ಬಂಟ್ವಾಳ : ಸಿಂಡಿಕೇಟ್ ಬ್ಯಾಂಕ್ ಬಿ.ಸಿ.ರೋಡ್ ಶಾಖೆಯಲ್ಲಿ ಗ್ರಾಹಕರ ಸಮಾವೇಶ ಕಾರ್ಯಕ್ರಮವು ಬಂಟ್ವಾಳದ ಸ್ವರ್ಣೋದ್ಯಮಿ ಬಿ. ಸುರೇಶ್ ದಾಮೋದರ ಬಾಳಿಗಾ ಅಧ್ಯಕ್ಷತೆಯಲ್ಲಿ ಜರಗಿತು. ಹಿರಿಯ ನಾಗರಿಕ ವಾಸುದೇವ್ ಭಂಡಾರ್ಕರ್ ರವರನ್ನು ಸನ್ಮಾನಿಸಲಾಯಿತು.

ಗ್ರಾಹಕರ ಕುಂದು ಕೊರತೆಗಳ ಮತ್ತು ಬ್ಯಾಂಕಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ಶಾಖಾ ಪ್ರಬಂಧಕ ಅನಿಕೇತ್ ವರ್ಮಾ ಗ್ರಾಹಕರಿಗೆ ಮನವರಿಕೆ ಮಾಡಿಕೊಟ್ಟರು.
ಜಿ.ಅನಂತಪ್ರಭು ವಂದಿಸಿ , ಬಿ.ಮಂಜುನಾಥ ಬಾಳಿಗಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು
