ಬಂಟ್ವಾಳ: ಪುರಸಭಾ ವ್ಯಾಪ್ತಿಯ ಬಿ.ಕಸ್ಬಾ ಗ್ರಾಮದ 5ನೇ ವಾರ್ಡ್ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ನಿಯರ ಕಾಲೇಜು ಶಿಕ್ಷಣ ಹಾಗೂ ಉನ್ನತ ವ್ಯಾಸಾಂಗಕ್ಕಾಗಿ 1.16 ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಜಕ್ರಿಬೆಟ್ಟು, ಹೊಸ್ಮಾರು, ರಾಯರಚಾವಡಿ ನಿವಾಸಿಗಳಾದ ಪೂಜಾಶ್ರೀ, ಪ್ರಗತಿ ಶೆಟ್ಟಿ, ರಚನಾ, ರಂಜನಾ ಹಾಗೂ ಅನಿಷಾ ಅವರಿಗೆ ಪುರಸಭಾ ಸದಸ್ಯ ಪ್ರವೀಣ್ ಬಿ ಅವರು ಚೆಕ್ ವಿತರಿಸಿದರು. ಶ್ರೀನಿವಾಸ್ ಶೆಟ್ಟಿ, ಜನಾರ್ದನ ಕುಲಾಲ್, ಯತಿನ್ ಕುಲಾಲ್, ಪ್ರದೀಪ್ ದೈವಗುಡ್ಡೆ, ರೋಶನ್, ನಿತ್ಯಾನಂದ ಕೈಕುಂಜ ಮತ್ತಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

