ಮೂಡುಬಿದಿರೆ:ಇಲ್ಲಿಗೆ ಮಹಾಯೋಜನೆ ಬೇಕು ಎಂದು 2012ರಲ್ಲಿ ಮೂಡಾ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಸರಕಾರಕ್ಕೆ ಪ್ರಸ್ತಾವನೆ ಕಳಿಸಿದ್ದು ಆಗಿನ ಮೂಡಾದಲ್ಲಿದ್ದ ಬಿಜೆಪಿ ಸದಸ್ಯರು. ಈಗ ಅದೇ ಬಿಜೆಪಿ ಪಕ್ಷ ಮಹಾಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ನಡೆಸುತ್ತಿದೆ ಎಂದು ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ ಹೇಳಿದರು.

12mdb1ಶನಿವಾರ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮತನಾಡಿದರು.
ಬಿಜೆಪಿ ಮೂಡಾದ ಕುರ್ಚಿ ಆಸೆಗಾಗಿ ಈ ತಂತ್ರ ಉಪಯೋಗಿಸಿದೆ. 2012ರ ಜನಗಣತಿ ಪ್ರಕಾರ ರೂಪುಗೊಂಡ ಈ ಜನವಿರೋಧಿ ಯೋಜನೆಯನ್ನು ಕಾಂಗ್ರೆಸ್ ಒಪ್ಪುವುದಿಲ್ಲ. ಇದನ್ನು ಸರಳೀಕರಿಸಿ ಅನುಷ್ಠಾನಕ್ಕೆ ಚಿಂತನೆ ನಡೆಸಿದೆ. ಸಾರ್ವಜನಿಕರು ಇದರ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ನಗರ ಯೋಜನಾ ಪ್ರಾಧಿಕಾರ ರಚನೆಯಾಗಬೇಕಾದರೆ 50 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರಕೂಡದು. ಮೂಡುಬಿದಿರೆ ಪಟ್ಟಣದಲ್ಲಿ ಆವಾಗ 29 ಸಾವಿರ ಜನಸಂಖ್ಯೆ ಇದ್ದುದರಿಂದ ಸಂಖ್ಯೆ ಭರ್ತಿ  ಮಾಡಲು ಹತ್ತಿರದ ಪಡುಮಾರ್ನಡು, ಬೆಳುವಾಯಿ, ಪುತ್ತಿಗೆ ಮತ್ತು ಹೊಸಬೆಟ್ಟು ಗ್ರಾಮದ ಕೆಲ ಪ್ರದೇಶಗಳನ್ನು ಈ ವ್ಯಾಪ್ತಿಗೆ ಸೇರಿಸಿ ಅಲ್ಲಿನ ಜನರಿಗು ಬಿಜೆಪಿ ಸಮಸ್ಯೆ ತಂದಿದೆ.
ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ 2012ರಲ್ಲಿ ನಡೆಸಿದ ಸಭೆಯಲ್ಲಿ ಮಹಾಯೋಜನೆಗೆ ರೂಪುರೇಷೆ ಸಿದ್ಧಪಡಿಸಲು ಮೆ.ವಿಷನ್ ಸಲ್ಯೂಷನ್ ಹುಬ್ಬಳ್ಳಿ ಇವರಿಗೆ ರೂ 9.45 ಲಕ್ಷಕ್ಕೆ ಕಾರ್ಯಾದೇಶ ನೀಡಿ ಒಂದು ಕಂತಿನ 4,25,250 ರೂ ಅನ್ನು ಪಾವತಿಸಲಾಗಿದೆ. ಈಗ ಅದೇ ಬಿಜೆಪಿ ಪಕ್ಷ ಮೂಡಾದ ಮಹಾಯೋಜನೆಗೆ ಕಾಂಗ್ರೆಸ್ ಕಾರಣ ಎಂದು ಅಪಪ್ರಚಾರ ನಡೆಸುತ್ತಿರುವುದು ಹಾಸ್ಯಾಸ್ಪದ. ಮಹಾಯೋಜನೆ ಬಿಜೆಪಿ ಕೂಸು ಇದರಿಂದ ಜನರಿಗಾಗುವ ಸಮಸ್ಯೆಗೆ ಬಿಜೆಪಿಯೆ ಕಾರಣ ಎಂದವರು ಹೇಳಿದರು.
ಮೂಡಾ ಸದಸ್ಯರಾದ ಸುರೇಶ್ ಪ್ರಭು, ರವಿಪ್ರಸಾದ್ ಉಪಾಧ್ಯಾಯ, ಕಾಂಗ್ರೆಸ್ ಕ್ಷೇತ್ರಾಧ್ಯಕ್ಷ ಮೇಘನಾಥ ಶೆಟ್ಟಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *