ಮೂಡುಬಿದಿರೆ : ಸುರಿದ ಅಬ್ಬರದ ಮಳೆ, ಬೀಸಿದ ಗಾಳಿಯನ್ನು ಲೆಕ್ಕಿಸದೆ ಕಿರಿಯ ಪುಟಾಣಿಗಳ ಸಹಿತ ಹಿರಿಯರು ಗದ್ದೆಯ ಕೆಸರಿನಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ “ಕೆಸರ್ಡ್ ಒಂಜಿ ದಿನ”ವನ್ನು ಯಶಸ್ವಿಗೊಳಿಸಿದ ಕಾರ್ಯಕ್ರಮವು ನಿಡ್ಡೋಡಿ ಮಾಣಿಲ ಮನೆಯ ಬಾಕಿಮಾರು ಗದ್ದೆಯಲ್ಲಿ ರವಿವಾರ ನಡೆಯಿತು.

ಭಾರತೀಯ ಕಥೋಲಿಕ್ ಯುವ ಸಂಚಲನ ನಿಡ್ಡೋಡಿ ಘಟಕ, ಲಯನ್ಸ್ ಕ್ಲಬ್ ನೀರುಡೆ-ಮುಚ್ಚೂರು, ವ್ಯವಸಾಯ ಸೇವಾ ಸಹಕಾರಿ ಸಂಘ ಕಲ್ಲಮುಂಡ್ಕೂರು, “ಕಲ್ಪಸಿರಿ” ಶಟಲ್ ಕ್ಲಬ್ ಕಲ್ಲಮುಂಡ್ಕೂರು, ರಿಕ್ಷಾ-ಟೂರಿಸ್ಟ್-ಓಮಿನಿ ಚಾಲಕ-ಮಾಲಕರ ಸಂಘ ಕಲ್ಲಮುಂಡ್ಕೂರು, ಕುದ್ರಿಪದವು ಹಾಗೂ ಕೊಟ್ರಪಾಡಿ ಫ್ರೆಂಡ್ಸ್, ಓಕಾರ ಸ್ಪೋಟ್ಸ್ ಕ್ಲಬ್ ಕಲ್ಲಮುಂಡ್ಕೂರು, ನಿಡ್ಡೋಡಿ ಪ್ರೆಂಡ್ಸ್ ಮತ್ತು ಬಿಲ್ಲವರ ಸಂಘ ಕಲ್ಲಮುಂಡ್ಕೂರು ಇವುಗಳ ಆಶ್ರಯದಲ್ಲಿ ನಡೆದ “ಕೆಸರ್ಡ್ ಒಂಜಿ ದಿನ” ಕಾರ್ಯಕ್ರಮಕ್ಕೆ ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಚಾಲನೆಯನ್ನು ನೀಡಿದರು.
ನಂತರ ಮಾತನಾಡಿದ ಸಚಿವರು ಹಿಂದಿನ ದಿನಗಳಲ್ಲಿ ಈಗಿನಂತೆ ಕೆಸರ್ಡ್ ಒಂಜಿ ದಿನ ಒಂದು ದಿನಕ್ಕೆ ಸೀಮಿತವಾಗಿರಲಿಲ್ಲ ಬದಲಾಗಿ ಪ್ರತಿಯೊಬ್ಬರು ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದುದರಿಂದ ಪ್ರತಿಯೊಂದು ದಿನವನ್ನು ಗದ್ದೆಯ ಕೆಸರಿನಲ್ಲಿ ಕಳೆಯುತ್ತಿದ್ದರು. ಇಂದಿನ ಮಕ್ಕಳಿಗೆ ಕೃಷಿಯ ಬಗ್ಗೆ ಏನೂ ಗೊತ್ತಿಲ್ಲ ಗದ್ದೆ, ಗೊಬ್ಬರ, ಬತ್ತದ ಕೃಷಿ, ಅಕ್ಕಿ ಇವುಗಳ ಬಗ್ಗೆ ತಿಳುವಳಿಕೆಯನ್ನು ಮೂಡಿಸಲು ಇದೀಗ ಗದ್ದೆಯಲ್ಲಿ ಆಟೋಟ ಸ್ಪಧರ್ೆಗಳನ್ನು ಏರ್ಪಡಿಸುವ ಮೂಲಕ ಕೃಷಿಯ ಮಹತ್ವವನ್ನು ಹೇಳಿಕೊಡಲಾಗುತ್ತಿದೆ ಎಂದು ಹೇಳಿದರು.
ದಾಮಸ್ಕಟ್ಟೆ ಎಸ್.ವಿ.ಡಿ. ಕಿರೆಮ್ನ ಧರ್ಮಗುರು ಮರ್ವಿನ್ ನೊರೊಹ್ನಾ ಆಶೀರ್ವಚನ ನೀಡಿದರು. ಮಂಗಳೂರಿನ ಸಹಾಯಕ ಕ್ರೀಡಾಧಿಕಾರಿ ಲಿಲ್ಲಿ ಪಾಯಸ್, ಎಪಿಎಂಸಿ ಸದಸ್ಯ ಜೊಸ್ಸಿ ಮಿನೇಜಸ್, ಕೃಷಿಕ ಎಂ.ಸುಭಾಶ್ಚಂದ್ರ ಪಡಿವಾಳ್, ಮಾಣಿಲ ಶ್ರೀಧರ ಶೆಟ್ಟಿ, ವರದರಾಯ ಕಾಮತ್ ಕಲ್ಲಮುಂಡ್ಕೂರು, ಯದುನಂದ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಲ್ಲಮುಂಡ್ಕೂರು ಗ್ರಾ.ಪಂನ ಮಾಜಿ ಅಧ್ಯಕ್ಷ ಜೋಕಿಂ ಕೊರೆಯಾ, ರೋಯ್ಸ್ಟನ್ ಡಿ.ಸೋಜಾ, ವಿಲ್ಸನ್ ನೋರೊನ್ಹಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂತೋಷ್ ಲೂವಿಸ್ ಸ್ವಾಗತಿಸಿದರು. ಶಿಕ್ಷಕ ಗುರು ಎಂ.ಪಿ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಕುಂದರ್ ಸಹಕರಿಸಿದರು.
ಸ್ಪರ್ಧೆಗಳು: ನಿಧಿಶೋಧ, ಹಗ್ಗಜಗ್ಗಾಟ, ಕೆಸರುಗದ್ದೆ ಓಟ, ತಪ್ಪಂಗಾಯಿ, ಮುಮ್ಮುಖ-ಹಿಮ್ಮುಖ, ದಂಪತಿಗಳಿಗೆ ಓಟ, ಬುಟ್ಟಿಯಲ್ಲಿ ತೆಂಗು ಹೊತ್ತುಕೊಂಡು ಓಟ, ಸೊಪ್ಪಾಟ ಹಾಗೂ ಇನ್ನಿತರ ಮನರಂಜನಾ ಸ್ಪರ್ಧೇಗಳು ಈ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮದಲ್ಲಿ ಗಮನಸೆಳೆದವು
ಅವಿಭಜಿತ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಇಲ್ಲ
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ರೈತರು ಆತ್ಮಹತ್ಯೆಯನ್ನು ಮಾಡುತ್ತಿದ್ದಾರೆ ಆದರೆ ಅವಿಭಜಿತ ದ.ಕ, ಉಡುಪಿ ಜಿಲ್ಲೆಗಳಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಇಲ್ಲಿನ ರೈತರು ಕೃಷಿಯನ್ನು ಮಾತ್ರ ಅವಲಂಬಿಸದೆ ಇತರ ಕೆಲಸಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ಇಲ್ಲಿನ ರೈತರು ಕೃಷಿಗಾಗಿ ಹೆಚ್ಚಿನ ಸಾಲ ಮಾಡಲ್ಲ. ಆತ್ಮಸ್ಥೈರ್ಯದಿಂದ ಬದುಕುತ್ತಿದ್ದಾರೆ. ಸರಕಾರವೂ ರೈತರ ಬಗ್ಗೆ ಹೆಚ್ಚಿನ ಕಾಳಜಿಂನ್ನು ವಹಿಸುತ್ತಿದೆ- ಸಚಿವ ಅಭಯಚಂದ್ರ
