ಮೂಡುಬಿದರೆ: ಜುಲೈ13: ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಉತ್ತೇಜನ ನೀಡುವುದು ಮಹತ್ಕಾರ್ಯ. ಈ ಮೂಲಕ ಸಮಾಜದಲ್ಲಿ ಇನ್ನಷ್ಟು ಸೇವೆಗೈಯ್ಯಲು ಪ್ರೇರಣೆಯಾಗುತ್ತದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜೆಸಿಂತಾ ಆಲ್ಫ್ರೆಡ್ ನುಡಿದರು.
ಅವರು ಭಾನುವಾರ ಕಥೋಲಿಕ್ ಸಭಾ ಮೂಡುಬಿದರೆ ವಲಯ ಸಮಿತಿಯ ವತಿಯಿಂದ ಕೋಪರ್ುಸ್ ಕ್ರಿಸ್ತಿ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದ ಪ್ರತಿಭಾ ಪುರಸ್ಕಾರ ಮತ್ತು ಗ್ರಾ.ಪಂ. ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಉದ್ಘಾಟನೆ ನೆರವೇರಿಸಿದ ಕಥೋಲಿಕ್ ಸಭಾದ ವಲಯ ಆಧ್ಯಾತ್ಮಿಕ ನಿದರ್ೇಶಕ ರೆ.ಫಾ ಆಸ್ಟಿನ್ ಪೀಟರ್ ಪೆರಿಸ್ ಅವರು ‘ಪ್ರತಿಭಾನ್ವಿತರ ಪ್ರತಿಭೆ ನಮ್ಮ ದೇಶಕ್ಕೆ ಸಿಗಬೇಕು. ಪ್ರತಿಭಾ ಪಲಾಯನ ಒಳ್ಳೆಯದಲ್ಲ. ಸಮಾಜದ ಮುಖ್ಯವಾಹಿನಿಗೆ ಯುವಜನರ ಕೊಡುಗೆ ಸಿಗುವಂತಾಗಬೇಕು. ಯುವಜನರಲ್ಲಿ ತಾವೂ ಜವಾಬ್ದಾರಿಯುತ ಸ್ಥಾನಕ್ಕೇರಬೇಕೆಂಬ ಹಂಬಲವಿರಬೇಕು. ಪಂಚಾಯಿತಿ ಸದಸ್ಯರಾಗಿ ಗೆದ್ದು ಬಂದವರಿಗೆ ಸಮುದಾಯಮಟ್ಟದಲ್ಲಿ ಸೇವೆ ಮಾಡುವ ಅವಕಾಶ ಲಭಿಸಿದ್ದು, ಜನರ ಶ್ರೇಯೋಭಿವೃದ್ಧಿಗಾಗಿ ನಿರಂತರ ಶ್ರಮಿಸುವುದರಿಂದ ಸೇವಾ ಮನೋಭಾವದ ತತ್ವಗಳು ತಮ್ಮ ಮೂಲಕ ಜನಸಾಮಾನ್ಯರಲ್ಲೂ ಹಬ್ಬುವಂತಾಗಲಿ ಎಂದು ಹಾರೈಸಿದರು.

mbd_july13_11 (1)

mbd_july13_11 (2)

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ವಲಯದಲ್ಲೇ ಅತ್ಯುತ್ತಮ ಸಾಧನೆ ಮಾಡಿದ ಜೇನ್ ರಶ್ಮಿ ಫೆನರ್ಾಂಡಿಸ್, ನಿಶಾ ಡಿಸೋಜಾ, ಶಿಬಾನಿ ಡಿಕೋಸ್ತಾ, ವಿಲ್ಸನ್ ಜೋಯೆಲ್ ಸಿಕ್ವೇರಾ, ಡೇಲ್ ಪಿಂಟೊ, ಹೆನಿಟಾ ಲೋಬೊ, ಅಶ್ಮಿತಾ ರೆನಿಟ ಅವರನ್ನು ಗೌರವಿಸಲಾಯಿತು.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ 4 ಬಾರಿ ಕೋರ್ಪರೇಟರ್ ಆಗಿ ಜನಮೆಚ್ಚುಗೆ ಪಡೆದು ಮೇಯರ್ ಸ್ಥಾನ ಪಡೆದ ಜೆಸಿಂತಾ ಆಲ್ಫ್ರೆಡ್ ಅವರನ್ನು ಕಥೋಲಿಕ್ ಸಭಾ ವತಿಯಿಂದ ಸನ್ಮಾನಿಸಲಾಯಿತು.
ಮೂಡುಬಿದಿರೆ ವಲಯದ ಹೊಸಬೆಟ್ಟು ಚಚರ್್ಗೆ ಧರ್ಮಗುರುಗಳಾಗಿ ಆಗಮಿಸಿರುವ ವಂ.ಸಂತೋಷ್ ರೊಡ್ರಿಗಸ್ ಹಾಗೂ ಇತ್ತೀಚೆಗೆ ಘೋಷಿತವಾಗಿರುವ ಸಾವೆರಪುರ ಚಚರ್್ಗೆ ಧರ್ಮಗುರುಗಳಾಗಿ ನೇಮಕವಾಗಿರುವ ವಂ. ರಾಕೇಶ್ ಮಥಾಯಸ್ ಅವರನ್ನು ಕಥೋಲಿಕ್ ಸಭಾ ವತಿಯಿಂದ ಗೌರವಿಸಲಾಯಿತು.
ಗ್ರಾ.ಪಂ ಚುನಾವಣೆಯಲ್ಲಿ ಗೆದ್ದು ಬಂದ ಇರುವೈಲ್ ಪಂಚಾಯತ್ನ ವಲೇರಿಯನ್ ಕುಟಿನ್ಹಾ, ಬ್ರಿಜಿತ್ ಕುಟಿನ್ಹಾ, ಹೊಸಬೆಟ್ಟು ಪಂಚಾಯಿತಿ ಮನೋಜ್ ಅಲ್ವಾರಿಸ್, ಮೈಕಲ್ ನೊರೊನ್ಹಾ, ಫ್ಲಾವಿಯಾ ಮೆಂಡಿಸ್, ಪುತ್ತಿಗೆ ಪಂಚಾಯಿತಿ ಪ್ರೆಸಿಲ್ಲಾ ಸಿಕ್ವೇರಾ, ಪಾಲಡ್ಕ ಪಂಚಾಯತ್ನ ಪ್ರವೀಣ್ ಸಿಕ್ವೇರಾ, ಫೆಲ್ಸಿ ಪಿಂಟೊ, ಬೆಳುವಾಯಿ ಪಂಚಾಯತ್ನ ವಿಲ್ಮಾ ಲವೀನಾ, ಫ್ಲೋರಿನ್ ಡಿಸೋಜಾ, ರೋಲ್ಸನ್ ಪಾಯ್ಸ್, ಪ್ರವೀಣ್ ಮಸ್ಕರೇನಸ್, ಶಿತರ್ಾಡಿ ಪಂಚಾಯತ್ನ ವಿವಿಯನ್ ಪಿಂಟೊ, ಪ್ರವೀಣ್, ಕ್ರಿಸ್ತಿನ್ ಪಿಂಟೊ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಹಿರಿಯ ಪಂಚಾಯತ್ ಸದಸ್ಯ ವಲೇರಿಯನ್ ಕುಟಿನ್ಹಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಥೋಲಿಕ್ ಸಭಾದ ವಲಯಾಧ್ಯಕ್ಷ ಮೆಲ್ವಿನ್ ಡಿಕೋಸ್ತಾ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ರೋಟರಿ ಶಾಲೆಯ ಪ್ರಾಂಶುಪಾಲ ವಿನ್ಸೆಂಟ್ ಡಿಕೋಸ್ತಾ ಉಪಸ್ಥಿತರಿದ್ದರು. ಕಥೋಲಿಕ್ ಸಭಾ ಕೇಂದ್ರೀಯ ಮಾಜಿ ಉಪಾಧ್ಯಕ್ಷ ಅನಿಲ್ ಲೋಬೊ ಫೆಮರ್ಾಯ್, ಸಹ ಖಜಾಂಚಿ ರೊನಾಲ್ಡ್ ಸೆರಾವೋ, ವಲಯ ನಿಕಟಪೂರ್ವ ಅಧ್ಯಕ್ಷ ಲ್ಯಾನ್ಸಿ ಶಿತರ್ಾಡಿ ಉಪಸ್ಥಿತರಿದ್ದರು.
ಕಥೋಲಿಕ್ ಸಭಾ ಮೂಡುಬಿದರೆ ವಲಯದ ಕಾರ್ಯದಶರ್ಿ ಆಲ್ವಿನ್ ಮಿನೇಜಸ್ ಧನ್ಯವಾದ ಸಮಿಪರ್ಿಸಿದರು. ಗೋಡ್ವಿನ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.
…………

By suddi9

Leave a Reply

Your email address will not be published. Required fields are marked *