ಬಂಟ್ವಾಳ: ಪಿಕ್ಅಪ್ ವಾಹನವೊಂದು ರಸ್ತೆ ಬದಿ ಕೆಟ್ಟು ನಿಂತಿದ್ದು ಪರಿಶೀಲನೆ ನಡೆಸಿದಾದ ಅಕ್ರಮ ಗೋಸಾಗಾಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಾನುವಾರ ಮುಂಜಾನೆ 5 ಗಂಟೆಯ ವೇಳೆಗೆ ಘಟನೆ ನಡೆದಿದ್ದು ಪಿಕ್ಅಪ್ನಲ್ಲಿ ಒಟ್ಟು 11ದನ ಹಾಗೂ ಕರುಗಳನ್ನು ಕಾಲುಗಳನ್ನು ಕಟ್ಟಿ ಹಿಂಸಾತ್ಮಕವಾಗಿ ತುಂಬಲಾಗಿತ್ತು. ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ತೆರಳಿದ ಬಂಟ್ವಾಳ ನಗರ ಪೊಲೀಸರು ವಾಹನ ಸಹಿತ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

IMG-20150705-WA0030

IMG-20150705-WA0028

ಅಕ್ರಮ ದನ ಸಾಗಾಟ ಮಾಡುತಿದ್ದ ಪಿಕ್ಅಪ್ ವಾಹನ ಅತಿ ವೇಗದಿಂದ ಚಲಿಸುವ ಭರದಲ್ಲಿ ಬಂಟ್ವಾಳ ಬೈಪಾಸ್ ಜಂಕ್ಷನ್ ಬಳಿ ಚಕ್ರ ಕಳಚಿ ನಿಂತಿತ್ತು. ತಕ್ಷಣ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದ. ಅಪಘತ ನಡದಿರಬಹುದೇ ಎಂದು ಸಂಶಯಿಸಿದ ಸ್ಥಳೀಯರು ವಾಹನದೊಳಗೆ ಪರಿಶೀಲನೆ ನಡೆಸಿದಾಗ ಗೋವುಗಳನ್ನು ತುಂಬಿರುವುದು ಕಂಡು ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ಬಜರಂಗದಳ ಬಂಟ್ವಾಳ ಸಮಿತಿ ಸದಸ್ಯರು ಹಾಗೂ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಕಟ್ಟಿಹಾಕಲಾಗಿದ್ದ ಗೋವುಗಳನ್ನು ಬಿಡಿಸಿ ನೀರು ಹಾಕಿ ಸ್ವಚ್ಚಗೊಳಿಸಿ ರಕ್ಷಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪಿಕ್ಅಪ್ ಸಹಿತ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

By Suddi9

Leave a Reply

Your email address will not be published. Required fields are marked *