ಕಲೆ ಬದುಕನ್ನು ಕಟ್ಟಿಕೊಳ್ಳುವ ವೃತ್ತಿಯಾಗಿ ಮಾರ್ಪಟ್ಟಿದೆ ಎಂದು ಕಲಾವಿದ ಮತ್ತು ಪತ್ರಕರ್ತ ಗೋಪಾಲ್ ಅಂಚನ್ ಹೇಳಿದರು.
ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ಲಲಿತಾ ಕಲಾ ಸಂಘ ಆಯೋಜಿಸಿದ್ದ ಕಲೆ-ಸಂಸ್ಕೃತಿ-ಬದುಕು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತಾನಾಡಿದರು.
PHOTO
ಕಲೆ ಮತ್ತು ಸಂಸ್ಕೃತಿ ಬದುಕಿನ ಅವಿಭಾಜ್ಯ ಅಂಗ. ಕಲೆ ಜಾಗೃತಿಕ ಸಮಾಜದ ಪರಿವರ್ತನೆಗಾಗಿ ಹುಟ್ಟಿಕೊಂಡು ಮನೋರಂಜನೆಯಿಂದ ಕೂಡಿದ ಮೌಲ್ಯಯುತ ಭಾವನೆಯನ್ನು ಉಳಿಸಿ ಬೆಳೆಸಲು ಪ್ರೇರಣೆ ನೀಡುತ್ತದೆ. ಸಮಾಜದ ಸ್ತರಗಳಾದ- ಜಾತಿ, ಮತ, ಧರ್ಮ, ಪಂಥಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಕಲೆಗಿದೆ. ಯುವಪೀಳಿಗೆ ಮನರಂಜನೆ ನೆಪದಲ್ಲಿ ಮೂಲ ಸಂಸ್ಕೃತಿಯನ್ನು ಮರೆತು ಮಾರಾಟದ ವಸ್ತುವಾಗಿ ಬದುಕನ್ನು ರೂಪಿಸುವ ವೃತ್ತಿಯಾಗಿರದೆ ಮೌಲ್ಯಯುತ ಅಂಶಗಳನ್ನು ಸಮಾಜದಲ್ಲಿ ಪಸರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿದರು. ಲಲಿತಾ ಕಲಾ ಸಂಘದ ಅಧ್ಯಕ್ಷೆ ಉಪನ್ಯಾಸಕಿ ಶಾಲಿನಿ ಬಿ. ಅತಿಥಿ ಪರಿಚಯ ಮಾಡಿದರು. ವಿದ್ಯಾರ್ಥಿ ಸೀಮಾ ಮತ್ತು ಪ್ರೀಮಾ ಪ್ರಾರ್ಥಿಸಿದರು. ಸಂಘದ ಉಪಕಾರ್ಯದರ್ಶಿನಿ ಶರಣ್ಯ ಸ್ವಾಗತಿಸಿದರು. ಕಾರ್ಯದರ್ಶಿ ರೇಶ್ಮಾ ಮೋರಾಸ್ ವಂದಿಸಿ, ತೇಜಸ್ವಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *