ಆಧುನಿಕ ಯುಗದಲ್ಲಿ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ನಾವು ಬಹಳ ಕ್ಷಿಷ್ಟತೆ ಮತ್ತು ಸವಾಲುಗಳನ್ನು ಎದುರಿಸುತ್ತೇವೆ. ನೂತನ ತಂತ್ರಜ್ಞಾನದ ಬಳಕೆ ಕಛೇರಿಗಳಲ್ಲಿ ಈಗ ಅನಿವಾರ್ಯವಾಗಿದೆ. ಆ ಬಗ್ಗೆ ಆಡಳಿತಾತ್ಮಕ ಕಛೇರಿ ಸಿಬ್ಬಂದಿಗಳಿಗೆ ತರಬೇತಿ, ಕಾರ್ಯಗಾರಗಳು ಅವಶ್ಯಕ. ಪ್ರತಿಯೊಬ್ಬ ಸಿಬ್ಬಂದಿ ತನಗೆ ವಹಿಸಿದ ಕಾರ್ಯವನ್ನು ನಿಗದಿತವಾಗಿ ಮಾಡಿ ಮುಗಿಸಬೇಕು ಎಂದು ಪ್ರೊ. ಶಂಕರ್ಭಟ್, ವಿಶಾಂತ ಪ್ರಾಂಶುಪಾಲರು ಎಸ್.ವಿ.ಎಸ್.ಕಾಲೇಜು, ಬಂಟ್ವಾಳ ನುಡಿದರು.
ಅವರು ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು ಬಂಟ್ವಾಳ ಇಲ್ಲಿ ನಡೆದ ಯುಜಿಸಿ ಪ್ರಾಯೋಜಿತ ಒಂದು ದಿನದ ರಾಜ್ಯ ಮಟ್ಟದ ಆಡಳಿತಾತ್ಮಕ ಸಿಬ್ಬಂದಿಗಳ ಕಾರ್ಯಗಾರ ಆಡಳಿತ ನಿರ್ವಹಣೆಯಲ್ಲಿ ನೂತನ ಪರಿಕಲ್ಪನೆಗಳು ಎಂಬುವುದನ್ನು ಉದ್ಘಾಟಿಸುತ್ತಾ ಮಾತನಾಡಿದರು.

ಕಾರ್ಯಗಾರದ ಮುಖ್ಯ ಅತಿಥಿಯಾದ ನಿವೃತ್ತ ಪ್ರಾಂಶುಪಾಲ ಡಾ| ಸೀತಾರಾಮ ಮಯ್ಯ ಅವರು ಮಾತನಾಡುತ್ತಾ ಆಡಳಿತಾತ್ಮಕ ಸಿಬ್ಬಂದಿ ಪ್ರತಿಯೊಬ್ಬರೂ ಅರ್ಹತೆಯನ್ನು ಕಡ್ಡಾಯವಾಗಿ ಗಳಿಸಿಕೊಳ್ಳುವುದು ಅವರ ಕರ್ತವ್ಯವಾಗಿದೆ. ನೂತನ ತಂತ್ರ ಜ್ಞಾನಕ್ಕೆ ಸಂಬಂಧಪಟ್ಟ ಎಲ್ಲಾ ವಿಚಾರಗಳೂ ಕಛೇರಿಗೆ ಸಿಬ್ಬಂದಿಗೆ ತಿಳಿದಿರಬೇಕು. ಹಾಗಿದಲ್ಲಿ ಮಾತ್ರ ಕಾಲೇಜಿನ ಬೆಳವಣಿಗೆ ಸಾಧ್ಯ ಎಂದವರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಸಂಚಾಲಕರಾದ ಶ್ರೀ ಕೂಡಿಗೆ ಪ್ರಕಾಶ್ ಶೆಣೈ ವಹಿಸಿದ್ದರು. ವೇದಿಕೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಖಾಸಗಿ ಮತ್ತು ಅನುದಾನಿತ ಕಾಲೇಜು ಶಿಕ್ಷಕೇತರ ಸಂಘದ ಅಧ್ಯಕ್ಷ ಶ್ರೀ ವಿಕ್ಟರ್ ಫೆರ್ನಂಡಿಸ್, ಕಾರ್ಯದರ್ಶಿ ರೋಕಿ ಜಿ. ರೋಬೊ. ಎಸ್.ವಿ.ಎಸ್. ಕಾಲೇಜಿನ ಕಛೇರಿ ಅಧೀಕ್ಷಕರಾದ ಶ್ರೀ ಚೆನ್ನಪ್ಪ ಮೇರಾ ಎಂ. ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಸ್ವಾಗತಿಸಿ, ಭೌತಶಾಸ್ತ್ರ ವಿಭಾಗದ ಸಹಾಯಕರಾದ ಶ್ರೀ ಜಿ.ಎನ್.ನೋಣಯ್ಯ ವಂದಿಸಿದರು. ಕಛೇರಿ ಸಹಾಯಕಿ ಕು| ಪ್ರಿಯ ಹೆಗ್ಡೆ, ಕಛೇರಿ ಸಿಬ್ಬಂದಿ ಶ್ರೀ ರಾದೇಶ್ ಕುಮಾರ್ ಬಿ. ಕಾರ್ಯಕ್ರಮವನ್ನು ನಿರ್ವಹಿಸಿದರು.
