ವೀರಕಂಭ : ವಿಷಯವಾರು ಹಾಗೂ ತರಗತಿವಾರು ಶಿಕ್ಷಕರ ನೇಮಕಾತಿ ಆಗಬೇಕು, ವಯೋಮಾನ ಮತ್ತು ಮನೋಭಾವನೆಗೆ ಅನುಗುಣವಾಗಿ ಪಠ್ಯ ಪುಸ್ತಕದ ರಚನೆ ಆಗಬೇಕು, ಕಲಿಕೆಗೆ ಪೂರಕವಾದ ವಾತಾವರಣವು ಮನೆಯಿಂದಲೇ ಪ್ರಾರಂಭವಾಗ ಬೇಕು, ಶಾಲಾ ಅಭಿವೃದ್ಧಿಯ ಕೆಲಸಗಳಲ್ಲಿ ಸಮುದಾಯದ ನಿರಂತರ ಸಹಕಾರ ಇರಬೇಕು.

DSC_2370
ಜು. 6ರಂದು ವೀರಕಂಭ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆದ ವೀರಕಂಭ ಗ್ರಾಮ ಮಟ್ಟದ ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಸಮಾಲೋಚನಾ ಸಭೆಯಲ್ಲಿ ವಿದ್ಯಾಭಿಮಾನಿಗಳ ಅನಿಸಿಕೆ  ವಿದ್ಯಾರ್ಥಿ ಗಳ ಸಂಖ್ಯೆ ಕಡಿಮೆ ಇರುವ ಶಾಲೆಗೆ ಸಂಚಾರಿ ದೈಹಿಕ ಶಿಕ್ಷಕರ ನೇಮಕವಾಗಬೇಕು ನೂತನ ಶಿಕ್ಷಣ ನೀತಿ  ಸಮಾಲೋಚನಾ ಸಭೆ

ಪ್ರಾಥಮಿಕ ಶಾಲಾ ಹಂತದಲ್ಲಿ ಮಾತೃ ಭಾಷೆಯ ಶಿಕ್ಷಣ ಕಡ್ಡಾಯ, ಇಂಗ್ಲೀಷ್, ಹಿಂದಿಗೆ ಪ್ರೋತ್ಸಾಹ, ಶಿಕ್ಷಣ ಕ್ಷೇತ್ರ ದಲ್ಲಿ ರಾಜಕೀಯ ಪ್ರವೇಶ ಇರಬಾರದು, ವಿಕಲ ಚೇತನ ಮಕ್ಕಳ ಅನುಕೂಲತೆಗೆ ಗ್ರಾಮ ಮಟ್ಟದಲ್ಲಿ ಒಂದು ಸಮಗ್ರ ಶಾಲೆಯ ವ್ಯವಸ್ಥೆ ಕಲ್ಪಿಸಿ ವಿಶೇಷ ಶಿಕ್ಷಕರ ನೇಮಕ, ದೈಹಿಕ ಶಿಕ್ಷಕರ ಕೊರತೆ ನಿವಾರಿಸಲು ಸಂಚಾರಿ ದೈಹಿಕ ಶಿಕ್ಷಕರ ನೇಮಕಾತಿ ಗೊಳಿಸಿ ವಾರದಲ್ಲಿ ಕನಿಷ್ಟ ಎರಡು ದಿನಗಳಾದರೂ ದೈಹಿಕ ಶಿಕ್ಷಣ ದೊರಕುವಂತಾಗಬೇಕು. ಅಕ್ಷರ ದಾಸೋಹಕ್ಕೆ ಸಂಬಂಧಿಸಿದಂತೆ ಕ್ಲಪ್ತ ಸಮಯದಲ್ಲಿ ಆಹಾರ ಧಾನ್ಯಗಳು ಹಾಗೂ ಅನುದಾನ ಬಿಡುಗಡೆಯಾಗ ಬೇಕು ಎಂಬ ಅಭಿಪ್ರಾಯಗಳು ಬಂದವು.
ಚಟುವಟಿಕೆ ಆಧಾರಿತ ಕಲಿಕೆಯು ವಿದ್ಯಾಥರ್ಿಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿದೆ. ಶಿಕ್ಷಕರಿಗೆ ಅನ್ಯ ಕೆಲಸದ ಹೊರೆ ಕಡಿಮೆಯಾಗ ಬೇಕೆಂದು ಗ್ರಾಮಾಧ್ಯಕ್ಷೆ ಶ್ರೀಮತಿ ಪ್ರೇಮಲತಾರವರು ತಿಳಿಸಿದರು.
ಉಪಾಧ್ಯಕ್ಷರಾದ ಶ್ರೀಯುತ ನಿಶಾಂತ್ ರೈ ರವರುವಿಷಯವಾರು ಶಿಕ್ಷಕರ ನೇಮಕಾತಿ ನಡೆಯಬೇಕು. ಏಕರೂಪದ ಶಿಕ್ಷಣ ಅನುಷ್ಠಾನವಾಗಬೇಕು, ವ್ಯಾವಾಹಾರಿಕ ಜ್ಞಾನ ಬೆಳೆದಾಗ ಮಾತ್ರ ಜೀವನದಲ್ಲಿ ಶಿಕ್ಷಣವು ಅನ್ವಯವಾಗುತ್ತದೆ ಎಂದು ಶುಭ ಹಾರೈಸಿದರು.
ನೋಡಲ್ ಅಧಿಕಾರಿಯಾದ ಒಕ್ಕೆತ್ತೂರು ಹಿ.ಪ್ರಾ ಶಾಲೆ ಮುಖ್ಯ ಶಿಕ್ಷಕಿ ಶ್ರೀಮತಿ ಸುಬ್ಬಲಕ್ಷ್ಮಿ ವೀರಕಂಭ ಗ್ರಾಮ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುನೀತಾ, ಬೊಳಂತೂರು ಗ್ರಾಮಾಭಿವೃದ್ಧಿ ಅಧಿಕಾರಿ ಶ್ರೀಮತಿ ಪ್ರೆಸ್ಸಿ ರೋಡ್ರಿಗಸ್ ಗ್ರಾಮ ಪಂಚಾಯತ್ನ ನೂತನ ಸದಸ್ಯರು, ಮಜಿ, ಕೆಲಿಂಜ, ಬಾಯಿಲ ಶಾಲೆಗಳ ಮುಖ್ಯ ಶಿಕ್ಷಕರು, ಸಂಘ ಸಂಸ್ಥೆಗಳ ಸದಸ್ಯರು ಹಾಗೂ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ನೋಡಲ್ ಅಧಿಕಾರಿ ಶ್ರೀಮತಿ ಸುಬ್ಬ ಲಕ್ಷ್ಮಿ ಯವರು ಪ್ರಾಸ್ತಾವಿಕ ಮಾತನ್ನಾಡಿ ಸ್ವಾಗತಿಸಿದರು. ಹಿ.ಪ್ರಾ ಶಾಲೆ ಮಜಿಯ ಮುಖ್ಯ ಶಿಕ್ಷಕ ಶ್ರೀಯುತ ನಾರಾಯಣ ಪೂಜಾರಿಯವರು ಧನ್ಯವಾದವನ್ನಿತ್ತರು. ಶಿಕ್ಷಕಿ ಶ್ರೀಮತಿ ಅಂಜಲಿನ್ ಡೆಲ್ಫಿನ್ ಪಿಂಟೋ ಹಾಗೂ ಶ್ರೀಮತಿ ಸಂಗೀತಾ ಶರ್ಮರವರು ಸಹಕರಿಸಿದರು.

By Suddi9

Leave a Reply

Your email address will not be published. Required fields are marked *