತ್ತು 18ಮಂದಿ ಕಾರ್ಯಕಾರಿ ಸಮಿತಿಗೆ ಆಯ್ಕೆಗೊಂಡರು.

By Suddi9

Leave a Reply

Your email address will not be published. Required fields are marked *