‘ಇತರ ದ್ರಾವಿಡ ಭಾಷೆಗಳಂತೆಯೇ ತುಳುವಿಗೂ ಲಿಪಿಯಿದೆ. ಆದರೆ ತುಳು ಮಾತ್ರ ಕನ್ನಡ ಲಿಪಿಯ ಮೂಲಕವೇ ಬೆಳೆದಿದೆ. ಇದಕ್ಕೆ ಕಾರಣವಾದ ಸನ್ನಿವೇಶವೇ ಅಧ್ಯಯನ ಯೋಗ್ಯ ವಿಷಯ. ಪ್ರಾಚೀನ ಕೃತಿ ಹಾಗೂ ಶಾಸನಗಳ ಸಂಶೋಧನೆಗೆ ತುಳು ಲಿಪಿಯ ಕಲಿಕೆ ಅನಿವಾರ್ಯ’ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ತುಳು ರಂಗ ಕಲಾವಿದ ಸುಭಾಶ್ಚಂದ್ರ ಪಡಿವಾಳ್ ನುಡಿದರು. ಅವರು ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ವತಿಯಿಂದ ನಡೆದ ತುಳು ಲಿಪಿ ಕಾರ್ಯಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.

DSC_0141

DSC_0137
ಸಂಪನ್ಮೂಲ ವ್ಯಕ್ತಿರಾಗಿ ಭಾಗವಹಿಸಿದ ತುಳು ಲಿಪಿ ತಜ್ಞ ಬಿ.ತಮ್ಮಯ್ಯ ಮಾತನಾಡಿ ತುಳು ಲಿಪಿ ಕಲಿಕೆಯು ಇಂದಿನ ತೀರ ಅನಿವಾರ್ಯ ಸಂಗತಿಯಲ್ಲ. ಆದರೆ ಹವ್ಯಾಸದ ನೆಲೆಯಲ್ಲಿ ಇಂದು ಎಲ್ಲೆಡೆ ತುಳು ಲಿಪಿ ಕಲಿಕೆಗೆ ಆಸಕ್ತಿ ತೋರಿಸುತ್ತಿರುವುದು ಆಶಾದಾಯಕ ಸಂಗತಿ. ತುಳುವಿನ ಬೇರುಗಳನ್ನು ಬಲಪಡಿಸಲು, ತುಳುವಿಗೆ ಶಾಸ್ತ್ರೀಯ ಸ್ಥಾನ ಸಿಗುವಂತಾಗಲೂ ಈ ಕಲಿಕಾ ಕಾರ್ಯಗಾರ ಸಹಾಯಕವಾಗಬಹುದು ಎಂದರು. ಕಾರ್ಯಾಕ್ರಮದ ಸಂಯೋಜಕ ಡಾ.ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು. ವಿದ್ಯಾರ್ಥಿ  ಅತಿಥ್ ಸ್ವಾಗತಿಸಿದರು. ಕು| ರಶ್ಮಿತಾ ನಿರೂಪಿಸಿ, ರಕ್ಷಿತಾ ವಂದಿಸಿದರು.

By suddi9

Leave a Reply

Your email address will not be published. Required fields are marked *