ಮೂಡುಬಿದರೆ: ಗ್ರಾ.ಪಂ ಚುನಾವಣೆಯಲ್ಲಿ ಜಯಗಳಿಸಿದ ಕ್ರೈಸ್ತ ಅಭ್ಯರ್ಥಿಗಳಿಗೆ ಜುಲೈ 12ರಂದು ಸಂಜೆ 3.30ಕ್ಕೆ ಮೂಡುಬಿದರೆ ಕೋಪರ್ಸ್ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ.
ಮೂಡುಬಿದರೆ ವಲಯ ಕಥೋಲಿಕ್ ಸಭಾದ ನಿರ್ದೇಶಕ ರೆ.ಫಾ ಆಸ್ಟಿನ್ ಪೀಟರ್ ಪೆರಿಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮೂಡುಬಿದರೆ ವಲಯ ಕಥೋಲಿಕ್ ಸಭಾದ ಅಧ್ಯಕ್ಷ ಮೆಲ್ವಿನ್ ಡಿಕೋಸ್ತಾ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜೆಸಿಂತಾ ಆಲ್ಫ್ರೆಡ್ ಹಾಗೂ ಕಥೋಲಿಕ್ ಸಭಾ ಮಂಗಳೂರು ವಲಯದ ಅಧ್ಯಕ್ಷ ಅನಿಲ್ ಲೋಬೊ ಫೆರ್ಮಮಯ್ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಕಥೋಲಿಕ್ ಸಭಾದ ಸಾರ್ವಜನಿಕ ಸಂಪರ್ಕಧಿಕಾರಿ ಜೋಯ್ಲಸ್ ಡಿಸೋಜಾ ತಾಕೊಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
