ಮೂಡುಬಿದರೆ: ಬೀಡಿ ಕಾ ಕರ ಮಕ್ಕಳ ವಿದ್ಯಾರ್ಥಿ ವೇತನವನ್ನು ಆನ್ಲೈನ್ ಮೂಲಕ ಮಾಡುವುದನ್ನು ವಿರೋಧಿಸಿ ಮೂಡುಬಿದರೆ ವಲಯದ ಬೀಡಿ ಕಾರ್ಮಿಕರಿಂದ ಬೀಡಿ ಕಾರ್ಮಿಕರ ಆಸ್ಪತ್ರೆಯ ಎದುರು ಸೋಮವಾರ ಪ್ರತಿಭಟನಾ ಪ್ರದರ್ಶನ ನಡೆಯಿತು.
ಜಿಲ್ಲಾ ಬೀಡಿ ಫೆಡರೇಶನ್ ಉಪಾಧ್ಯಕ್ಷ ಸದಾಶಿವ ದಾಸ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿ ವೇತನ ಅನ್ ಲೈನ್ ಮಾಡಿದರೆ ಗ್ರಾಮಾಂತರ ಪ್ರದೇಶದ ಬೀಡಿ ಕಾರ್ಮಿಕರು ಮತ್ತು ಅವರ ಹೆಚ್ಚಿನ, ಹಣ ವಿನಿಯೋಗಿಸಬೇಕಾಗುತ್ತದೆ. ಬೀಡಿ ಕಾರ್ಮಿ ಕರಿಗೆ ಅನ್ಲೈನ್ ಬಗ್ಗೆ ಅಷ್ಟೊಂದು ಮಾಹಿತಿಯಿಲ್ಲದ ಕಾರಣ ಹೆಚ್ಚಿನ ತೊಂದರೆಯನ್ನು ಅನುಭವಿಸುವಂತಾಗಬಹುದು. ಅದರ ಬದಲು ಹಿಂದೆ ಶಾಲೆಯಲ್ಲಿ ಸಿಗುತ್ತದ್ದ ರೀತಿಯಲ್ಲಿ ವಿದ್ಯಾರ್ಥಿ ವೇತನ ಲಭಿಸಿದರೆ ಉತ್ತಮ ಎಂದರು.

ಬೀಡಿ ಕಾರ್ಮಿಕರ ಬಾಳಿನ ಜೊತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಚೆಲ್ಲಾಟವಾಡುವುದನ್ನು ಮುಂದುವರಿಸುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ಇಂದಿಗೂ ಜೀವನಾಧರವಾಗಿರುವ `ಬೀಡಿ’ಯನ್ನು, ಬಂಡವಾಳಶಾಹಿಗಳ ಓಲೈಕೆಗಾಗಿ ಬಲಿ ತೆಗೆದುಕೊಂಡರೆ ಯಾವುದೇ ಸರ್ಕಾ ರಕ್ಕೆ ಉಳಿಗಾಲವಿಲ್ಲ ಎಂದರು.
ಬೀಡಿ ಕಾರ್ಮಿಕ ಕಲ್ಯಾಣ ನಿಧಿ ಸಂಸ್ಥೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಿವೇದಿತಾ ಅವರಲ್ಲಿ ಮನವಿ ಸಲ್ಲಿಸಲಾಯಿತು.
ಸಿಐಟಿಯು ವಲಯ ಪ್ರಧಾನ ಕಾರ್ಯದರ್ಶಿ ರಮಣಿ, ಜಿಲ್ಲಾ ಸಮಿತಿ ಸದಸ್ಯರಾದ ರಾಧ, ಗಿರಿಜಾ ಸಹಿತ ಸಂಘಟನೆಯ ವಿವಿಧ ಪದಾಧಿಕಾರಿಗಳು ಪಾಲ್ಗೊಂಡರು.

