ಸುದ್ದಿ 9ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೆಂದ್ರದಲ್ಲಿ ಎ.10ರಂದು ಬೆಳಿಗ್ಗೆ 9ರಿಂದ 12.30ರವರೆಗೆ ಉಚಿತ ವೈದ್ಯಕೀಯ ಶಿಬಿರವನ್ನು ಏರ್ಪಡಿಸಲಾಗಿದೆ. ದಂತ ತಜ್ಞ ವೈದ್ಯರು, ಕಣ್ಣಿನ ತಜ್ಞ ವೈದ್ಯರು, ಇ.ಎನ್.ಟಿ. ತಜ್ಞ ವೈದ್ಯರು, ಚರ್ಮರೋಗ ತಜ್ಞ ವೈದ್ಯರು, ಮಕ್ಕಳ, ಮಹಿಳೆಯರ ರೋಗ ತಜ್ಞ ವೈದ್ಯರು, ಸಾಮಾನ್ಯ ರೋಗ ತಜ್ಞವೈದ್ಯರು ಭಾಗವಹಿಸಲಿದ್ದು ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ಡಾ ಪ್ರಭಾಕರ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *