ಮೂಡುಬಿದರೆ: ಬೆಳಾಲು ಗ್ರಾಮದ ಮುಂಡ್ರೊಟ್ಟು ಮನೆಯ ಸುಧಾಕರ ಗೌಡ ಯಾನೆ ಸುಮಧುರ (27)ಎಂಬವರು ಜುಲೈ 6 ರಿಂದ ಕಾಣೆಯಾಗಿದ್ದಾರೆಂದು ಅವರ ತಂದೆ ಸುಬ್ಬಣ್ಣ ಗೌಡ ಮೂಡುಬಿದರೆ ಪೊಲೀಸು ಠಾಣೆಗೆ ದೂರು ನೀಡಿದ್ದಾರೆ.

ಮೂಡುಬಿದರೆ ಖಾಸಗಿ ಹೊಟೇಲ್ನಲ್ಲಿ ಕಳೆದ 3 ವರ್ಷದಿಂದ ಅಡುಗೆ ಕೆಲಸ ಮಾಡಿಕೊಂಡಿದ್ದ ಸುಧಾಕರ, ಜುಲೈ 6 ರಂದು ಬೆಳಿಗ್ಗೆ 7 ಗಂಟೆಗೆ ಮನೆಗೆ ಹೋಗುವುದಾಗಿ ಹೊಟೇಲ್ ಮಾಲಕರಲ್ಲಿ ತಿಳಿಸಿದ್ದಾರೆ. ಆದರೆ ಮನೆಗೂ ಬಾರದೆ, ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ. ಈತನ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ.
ಚಹರೆ:ಎತ್ತರ- 5.6 ಅಡಿ, ಗೋಧಿ ಮೈಬಣ್ಣ, ಕಪ್ಪು ಗುಂಗುರು ತಲೆಕೂದಲು, ಉಬ್ಬು ಹಲ್ಲು , ಮೂಗಿನ ಮೇಲೆ ಹಳೆಯ ಗಾಯದ ಗುರುತು ಇದೆ. ಬಿಳಿಬಣ್ಣದ ಪ್ಯಾಂಟ್, ಕೆಂಪು ಬಣ್ಣದ ಚೆಕ್ಸ್ ಶರ್ಟ್ ಧರಿಸಿದ್ದು , 10 ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದು, ಕನ್ನಡ ತುಳು ಬಲ್ಲವನಾಗಿದ್ದಾರೆ. ಗುಟ್ಕಾ ಹಾಗೂ ಅಮಲು ಪದಾರ್ಥ ಸೇವಿಸುವ ಅಭ್ಯಾಸವಿದೆ.
ಈತನ ಪತ್ತೆಯಾದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:
ಪೊಲೀಸು ಆಯುಕ್ತರು: 0824 – 2220801, 2220800.
ಮೂಡುಬಿದರೆ ಪೊಲೀಸು ಠಾಣೆ – 08258-236333, 9480805357, 9480802314
