ಮಂಗಳೂರು ಜುಲೈ 25: ಇಂದು ಮುಂಜಾನೆ 9.00ಗಂಟೆಗೆ ಮಂಗಳೂರಿನ ನಂತೂರು ಬಳಿ ಭೀಕರ ರಸ್ತೆ ಆಪಘಾತ ಸಂಭವಿಸಿದೆ . ನಂತೂರು ಕಡೆಯಿಂದ ಬರುತ್ತಿದ್ದ ಸರ್ವೆಸ್ ಬಸ್ಸು ಶಿವಭಾಗ್ ಸಮೀಪ ಬರುತ್ತಿ ದ್ದಂತೆ ಚಾಲಕ ಬ್ರೇಕ್ ಹಾಕಿದರು ಬಸ್ಸು ನಿಲ್ಲದಿದ್ದಾಗ ಚಾಲಕನ ನಿಯಂತ್ರಣ ತಪ್ಪಿ (ಬ್ರೇಕ್ ಫೈಲ್) ಹಲವು ಗಾಡಿಗಳಿಗೆ ಡಿಕ್ಕಿ ಹೊಡೆದು ಪರಿಣಾಮ 5 ಮಂದಿಗೆ ಸಣ್ಣ ಪುಟ್ಟ ಗಾಯಾಗಳಾಗಿದೆ.
ಇದರಲ್ಲಿ ಇಬ್ಬರ ಸ್ಥಿತಿ ತುಂಬ ಚಿಂತಾಜನಕವಾಗಿದ್ದು. ತಕ್ಷಣ ಖಾಸಗಿ ಆಸ್ಫತ್ರೆಗೆ ದಾಖಾಲಿಸಾಲಾಗಿದೆ. ಆಸ್ಫತ್ರೆಗೆ ದಾಖಾಲಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬಸ್ಸು ಬಿ.ಸಿ.ರೋಡ್, ಕೋಳತ್ತಮಜುಲು ಮಾರ್ಗವಾಗಿ ಮಂಗಳೂರಿಗೆ ಬರುತಿದ್ದು ಸುಮಾರು 45ಮಂದಿ ಬಸ್ಸಿನಲ್ಲಿ ಇದ್ದರು ಎಂದು ಅಂದಾಜಿಸಲಾಗಿದೆ. ಬಸ್ಸು ಬ್ರೇಕ್ ಪೈಲ್ ಅಗಿರುವುದು ಗೊತ್ತಾಗಿ ಬಸ್ಸಿನಲ್ಲಿ ಇದ್ದ ಮಹಿಳೆಯೋಬ್ಬರು ಬಸ್ಸಿನಿಂದ ಧುಮಿಕಿರುತ್ತಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುತ್ತಾರೆ. ಕಂಕನಾಡಿ ಪೋಲಿಸರು ಕೇಸ್ ದಾಖಲಿಸಿದ್ದಾರೆ.









