ಬಂಟ್ವಾಳ:    ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮಜಿ ವೀರಕಂಭ ಇಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಕಂಭ ಒಕ್ಕೂಟದ ವತಿಯಿಂದ  ಜು.16  ಗುರುವಾರ ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣಾ ಮಾಹಿತಿ ಕಾರ್ಯಾಗಾರ ಹಾಗೂ ಶಾಲಾ ವನ ಮಹೋತ್ಸವ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಮೋನಪ್ಪರವರು ವಹಿಸಿದ್ದರು.

DSC_2666 (1)ಶಾಲೆಯ ವನಮಹೋತ್ಸವ ಕಾರ್ಯಕ್ರಮದಲ್ಲಿ ಹಣ್ಣಿನ ಗಿಡವನ್ನು ನೆಟ್ಟು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ತಾಲೂಕು ಕೃಷಿ ಅಧಿಕಾರಿಯವರಾದ ಶ್ರೀಯುತ ನಾರಾಯಣರವರು ಪರಿಸರದ ಕಾಳಜಿಯು ವಿದ್ಯಾರ್ಥಿಮಟ್ಟದಲ್ಲೇ ಬೆಳೆಯ ಬೇಕು, ಪರಿಸರವನ್ನು ಪ್ರೀತಿಸುವ ಉಳಿಸಿ ಬೆಳೆಸುವ ಕೆಲಸವು ನಿತ್ಯ ಜೀವನದಲ್ಲಿ ಒಂದು ಭಾಗವಾಗಿ ಬೆಳೆದಾಗ ಅದು ಕಲಿವಿನ ಜೊತೆಗೆ ಬದುಕನ್ನೇ ಕಟ್ಟಿ ಕೊಡುತ್ತದೆ, ಶಾಲಾ ಪರಿಸರದಿಂದಲೇ ಇಂತಹ ಉತ್ತಮ ಗುಣಗಳು ಬೆಳೆಯಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಕಂಭ ಒಕ್ಕೂಟದ ಅಧ್ಯಕ್ಷರಾಗಿರುವ ಶ್ರೀಯುತ ಹರೀಶ್ ಬಂಗೇರರವರು ಪರಿಸರದ ಒಳಿತು-ಕೆಡುಕುಗಳು ನಮ್ಮ ನಿತ್ಯ ಜೀವನಕ್ಕೆ ಸಂಬಂಧಿಸಿದ್ದಾಗಿದ್ದು ಅಸಮತೋಲನದ ಬೇಜವಾಬ್ದಾರಿಯು ಮಾನವನಿಂದಲೇ ನಡೆಯುತ್ತಿದೆ. ಸಕಾರಣ ಗಳಿಂದ ಮುನ್ನೆಚ್ಚರಿಕೆಯನ್ನು ಹೊಂದದಿದ್ದಲ್ಲಿ ಮುಂದಿನ ಅನಾಹುತಗಳು ನಮ್ಮ ಕಾರಣಗಳಿಂದಾಗಿ ನಡೆಯುತ್ತವೆ. ಈ ನಿಟ್ಟಿನಲ್ಲಿ ಪರಿಸರದ ಕಾಳಜಿಯನ್ನು ಹೊಂದಿದಾಗ ಮಾತ್ರ ಅದು ನಮಗೆ ಸಹಕರಿಸುತ್ತದೆ ಎಂದರು.
ಒಕ್ಕೂಟದ ವತಿಯಿಂದ ಶಾಲಾ ಮಕ್ಕಳಿಗೆ ಪರಿಸರದ ಕುರಿತಾದ ಭಾಷಣ, ಪ್ರಬಂಧ, (ಎಲೆಗಳನ್ನು ಗುರುತಿಸುವುದು), ಪರಿಸರ ಗೀತೆ ಹಾಗೂ ಮುಂತಾದ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ವೀರಕಂಭ ಒಕ್ಕೂಟದ ಸೇವಾ ಪ್ರತಿನಿಧಿ ಶ್ರೀಮತಿ ಗಿರಿಜಾ, ಉಪಾಧ್ಯಕ್ಷೆ ಶ್ರೀಮತಿ ಸೌಮ್ಯ, ಕಾರ್ಯದರ್ಶಿ ಕುಮಾರಿ ಸೌಮ್ಯ ಬೋಳಂತೂರು ಒಕ್ಕೂಟದ ಸೇವಾ ಪ್ರತಿನಿಧಿ ಕುಮಾರಿ ವನಿತಾರವರು ಭಾಗವಹಿಸಿದ್ದರು.
ಮುಖ್ಯ ಶಿಕ್ಷಕರಾದ ಶ್ರೀಯುತ ನಾರಾಯಣ ಪೂಜಾರಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ಸಿಸಿಲಿಯಾ ಬಹುಮಾನಿತರ ಪಟ್ಟಿ ವಾಚಿಸಿದರು. ವೀರಕಂಭ ಒಕ್ಕೂಟದ ಸೇವಾಪ್ರತಿನಿಧಿ ಶ್ರೀಮತಿ ಗಿರಿಜಾ ಧನ್ಯವಾದವನ್ನಿತ್ತರು. ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಗೀತಾ ಹಾಗೂ ಕುಮಾರಿ ಜ್ಯೋತಿ ಸಹಕರಿಸಿದರು.

By Suddi9

Leave a Reply

Your email address will not be published. Required fields are marked *