ಸುಮಾರು 2 ತಿಂಗಳುಗಳಿಂದ ವಿಟ್ಲದಲ್ಲಿ ವಿದ್ಯುತ್ ಕಣ್ಣು ಮುಚ್ಚಾಲೆಯಾಡುತ್ತಿದ್ದರೂ ವಿಟ್ಲದ ಮೇಗಿನಪೇಟೆಯ ಹರಿಜನ ಕಾಲನಿಯ ಜಾಣ ಮತ್ತು ಗೋಪಿ ದಂಪತಿಗಳು ವಿದ್ಯುತ್ ಸಮಸ್ಯೆಯ ತೊಂದರೆ ಅನುಭವಿಸಲೇ ಇಲ್ಲ. ಕಾರಣ 2 ತಿಂಗಳ ಹಿಂದೆ ಅವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಮೀಟರ್ ಸಮೇತ ಎಲ್ಲಾ ವೈರಿಂಗ್ಗಳು ಸಂಪೂರ್ಣ ಸುಟ್ಟು ಕರಕಲಾಗಿ ಮನೆಯು ಭಾಗಶಃ ಹಾನಿಗೊಳಗಾಗಿತ್ತು. ತೀರಾ ಬಡ ಕುಟುಂಬವಾದ ಕಾರಣ ಸ್ವಂತ ಖರ್ಚು ನಲ್ಲಿ ವಿದ್ಯುತ್ ಪುನರ್ಸ್ಥಾಪಿಸಲು ಅವರ ಆರ್ಥಿಕ ವ್ಯವಸ್ಥೆಯು ಚೆನ್ನಾಗಿರಲಿಲ್ಲ.
ಈ ಪರಿಸ್ಥಿತಿಯು ವಿಟ್ಲ ವಿ ಹಿಂ ಪ ದ ಗಮನಕ್ಕೆ ಬಂದುದರಿಂದ, ವಿ ಹಿಂ ಪದ ವತಿಯಿಂದ ಅದರ ಖರ್ಚನ್ನು ಭರಿಸಿ ಪದಾಧಿಕಾರಿಗಳು ಅವರ ಸಮಸ್ಯೆಗೆ ಸ್ಪಂದಿಸಿ ಮನೆಗೆ ವಿದ್ಯುತ್ ಪುನರ್ ಕಲ್ಪಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದು ಕುಟುಂಬವು ಕತ್ತಲೆಯಲ್ಲಿ ಕಾಲ ಕಳೆಯುವುದನ್ನು ದೂರ ಮಾಡಿದೆ. ಈ ಸಂದರ್ಭ ವಿ ಹಿಂ ಪ ವಿಟ್ಲ ಪ್ರಖಂಡ ಅಧ್ಯಕ್ಷ ಆನಂದ ಕಲ್ಲಕಟ್ಟ, ಪ್ರಧಾನ ಕಾರ್ಯದಶರ್ಿ ಗೋವರ್ಧನ ಕುಮಾರ್ ಇಡ್ಯಾಳ ವಿಟ್ಲ ಮತ್ತು ನೋಣಯ್ಯ ಪೂಜಾರಿ ಕಲ್ಲಕಟ್ಟ ಉಪಸ್ಥಿತರಿದ್ದರು.
