ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹವ್ಯಾಸಿ ಯಕ್ಷ ಬಳಗ ವಿಟ್ಲ ಇವರಿಂದ `ಶರಸೇತು ಬಂಧನ’ ಯಕ್ಷಗಾನ ತಾಳ ಮದ್ದಳೆ ಜರಗಿತು. ಕಾರ್ಯಕ್ರಮವನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಕೆ ದೀಪ ಬೆಳಗಿಸಿ ಉದ್ಘಾಟಿಸಿದರು.
ಹಿಮ್ಮೇಳದಲ್ಲಿ ಶ್ರೀಪತಿ ನಾಯಕ್ ಅಜೇರು, ಮೋನಪ್ಪ ಸೇರಾಜೆ, ಅರವಿಂದ ಆಚಾರ್ಯ ಮಾಣಿಲ, ಕುಮಾರ್ ಆಚಾರ್ಯ ವಿಟ್ಲ, ಮುಮ್ಮೇಳದಲ್ಲಿ ಮಳಿ ಲಕ್ಷ್ಮೀನರಸಿಂಹ ಭಟ್, ಪೂರ್ಲಪ್ಪಾಡಿ ಈಶ್ವರ ಭಟ್, ನೀರ್ಕಜೆ ಈಶ್ವರ ಭಟ್ ಸಹಕರಿಸಿದರು
