ಮೂಡುಬಿದಿರೆ : ಇಲ್ಲಿಗೆ ಸಮೀಪದ ಲಾಡಿ ವಾರ್ಡ್ ನಂಬರ್ 9 ಮತ್ತು 11ರಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಫ್ಲಾಟ್ಗಳಿಂದ ಕೊಳಚೆ ನೀರನ್ನು ನಾಗಬ್ರಹ್ಮ ದೇವಸ್ಥಾನದ ಬಳಿ ಇರುವ ಪರಂಬೋಕು ತೋಡಿಗೆ ಬಿಡುತ್ತಿರುವ ಬಗ್ಗೆ ಪುರಸಭಾ ಅಧ್ಯಕ್ಷೆ ರೂಪಾ ಶೆಟ್ಟಿ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ ಮತ್ತು ವಾರ್ಡ್ ಸದಸ್ಯೆ ಪ್ರೇಮಾ ಸಾಲ್ಯಾನ್ ಅವರು ಸೋಮವಾರ ಪರಿಶೀಲನೆ ನಡೆಸಿದರು.


ಕಳೆದ ಮೂರು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಮೂಡುಬಿದಿರೆ ಪರಿಸರದಲ್ಲಿರುವ ಕೆಲವು ಮನೆಗಳಿಗೆ ಮತ್ತು ಚರಂಡಿಗಳಲ್ಲಿ ನೀರು ತುಂಬಿಕೊಂಡು ಸಮಸ್ಯೆಗಳು ಎದುರಾಗಿದ್ದವು ಅಲ್ಲದೆ ಕೆಲವು ಕಡೆಗಳಲ್ಲಿ ಮಳೆಯಿಂದಾಗಿ ಆವರಣಗೋಡೆಗಳು, ದಾರಿಗೆ ಮರಗಳು ಕುಸಿದು ಬಿದ್ದಿದ್ದವು ಈ ಬಗ್ಗೆ ಪುರಸಭೆಯ ಅಧ್ಯಕ್ಷೆ ಅವರು ರೂಪಾ ಶೆಟ್ಟಿ ಅವರು ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ ಸಹಿತ ವಾಡರ್್ಗಳ ಸದಸ್ಯರೊಂದಿಗೆ ಸೋಮವಾರ ಸ್ಥಳಕ್ಕೆ ಭೇಟಿ ನೀಡಿದರು.
ಅದರಂತೆ ಸದಸ್ಯೆ ಪ್ರೇಮಾ ಸಾಲ್ಯಾನ್ ಅವರ ವಾರ್ಡ್ ಲಾಡಿಯಲ್ಲಿ ಅನಧಿಕೃತವಾಗಿ ಲೇಔಟ್ ಮಾಡಿರುವ ಪ್ರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿ ಸರಿಯಾದ ರಸ್ತೆಗಳಿಲ್ಲದೆಯೆ ಸುಮಾರು 50ಕ್ಕೂ ಅಧಿಕ ಮನೆಗಳಿದ್ದು ಆ ಮನೆಗಳ ಮತ್ತು ಫ್ಲಾಟ್ಗಳ ಬಾತ್ರೂಂ ಮತ್ತು ಶೌಚಾಲಯಗಳ ನೀರನ್ನು ಪೈಪು ಮೂಲಕ ಮತ್ತು ಓಪನ್ ಆಗಿ ಬಯಲಿಗೆ ಬಿಟ್ಟು ಅಲ್ಲಿಂದ ಅದನ್ನು ಪರಂಬೋಕು ತೋಡಿಗೆ ಬಿಡುತ್ತಿರುವುದರ ಬಗ್ಗೆ ಪತ್ತೆ ಹಚ್ಚಿದರು. ಈ ಬಗ್ಗೆ ಅಲ್ಲಿರುವ ಮನೆ ಪ್ಲಾಟ್ಗಳಲ್ಲಿ ವಾಸಿಸುತ್ತಿರುವವರ ಬಳಿ ವಿಚಾರಿಸಿದಾಗ ಫ್ಲಾಟ್ ಮನೆಗಳನ್ನು ನಿರ್ಮಿಸಿಕೊಟ್ಟವರು ಊರಿನಲ್ಲಿ ಇಲ್ಲ ಎಂದು ಉತ್ತರಿಸಿದರಲ್ಲದೆ “ತಮ್ಮ ಫ್ಲಾಟಿನಿಂದ ಮಾತ್ರ ಕೊಳಚೆ ನೀರು ಹೋಗುತ್ತಿಲ್ಲ ಪಕ್ಕದಲ್ಲೇ ಇರುವ ಆರ್.ಬಿ. ಫ್ಲಾಟಿನಿಂದಲೂ ಕೊಳಚೆ ನೀರು ಪರಿಸರದ ತೋಡುಗಳಲ್ಲಿ ಹಾದು ಹೋಗುತ್ತಿದೆ ಎಂದು ಆರೋಪಿಸಿದರಲ್ಲದೆ ಇಲ್ಲಿಗೆ ಸರಿಯಾದ ರಸ್ತೆ, ದಾರಿದೀಪ, ಮತ್ತು ಮೋರಿಯ ವ್ಯವಸ್ಥೆಯನ್ನು ಪುರಸಭೆ ಮಾಡಿಕೊಡಬೇಕೆಂದು ಹೇಳಿದರು.
ತಾವು ಪುರಸಭೆಯ ನಿಯಮದಂತೆ ಮನೆಗಳನ್ನು ನಿರ್ಮಿಸಿಲ್ಲ. ಮೂಲಭೂತ ಸೌಕರ್ಯಗಳನ್ನು ಸರಿಯಾದ ರೀತಿಯಲ್ಲಿ ಮಾಡಬೇಕಾದುದು ಫ್ಲಾಟ್ ಓನರ್ಗಳ ಕೆಲಸ ಅಲ್ಲದೆ ತಾವು ಯಾರಿಂದ ಮನೆಗಳನ್ನು ಪಡೆದುಕೊಂಡಿರುವಿರೋ ಅವರುಗಳ ಬಳಿಯೇ ಇತರ ಸೌಕರ್ಯಗಳನ್ನು ಮಾಡಿಕೊಡುವಂತೆ ಕೇಳಿ ಹೊರತು ಪುರಸಭೆಯಲ್ಲಿ ಅಷ್ಟೊಂದು ಹಣವಿಲ್ಲವೆಂದು ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ ಮತ್ತು ವಾರ್ಡ್ ಸದಸ್ಯೆ ಪ್ರೇಮಾ ಸಾಲ್ಯಾನ್ ತಿಳಿಸಿದರಲ್ಲದೆ ಕಾನೂನು ಬಾಹಿರವಾಗಿ ಫ್ಲಾಟ್ ನಿರ್ಮಿಸಿರುವುದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದರು.
ಈ ಎಲ್ಲಾ ಸಮಸ್ಯೆಗಳ ಬಗ್ಗೆ ಮುಖ್ಯಾಧಿಕಾರಿಗೆ ದೂರು ನೀಡಿದ ಅಧ್ಯಕ್ಷೆ ರೂಪಾ ಶೆಟ್ಟಿ ಅವರು ಅಧಿಕಾತರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಸೂಚಿಸಿದಾಗ ಸ್ಥಳ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವ ಭರವಸೆಯನ್ನು ಮುಖ್ಯಾಧಿಕಾರಿ ಶೀನ ನಾಯ್ಕ್ ತಿಳಿಸಿದರು. ಈ ಸಂದರ್ಭದಲ್ಲಿ ಸದಸ್ಯ ಕೊರಗಪ್ಪ ಉಪಸ್ಥಿತರಿದ್ದರು.
ಬಾಕ್ಸ್
ಅಮರಶ್ರೀ ಥಿಯೇಟರ್ ಬಳಿ ಮಳೆಗೆ ನೀರು ತುಂಬಿಕೊಂಡಿರುವುದರ ಬಗ್ಗೆ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅವರು ಪುರಸಭೆಯ ಅಧ್ಯಕ್ಷರ ಬಳಿ ಗಮನ ಸೆಳೆದರು ಅಲ್ಲದೆ ನೀರು ನಿಲ್ಲದ ಹರಿದು ಹೋಗುವಂತೆ ಸೂಕ್ತವಾಗಿ ಚರಂಡಿಯ ವ್ಯವಸ್ಥೆಯನ್ನು ಮಾಡುವಂತೆ ಹೇಳಿದರು.

