ಬಂಟ್ವಾಳ: ವಿದ್ಯಾರ್ಥಿ ಯಾದವನು ಕೇವಲ ಜ್ಞಾನ ಭಂಡಾರ ಪಡೆದರೆ ಸಾಲದು. ಪಡೆದ ಜ್ಞಾನವನ್ನು ಪ್ರಾಯೋಗಿಕವಾಗಿ, ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವುದು ಮುಖ್ಯ. ಈ ಕುರಿತ ಸೂಕ್ತ ತರಬೇತಿಯನ್ನು ಪ್ರತಿ ವಿದ್ಯಾರ್ಥಿ ಪಡೆದುಕೊಳ್ಳುವುದು ಮುಖ್ಯ ಎಂದು ಸಿಯಾನ್ ಕೌಶಲ್ಯ ಅಭಿವೃದ್ಧಿ ತರಬೇತಿ ಸಂಸ್ಥೆ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪವನ್ ಕುಮಾರ್ ಹೇಳಿದರು.

ಅವರು ಇಂದು ಬಂಟ್ವಾಳ ಎಸ್.ವಿ.ಎಸ್ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿ ಗಳಿಗಾಗಿ ನಡೆದ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದ ಆಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಮಾತನಾಡಿ ಬೌದ್ಧಿಕ ವಿಕಸನದೊಂದಿಗೆ ಪಡೆದ ಜ್ಞಾನವನ್ನು ರೂಡಿಸಿಕೊಳ್ಳುವುದು ಮುಖ್ಯ. ಅದಕ್ಕೆ ಸೂಕ್ತ ತರಬೇತಿಯು ಉತ್ತಮ ಇಂತಹ ತರಬೇತಿಗಳು ಉದ್ಯೋಗ ಪಡೆಯುವಲ್ಲಿ ಪ್ರಮುಖ್ಯ ಪಾತ್ರ ವಹಿಸುತ್ತದೆ ಎಂದರು.
ಕಾರ್ಯಕ್ರಮದ ಸಂಯೋಜಕಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಅಖಿಲಾ ಪೈ ಸ್ವಾಗತಿಸಿದರು. ಉಪನ್ಯಾಸಕಿ ಉಲ್ಲೇಖಾ ಜೈನ್ ವಂದಿಸಿದರು. ಸಿಯಾನ್ ಸಂಸ್ಥೆಯ ಆಡಳಿತ ನಿರ್ದೇಶಕ ಅವಿನಾಶ್ ಕುಮಾರ್ ವೇದಿಕೆಯಲ್ಲಿದ್ದರು.
