ಮೂಡುಬಿದಿರೆ: ಶುಚಿತ್ವ ಕಾಯಿದುಕೊಳ್ಳದ ಹಿನ್ನೆಲೆಯಲ್ಲಿ ಇಲ್ಲಿನ ಅಯ್ಯಂಗಾರ್ ಬೇಕರಿಯ ತಿಂಡಿ ತಯಾರಿಕಾ ಕೇಂದ್ರಕ್ಕೆ ಗುರುವಾರ ದಾಳಿ ನಡೆಸಿದ ಪುರಸಭೆ ಅಧಿಕಾರಿಗಳು ಅಂಗಡಿಗೆ ಬೀಗ ಹಾಕಿದ್ದಾರೆ.
ಮಾರುಕಟ್ಟೆ ಹಿಂಬದಿಯ ಕೋಣೆಯೊಂದರಲ್ಲಿ ಅಯ್ಯಂಗಾರ್ ಬೇಕರಿಗೆ ಸೇರಿದ ಬೇಕರಿ ತಿಂಡಿಗಳನ್ನು ತಯಾರಿಸುವ ಘಟಕವಿದೆ. ಇಲ್ಲಿ ತಿಂಡಿ ತಿನಿಸುಗಳನ್ನು ಮುಚ್ಚಳವಿಲ್ಲದ ಡಬ್ಬದಲ್ಲಿ ಇರಿಸಲಾಗಿದ್ದು, ಆಹಾರ ಪದಾರ್ಥಗಳನ್ನು ತ ಯಾರಿಸುವ ಸ್ಥಳದಲ್ಲಿ ಸ್ವಚ್ಚತೆ ಇಲ್ಲದಿರುವುದು ಮತ್ತು ಹಳಸು ಪದಾರ್ಥಗಳನ್ನು ವಿಲೇ ಮಾಡದೆ ಕೋಣೆಯಲ್ಲಿ ದಾಸ್ತಾನಿರಿಸಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿ ಅಂಗಡಿಗೆ ಬೀಗ ಎಳೆದಿದ್ದಾರೆ.

mbd_july9_5
ಶುಚಿತ್ವವನ್ನು ನಿರ್ಲಕ್ಷಿಸಿದ ಕಾರಣಕ್ಕೆ ಇದೇ ಅಂಗಡಿಗೆ ಕಳೆದ ವರ್ಷ ಆಗಿನ ಮುಖ್ಯಾಧಿಕಾರಿ ರಾಯಪ್ಪ ದಾಳಿ ನಡೆಸಿ ಬೀಗ ಹಾಕಿದ್ದರು.
ಹೊಟೇಲುಗಳ ಅಡುಗೆ ಕೋಣೆ ಪರಿಶೀಲನೆ:

ನಗರದ ವಿವಿಧ ಹೊಟೇಲ್ ಮತ್ತು ಬಾರ್ಗಳಿಗೆ ಭೇಟಿ ನೀಡಿದ ಪುರಸಭೆ ಅಧಿಕಾರಿಗಳು ಅಡುಗೆ ಕೋಣೆಗಳ ಸ್ವಚ್ಛತೆ. ಅಲ್ಲಿ ಉಪಯೋಗಿಸುವ ಆಹಾರ ಪದಾರ್ಥಗಳು ಇತರ ತಿಂಡಿ ತಿನಿಸುಗಳ ಬಗ್ಗೆ ಪರಿಶೀಲನೆ ನಡೆಸಿದರು. ಹೊಟೇಲುಗಳ ಸುತ್ತಮುತ್ತ ತ್ಯಾಜ್ಯ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಹೊಟೇಲ್ ಮಾಲಕರಿಗೆ ಸೂಚಿಸಿದರು. 40 ಮೈಕ್ರಾನಿಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಚೀಲಗಳನ್ನು ಬಳಸಬಾರದು, ಆಹಾರ ಪದಾರ್ಥಗಳನ್ನು ತಯಾರಿಸಿದ ಆರು ಗಂಟೆಯೊಳಗೆ ಸಾರ್ವಜನಿಕರಿಗೆ ವಿತರಿಸಬೇಕೆಂದು ಅಧಿಕಾರಿಗಳು ಅಂಗಡಿ ಮಾಲೀಕರಿಗೆ ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಶೀನ ನಾಯ್ಕ್, ಆರೋಗ್ಯ ನಿರೀಕ್ಷಕಿ ಇಂದು, ಪರಿಸರ ಎಂಜಿನಿಯರ್ ಶಿಲ್ಪಾ .ಎಸ್, ಸರಕಾರಿ ಆಸ್ಪತ್ರೆಯ ಕಿರಿಯ ಆರೋಗ್ಯ ಸಹಾಯಕ ರಾಘವೇಂದ್ರ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *