ಬಂಟ್ವಾಳ; ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು ಇದರ ಅಧ್ಯಕ್ಷರಾಗಿ ಮೌನೇಶ ವಿಶ್ವಕರ್ಮ ಪುನರಾಯ್ಕೆಯಾಗಿದ್ದು. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ನಿಶಾಂತ್ ಬಿಲ್ಲಂಪದವು ಆಯ್ಕೆಯಾಗಿದ್ದಾರೆ.
adyaksa karyadarsi
ಗುರುವಾರ ಬಿ.ಸಿ.ರೋಡಿನ ಪ್ರೆಸ್ಕ್ಲಬ್ ನಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದ್ದು , ಕೋಶಾಧಿಕಾರಿಯಾಗಿ ಸಂದೀಪ್ ಸಾಲ್ಯಾನ್, ಉಪಾಧ್ಯಕ್ಷರಾಗಿ ಉದಯಶಂಕರ್ ನೀರ್ಪಾಜೆ , ಜೊತೆಕಾರ್ಯದರ್ಶಿಯಾಗಿ ಕಿಶೋರ್ ಪೆರಾಜೆ ಆಯ್ಕೆಯಾದರು. ರತ್ನದೇವ್ ಪೂಂಜಾಲಕಟ್ಟೆ, ವೆಂಕಟೇಶ್ ಬಂಟ್ವಾಳ್, ಸೂರ್ಯನಾರಾಯಣ ಪೂವಳ, ಗೋಪಾಲ ಅಂಚನ್, ಸುಕುಮಾರ್ ಬಂಟ್ವಾಳ, ಜನಾರ್ಧನ ವಿಟ್ಲ, ಹಮೀದ್ ವಿಟ್ಲ, ಚಂದ್ರಶೇಖರ ಕಲ್ಮಲೆ, ಮಹಮ್ಮದ್ ಆಲಿ ವಿಟ್ಲ, ಪ್ರಶಾಂತ್ ಪೂಂಜಾಲಕಟ್ಟೆ, ಯಾದವ ಅಗ್ರಬೈಲು, ವಾಮನ ಪೂಜಾರಿ, ಚಂದ್ರಹಾಸ ನೂತ್ರಾಡಿ, ವಿಷ್ಣುಗುಪ್ತ ಪುಣಚ ರವರನ್ನು ಸಂಘದ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತಿಯಲ್ಲಿ ಜಿಲ್ಲಾಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಇಂದಾಜೆ ಚುನಾವಣಾಧಿಕಾರಿಯಾಗಿ ಆಯ್ಕೆಪ್ರಕ್ರಿಯೆ ನಡೆಸಿಕೊಟ್ಟರು.

By suddi9

Leave a Reply

Your email address will not be published. Required fields are marked *