ಸಾಮಾನ್ಯವಾಗಿ ಹುಡುಗಿಯರು ಯಾವ ಯಾವ ವಿಷಯಕ್ಕೆ ತಕ್ಷಣ ಕೋಪಗೊಳ್ಳುತ್ತಾರೆಂಬ ವಿಷಯ ಹುಡುಗರಿಗೆ ಗೊತ್ತಿರುವುದಿಲ್ಲ. ಕೆಲವು ಹುಡುಗಿಯರು ಕಾರಣವಿಲ್ಲದೆ ಹುಡುಗರಲ್ಲಿ ಮಾತು ಬಿಡುತ್ತಾರೆ ಎಂಬುವುದಕ್ಕೆ ಏಳು ವಿಚಾರಗಳಿವೆ.
1. ನೀನೀಗ ಸ್ವಲ್ಪ ದಪ್ಪ ಆಗಿದ್ದೀಯಾ:
ಸಾಮಾನ್ಯವಾಗಿ ಹುಡುಗರು ಹುಡುಗಿಯರ ಬಳಿ ನೀನು ಈಗ ಸ್ವಲ್ಪ ದಪ್ಪ ಆಗಿದ್ದೀಯಾ ಎಂದು ಸ್ವಲ್ಪ ಛೇಡಿಸಲೆಂದು ಹೇಳಿದರೂ ಹುಡುಗಿ ಮಾತ್ರ ಅದನ್ನು ಮನಸ್ಸಲ್ಲಿ ಗಂಭೀರವಾಗಿ ತೆಗೆದುಕೊಳ್ಳುತ್ತಾಳೆ.
2. ನೀನು ಮತ್ತು ನಿನ್ನ ಅಮ್ಮ ಒಬ್ಬರಿಗೊಬ್ಬರು ಸೇಮ್:
ಹುಡುಗರು ಈ ಮಾತನ್ನು ಹುಡುಗಿಯರ ಮೇಲೆ ಅಭಿಮಾನದಿಂದ ಹೇಳುತ್ತಾರೆ. ಆದರೆ ಹುಡುಗಿಯರು ಮಾತ್ರ ಅದನ್ನು ಅಥರ್ೈಸುವುದು ಮಾತ್ರ ಬೇರೆಯದೇ ರೀತಿಯಲ್ಲಿ. ಯಾಕೆಂದರೆ ಅಮ್ಮನಂತೆ ಆಂಟಿಯಂತೆ ಕಾಣಲು ಇಷ್ಟವಿರುವುದಿಲ್ಲ. ತನ್ನ ಹೊಟ್ಟೆ ಉರಿಸಲೆಂದೇ ಈ ಮಾತನ್ನು ಹೇಳಿದ್ದಾನೆ ಎಂದು ಆಕೆ ತಪ್ಪಾಗಿ ಅಥರ್ೈಸುವ ಸಾದ್ಯತೆ ಇದೆ.
3. ಈ ಡ್ರೆಸ್ ನಿನ್ ಅಮ್ಮನದ್ದಾ?
ಹುಡುಗಿ ಜಾಲಿ ಮೂಡಲಿರುತ್ತಾಳೆ. ತನ್ನ ಹುಡುಗನನ್ನು ಇಂಪ್ರೆಸ್ ಮಾಡಲೆಂದು ಸುಂದರವಾದ ಡ್ರೆಸ್ ಹಾಕಿಕೊಂಡು ಬರುತ್ತಿರುತ್ತಾಳೆ. ಅಷ್ಟರಲ್ಲಿ ಹುಡುಗ ಆಕೆಯ ಡ್ರೆಸ್ಸನ್ನು ಹೊಗಳುವುದನ್ನು ಬಿಟ್ಟು `ಹೇಯ್ ಈ ಡ್ರೆಸ್ ನಿನ್ ಅಮ್ಮನದ್ದಾ? ಎಂಬ ಪ್ರಶ್ನೆ ಬಾಣದಂತೆ ತಲುಪುತ್ತದೆ. ಈ ಸಂದರ್ಭ ಹುಡುಗಿಗೆಗೆ ಕೆಂಡದಂತ ಕೋಪ ಬರುತ್ತದೆ.
4. ನೀನು ನನಗಿಂತ ದೊಡ್ಡವಳಾಗಿ ಕಾಣ್ತೀಯಾ:
ಸಾಮಾನ್ಯವಾಗಿ ಹುಡುಗಿಯರಿಗೆ ತನ್ನ ವಯಸ್ಸಿನ ಬಗ್ಗೆ ಯಾರೂ ಕೂಡಾ ಪ್ರಶ್ನೆ ಕೇಳಬಾರದೆಂಬ ಮನಸ್ಸಿರುತ್ತದೆ. ಹುಡುಗಿಯರ ವಯಸ್ಸೆಷ್ಟು ಎಂದು ಕೇಳಬಾರದೆಂಬ ಗಾದೆ ಮಾತು ಚಾಲ್ತಿಯಲ್ಲಿದೆ. ಈ ಸಂದರ್ಭದಲ್ಲಿ ಹುಡುಗ ನೀನು ನನಗಿಂತ ದೊಡ್ಡವಳಾಗಿ ಕಾಣಿದ್ದೀಯಾ ಎಂದಾಕ್ಷಣ ಅವಳ ಸಿಟ್ಟು ನೆತ್ತಿಗೇರಿರುತ್ತದೆ.
5. ನೀನು ಆ ತರದ ಹುಡುಗಿ ಅಂತ ನನಗೆ ಗೊತ್ತೇ ಇರ್ಲಿಲ್ಲ
ಸಾಮಾನ್ಯವಾಗಿ ಲೈಂಗಿಕತೆಯ ಬಗ್ಗೆ ಹುಡುಗ ಮತ್ತು ಹುಡುಗರಲ್ಲಿ ಸಾಮಾನ್ಯವಾಗಿ ಆಸಕ್ತಿ ಇರುತ್ತದೆ. ಕೆಲವೊದು ಸಂದರ್ಭದಲ್ಲಿ ಆಕೆಗೆ ಮೂಡು ಬಂದು ಆಕೆ ಅದರ ಬಗ್ಗೆ ಹುಡುಗರಲ್ಲಿ ಪ್ರಸ್ತಾಪಿಸಬಹುದು. ಆಗ ಹುಡುಗ ನೀನು ಆತರದ ಹುಡುಗಿ ಅಂತ ಗೊತ್ತೇ ಇರ್ಲಿಲ್ಲ ಎಂದು ಹೇಳಿದಾಗ ತನ್ನನ್ನು ಹುಡುಗ ತಪ್ಪಾಗಿ ಅಥರ್ೈಸಿದ್ದಾನೆಂದು ಮುನಿಸಿಕೊಳ್ಳಬಹುದು.
6. ನೀನೂ ಗೊತ್ತು ನಿನ್ ಅಮ್ಮನ ಬಗ್ಗೆನೂ ಗೊತ್ತು
ಕೆಲವೊಂದು ಸಂದರ್ಭದಲ್ಲಿ ಹುಡುಗ ಹುಡುಗಿಯರಲ್ಲಿ ಕೋಪಿಸಿಕೊಳ್ಳುತ್ತಾನೆ. ಆಗ ಆತ ಸ್ವಗತವೆಂಬಂತೆ ನೀನೂ ಗೊತ್ತು ನಿನ್ ಅಮ್ಮನ ಬಗ್ಗೆನೂ ಗೊತ್ತು ಎಂದು ಹೇಳಿದರೆ ಸಾಕು ಸಂಬಂಧ ಅಲ್ಲಿಗೆ ಕೊನೆಗೊಳ್ಳುತ್ತದೆ.
7. ನೀನು ಹುಡುಗನ ತರ ಮಾಡುತ್ತಿ
ಸಾಮಾನ್ಯವಾಗಿ ಹುಡುಗಿಯರು ಹುಡುಗರ ಡ್ರೆಸ್ ಹಾಕಿಕೊಂಡರೂ ಹುಡುಗರ ತರ ಕಾಣಲು ಇಷ್ಟವಾಗುವುದಿಲ್ಲ. ಯಾಕೆಂದರೆ ತಾನು ಹುಡುಗರ ತರ ಒರಟಾಗಿದ್ದು ಕೋಮಲತೆ ಹೋಗಿದೆ ಎಂದು ಭಾವಿಸಿ ಆತ ಅದಕ್ಕೆ ಅರ್ಥ ಕಲ್ಪಿಸಿ ಹೇಳುತ್ತಿದ್ದಾನೆಂದು ಭಾವಿಸುತ್ತಾಳೆ. ಆದ್ದರಿಂದ ಹುಡುಗರು ಹುಡುಗಿಯರಲ್ಲಿ ನೀನು ಹುಡುಹರ ತರ ಕಾಣುತ್ತಿ ಎಂದು ಹೇಳಿದಾಗ ಕೋಪಿಸಿಕೊಳ್ಳುತ್ತಾಳೆ.

