ಮೂಡುಬಿದಿರೆ: ಹಾಸ್ಟೆಲ್ ಕೊಠಡಿ ತನ್ನ ವಾಸ್ತವ್ಯಕ್ಕೆ ಯೋಗ್ಯವಾಗಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್ ನಿಂದಲೇ ನಾಪತ್ತೆಯಾಗಿರುವ ಪ್ರಕರಣ ಮೂಡುಬಿದಿರೆ ಠಾಣೆಯಲ್ಲಿ ದಾಖಲಾಗಿದೆ. ಮೂಲತಃ ಶ್ರೀಲಂಕಾ ನಿವಾಸಿಯಾಗಿರುವ ಸಟ್ಟಾಂಬಿರಲಗೆ ಡೊನ್ ನಿಮ್ನ ತರುಷಿ ಸೆಬಾಸ್ಟಿಯನ್ ನಾಪತ್ತೆಯಾದ ವಿದ್ಯಾರ್ಥಿನಿ.

26 mood sattambi
ಈಕೆ ಮೂಡುಬಿದಿರೆಯ ಕಾಲೇಜೊಂದರದಲ್ಲಿ ಹೊಟೆಲ್ ಮ್ಯಾನೇಜ್ ಮೆಂಟ್ ವಿದ್ಯಾರ್ಥಿನಿಯಾಗಿದ್ದು ಕಳೆದ ಜುಲೈ 17ರಂದು ತನ್ನ ಹಾಸ್ಟೆಲ್ ವಾಸ್ತವ್ಯದ ಕೊಠಡಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಳು. ಕಳೆದ ಜುಲೈ 25ರಂದು ಹಾಸ್ಟೆಲ್ ನಿಂದ ಕಾಲೇಜಿಗೆ ಹೋಗದೇ ವಿದ್ಯಾರ್ಥಿನಿ ಮಂಗಳೂರು ಮೂಡುಬಿದಿರೆ ರಸ್ತೆಯಲ್ಲಿ ಸಾಗಿರುವ ಬಗ್ಗೆ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಈಕೆ ಯಾವುದಾದರೂ ಹೊಟೇಲ್ನಲ್ಲಿ ತಂಗುವ, ಖಾಸಗಿ ವಿಮಾನ ಯಾನ ಟಿಕೆಟ್ , ವೀಸಾ ಕುರಿತು ಮಾತುಕತೆ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಸುಮಾರು ಐದೂವರೆ ಅಡಿ ಎತ್ತರ ಗೋಧಿ ಮೈಬಣ್ಣ ಹೊಂದಿರುವ ಈಕೆ ಇಂಗ್ಲೀಷ್ ಮತ್ತು ಸಿಂಹಳ ಭಾಷೆ ಬಲ್ಲವಳಾಗಿದ್ದಾಳೆ. ಇವಳ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆ ಯಾ ಆಯುಕ್ತರಿಗೆ ಮಾಹಿತಿ ನೀಡಿ ಸಹಕರಿಸುವಂತೆ ಕೋರಲಾಗಿದೆ.

By suddi9

Leave a Reply

Your email address will not be published. Required fields are marked *