ಬಿಹಾರ: ರಾಷ್ಟ್ರೀಯ ದಿನಪತ್ರಿಕೆಯಾದ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಸುದ್ದಿ ಭಾರತೀಯ ಹಳ್ಳಿಗರ ಸಮಸ್ಯೆಯ ಇನ್ನೊಂದು ಮುಖವನ್ನು ಪರಿಚಯಿಸಿದೆ. ಕೈಮು ಪರ್ವತದ ಮಧ್ಯದಲ್ಲಿರುವ ಈ ಎರಡು ಹಳ್ಳಿಗಳು ವಿಶ್ವದ ದೊಡ್ಡ ಪ್ರಜಾಪ್ರಭುತ್ವದ ಅಡಿಯಲ್ಲಿದ್ದು ಸಹ ಜಗತ್ತಿನಿಂದ ಮರೆಮಾಚಲ್ಪಟ್ಟಿವೆ. ಈ ಎರಡು ಹಳ್ಳಿಗಳು ದೂರದರ್ಶನದಲ್ಲೂ ನಾವೆಂದು ನೋಡಿರದ ಭಾರತದ ವಿಭಿನ್ನ ಒಳನೋಟವನ್ನು ನೀಡುತ್ತವೆ. 

modi

ಈ ವಿಶೇಷ ವರದಿ ಹಳ್ಳಿಯಲ್ಲಿ 25 ರಿಂದ 40 ವಯಸ್ಸಿನ 100 ಪುರುಷರು ಇದ್ದಾರೆ ಎಂಬುದನ್ನು ತಿಳಿಸುತ್ತದೆ. ಗ್ರಾಮ ರಸ್ತೆಯನ್ನು ಹೊಂದಿಲ್ಲ ಮತ್ತು ಹಳ್ಳಿಗರು ವಿಶ್ವದ ಉಳಿದ ಪ್ರದೇಶದೊಡನೆ ಸಂಪರ್ಕ ಪಡೆಯಲು ಶಿಲಾವೃತವಾಗಿರುವ ದೀರ್ಘ ದಾರಿಯನ್ನು ಸವೆಸಬೇಕು. ಹಾಗಾಗಿ ಉಳಿದ ಯಾವುದೇ ಹಳ್ಳಿಯವರು ತಮ್ಮ ಹೆಣ್ಣು ಮಕ್ಕಳನ್ನು ಈ ತಲುಪಲಾಗದ ಹಳ್ಳಿಗೆ ಕಳುಹಿಸಲು ಸಿದ್ಧರಾಗುತ್ತಿಲ್ಲ.ಮುಗ್ಧ ಹಳ್ಳಿಗರು ಹತ್ತಿರದ ಜಾರ್ಖಂಡ್‌ನಿಂದ ‘ವಧುಗಳನ್ನು ನೋಡುತ್ತಿದ್ದಾರೆ.
ಮದುವೆಯಾಗದಿರುವ ಸಮಸ್ಯೆ ಒಂದೇ ಇವರು ಎದುರಿಸುತ್ತಿರುವ ಸಮಸ್ಯೆಯಲ್ಲ. ಮದುವೆಯಾಗಿ ಬಂದ ಹುಡುಗಿಯರು ಈ ನಿರಾಶ್ರಿತ ಭೂಪ್ರದೇಶದಲ್ಲಿ ಇರಲು ಬಯಸದೇ ತವರಿಗೆ ಹಿಂತಿರುಗುತ್ತಾರೆ. ಆರೋಗ್ಯ ಕೆಟ್ಟ ಸಮಯದಲ್ಲಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತೆಗೆದುಕೊಂಡು ಸಾಧ್ಯವಾಗದೇ ಅನೇಕ ಮರಣಗಳು ಸಂಭವಿಸಿವೆ. ಬಹುತೇಕ ಹಳ್ಳಿಗರು ತಮ್ಮ ವಿವಾಹದ ಕನಸನ್ನು ಪೂರೈಸಲು, ರಸ್ತೆ ಸೌಕರ್ಯವಿರುವ ಇತರ ಹಳ್ಳಿಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಮೋದಿ ಪ್ರಧಾನಿಯಾದರೆ ಈ ಹಳ್ಳಿಯ ಸಮಸ್ಯೆ ನಿವಾರಣೆಯಾಗಬಹುದು ಎಂಬುದು ಇಲ್ಲಿಯ ಸ್ಥಳೀಯರ ನಂಬಿಕೆ. ಹಾಗಾಗಿ ಇಲ್ಲಿಯ ಜನರು ಮೋದಿ ದಾರಿಯನ್ನು ಕಾದು ಕುಳಿತಿದ್ದಾರೆ.

By suddi9

Leave a Reply

Your email address will not be published. Required fields are marked *