ಸುದ್ದಿ9ಪಡುಪೆರಾರ: ಕಳೆದ ಎರಡು-ಮೂರು ತಿಂಗಳಿಂದ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಪಡುಪೆರಾರ ಗ್ರಾಮ ಪಂಚಾಯಿತಿ ವಿಫಲವಾಗಿರುವ ಬಗ್ಗೆ ಇಲ್ಲಿನ ಅಂಬಿಕಾನಗರ ಪ್ರದೇಶದ ಸುಮಾರು 150ಮನೆಗಳ ನಿವಾಸಿಗಳು ಖಾಲಿ ಕೊಡಪಾನ, ಕಡ್ಯ, ಬಾಲ್ದಿ ಹಿಡಿದು ಸೋಮವಾರ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಿದರು.
ಹೌದು ವರ್ಷವೊಂದರಲ್ಲಿ 12ಬಾರಿ ರಿಪೇರಿಯಾದರೂ ನೀರು ಪೂರೈಸಲಾಗದ ದುಸ್ಥಿತಿ ಇಲ್ಲಿನ ಪಂಪಿಗಿದೆ. ಈ ವಿಚಾರದ ಬಗ್ಗೆ ಎರಡು ವರ್ಷದ ಹಿಂದೆ  ಹಲವು ಬಾರಿ ಎಚ್ಚರಿಸಿದರು ಆ ನಂತರದಲ್ಲೂ ರಿಪೇರಿಯ ಗೀಳು ಅದೇ ರೀತಿ ಮುಂದುವರಿದು ಬಿಲ್ಲು ಯಥೇಚ್ಚ ಖರ್ಚಾಗಿದೆ. ಆದರೆ ಈ ಭಾಗದ ಜನರಿಗೆ ನೀರು ಪೂರೈಕೆ ಮಾತ್ರ ಸಮರ್ಪಕವಾಗಿಲ್ಲ. ಎಂದು ಗ್ರಾಮಸ್ಥರು ತಮ್ಮ ಅಳಲು ಹೇಳಿಕೊಂಡರು.
ರೈಟಿಂಗ್ನಲ್ಲಿ ಬರೆದುಕೊಡಿ…!
ಈ ಮಧ್ಯೆ ಕೆಲ ಗ್ರಾಮಸ್ಥರು ನಮಗೆ ರಾಜಕೀಯ ವ್ಯಕ್ತಿಗಳ ಭರವಸೆ ಬೇಡ. ನೀವು ಸಮಸ್ಯೆ ಬಗೆಹರಿಸಿ ತಕ್ಷಣ ನೀರು ಸಪ್ಲೈ ಮಾಡೋ ಬಗ್ಗೆ ‘ರೈಡಿಂಗ್ನಲ್ಲಿ ಬರೆದುಕೊಡಿ’ ಎಂದು ಪಂಚಾಯಿತಿ ಕಾರ್ಯದಶರ್ಿ ಎಂ.ವಿ.ಮುರುನಾಳ್ ಅವರಲ್ಲಿ ಪಟ್ಟುಹಿಡಿದಾಗ ಮೇಲಧಿಕಾರಿಗಳ ಸಲಹೆಯಂತೆ ಕೊನೆಗೂ ಕಾರ್ಯದರ್ಶಿಯ ವರು ‘ರೈಟಿಂಗ್ನಲ್ಲಿ ಬರೆದುಕೊಟ್ಟ’ ಬಳಿಕ ತಕ್ಷಣದಿಂದ ಟ್ಯಾಂಕರ್ನಲ್ಲಿ ನೀರು ಪೂರೈಕೆಗೆ ವ್ಯವಸ್ಥೆಗೊಳಿಸಲಾಯಿತು.
ಈ ಮಧ್ಯೆ ಸಿಕ್ಕಿತು ಚಾನ್ಸ್ ಎಂದು ರಾಜಕೀಯ ಪಕ್ಷಗಳ ಪ್ರಮುಖರು ‘ಇಶ್ಯೂ’ ಒಳಗೆ ಮೂಗು ತುರಿಸಲೆತ್ನಿಸಿದರು. ಕೆಲಕಾಲ ಮಾತಿದೆ ಚಕಮಕಿಯೂ ನಡೆಯಿತು. ಧರಣಿಯಲ್ಲಿ ಮಹಿಳೆಯರೇ ಹೆಚ್ಚಾಗಿದ್ಧರು. ಬಜಪೆ ಪೋಲಿಸರು ಸ್ಥಳಕ್ಕೆ ಆಗಮಿಸಿದ್ಧರು. ಇಷ್ಟೆಲ್ಲಾ ಅದ್ರೂ ಗ್ರಾ.ಪಂ.ಅಧ್ಯಕ್ಷರು ಮಾತ್ರ ಅಲ್ಲಿಗೆ ಅಗಮಿಸಲೇ ಇಲ್ಲ.

7vm paduperar (1)

7vm paduperar

By suddi9

Leave a Reply

Your email address will not be published. Required fields are marked *