ಬಂಟ್ವಾಳ : ಇತಿಹಾಸ ಪ್ರಸಿದ್ಧ ಭೂಕೈಲಾಸ ಪ್ರತೀತಿಯ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಈಶ್ವರ ದೇವಸ್ಥಾನಕ್ಕೆ ಮೇಲಿನ ದೇವಸ್ಥಾನ ಹೋಗುವ ದಾರಿಯಲ್ಲಿ ಬಂಟ್ವಾಳ : ಇತಿಹಾಸ ಪ್ರಸಿದ್ಧ ಭೂಕೈಲಾಸ ಪ್ರತೀತಿಯ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಈಶ್ವರ ದೇವಸ್ಥಾನಕ್ಕೆ (ಮೇಲಿನ ದೇವಸ್ಥಾನ) ಹೋಗುವ ದಾರಿಯಲ್ಲಿ ವಿದ್ಯುತ್ತಂತಿ ಕಂಬವೊಂದು ಮುರಿದುಬಿದ್ದಿದ್ದು ದೇವಸ್ಥಾನಕ್ಕೆ ವಿದ್ಯುತ್ ಸಂಪರ್ಕ ಕಡಿದುಹೋಗಿದೆ.
ಸುಮಾರು 20 ದಿನಗಳ ಹಿಂದೆ ಗಾಳಿಯ ರಭಸಕ್ಕೆ ಈ ವಿದ್ಯುತ್ ಕಂಬ ಬುಡದಿಂದ ತುಂಡಾಗಿದೆ. ಹಳತಾದ ಕಬ್ಬಿಣದ ಈ ಕಂಬ ಕೆಳಭಾಗದಲ್ಲಿ ತುಕ್ಕುಹಿಡಿದು ಮುರಿದಿದೆ.ಮುರಿದ ಕಂಬ ತಂತಿಯ ಆಧಾರದಲ್ಲಿ ನೇತಾಡುತ್ತಿದ್ದು ತಂತಿಗಳು ತುಂಡಾಗುವ ಸ್ಥಿತಿಯಲ್ಲಿದೆ. ವಿದ್ಯುತ್ ಕಂಬ ತುಂಡಾಗಿರುವುದರಿಂದ ಮೇಲಿನ ದೇವಸ್ಥಾನಕ್ಕೆ ವಿದ್ಯುತ್ಸಂಪರ್ಕ ತಪ್ಪಿ ಹೋಗಿದೆ. ಸಂಜೆಯ ಬಳಿಕ ದೇವಸ್ಥಾನ ಮತ್ತು ದೇವಸ್ಥಾನಕ್ಕೆ ಹೋಗುವ ದಾರಿ ಕತ್ತಲಲ್ಲಿ ಮುಳುಗಿದೆ. ಸಂಜೆ ಹೊತ್ತು ಭಕ್ತಾದಿಗಳು ದೇವಸ್ಥಾನಕ್ಕೆ ಬರುವುದರಿಂದ ಭಕ್ತಾದಿಗಳಿಗೆ ತೊಂದರೆಯಾಗಿದೆ. ದೇವಸ್ಥಾನದ ಸುತ್ತಲೂ ಕತ್ತಲಾದುದರಿಂದ ಅರ್ಚಕರಿಗೆ ಕಾರ್ಯ ನಿರ್ವಹಿಸಲು ತೊಡಕಾಗಿದೆ.
ಕಂಬ ಮುರಿದು ಬಿದ್ದ ಬಗ್ಗೆ ಮೆಸ್ಕಾಂಗೆ ತಿಳಿಸಿದ್ದರೂ ಒಂದು ಬಾರಿ ಬಂದು ಹೋದ ಅಕಾರಿಗಳು ಬಳಿಕ ಆ ಕಡೆ ತಲೆ ಹಾಕಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ದೇವಸ್ಥಾನದ ಸಿಬಂದಿಗಳು ಈ ಬಗ್ಗೆ ಅಕಾರಿಗಳ ಗಮನ ಸೆಳೆದರೂ ಯಾರೂ ಮುತುವರ್ಜಿ ವಹಿಸಿಲ್ಲವೆಂದು ಆರೋಪಿಸಿದ್ದಾರೆ. ಪದೇ ಪದೇ ಮೆಸ್ಕಾಂಗೆ ಈ ಬಗ್ಗೆ ದೂರವಾಣಿ ಕರೆ ಮಾಡಿದರೆ ಬರುತ್ತೇವೆ ಎಂಬುದಷ್ಟೇ ಉತ್ತರವೆಂದು ತಿಳಿದುಬಂದಿದೆ.
ಪ್ರಸ್ತುತ ದೇವಸ್ಥಾನದ ಆಡಳಿತ ಮಂಡಳಿ ಧಾರ್ಮಿಕ ದತ್ತಿ ಇಲಾಖೆ ಅನದಲ್ಲಿದ್ದು ವಿದ್ಯುತ್ ಸಂಪರ್ಕ ಕಡಿತದ ಬಗ್ಗೆ ಸಂಬಂಸಿದ ಅಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದರೂ ಇದುವರೆಗೆ ಸಮಸ್ಯೆ ಪರಿಹಾರವಾಗಿಲ್ಲ.
ವಿದ್ಯುತ್ ತಂತಿ ಮೇಲೆ ಬಿದ್ದ ಇನ್ನೊಂದು ಕಂಬ
ಈ ನಡುವೆ ದೇವಸ್ಥಾನದ ಗದಾ ತೀರ್ಥದ ಸಮೀಪ ವಿದ್ಯುತ್ ಪರಿವರ್ತಕದ ಬಳಿ ಅಳವಡಿಸಲಾದ 2 ವಿದ್ಯುತ್ ಕಂಬಗಳ ಪೈಕಿ ಒಂದು ಕಂಬ ವಾಲಿ ವಿದ್ಯುತ್ ತಂತಿಗಳ ಮೇಲೆ ಬಿದ್ದಿದೆ.  ಇದರಿಂದ ಆ ಭಾಗದ ವಿದ್ಯುತ್ ಸಂಪರ್ಕ ಕಡಿದುಹೋಗಿದೆ. ಇದರಿಂದ ನೀರಿನ ಪಂಪ್ನ ಮೋಟಾರ್ ಸ್ಥಗಿತಗೊಂಡಿದ್ದು ದೇವಸ್ಥಾನಗಳಿಗೆ ನೀರಿನ ಸೌಲಭ್ಯ ನಿಂತುಹೋಗಿದೆ.
ಸಿಡಿಲಿನ ಹೊಡೆತ
ಸುಮಾರು 12 ದಿನಗಳ ಹಿಂದೆ ಈಶ್ವರ ದೇವಸ್ಥಾನದ ಮೇಲ್ಛಾವಣಿಗೆ ಸಿಡಿಲು ಬಡಿದಿರುವುದಾಗಿ ತಿಳಿದುಬಂದಿದೆ. ಇದರಿಂದ ದೇವಸ್ಥಾನದ ಸಿಸಿ ಟಿವಿ ನಿಷ್ಕ್ರಿಯಗೊಂಡಿದೆ. ಬಿದ್ದಿದ್ದು ದೇವಸ್ಥಾನಕ್ಕೆ ವಿದ್ಯುತ್ ಸಂಪರ್ಕ ಕಡಿದುಹೋಗಿದೆ.
ಸುಮಾರು 20 ದಿನಗಳ ಹಿಂದೆ ಗಾಳಿಯ ರಭಸಕ್ಕೆ ಈ ವಿದ್ಯುತ್ ಕಂಬ ಬುಡದಿಂದ ತುಂಡಾಗಿದೆ. ಹಳತಾದ ಕಬ್ಬಿಣದ ಈ ಕಂಬ ಕೆಳಭಾಗದಲ್ಲಿ ತುಕ್ಕುಹಿಡಿದು ಮುರಿದಿದೆ. ಮುರಿದ ಕಂಬ ತಂತಿಯ ಆಧಾರದಲ್ಲಿ ನೇತಾಡುತ್ತಿದ್ದು ತಂತಿಗಳು ತುಂಡಾಗುವ ಸ್ಥಿತಿಯಲ್ಲಿದೆ . ವಿದ್ಯುತ್ ಕಂಬ ತುಂಡಾಗಿರುವುದರಿಂದ ಮೇಲಿನ ದೇವಸ್ಥಾನಕ್ಕೆ ವಿದ್ಯುತ್ ಸಂಪರ್ಕ ತಪ್ಪಿ ಹೋಗಿದೆ.  ಸಂಜೆಯ ಬಳಿಕ ದೇವಸ್ಥಾನ ಮತ್ತು ದೇವಸ್ಥಾನಕ್ಕೆ ಹೋಗುವ ದಾರಿ ಕತ್ತಲಲ್ಲಿ ಮುಳುಗಿದೆ.  ಸಂಜೆ ಹೊತ್ತು ಭಕ್ತಾದಿಗಳು ದೇವಸ್ಥಾನಕ್ಕೆ ಬರುವುದರಿಂದ ಭಕ್ತಾದಿಗಳಿಗೆ ತೊಂದರೆಯಾಗಿದೆ. ದೇವಸ್ಥಾನದ ಸುತ್ತಲೂ ಕತ್ತಲಾದುದರಿಂದ ಅರ್ಚಕರಿಗೆ ಕಾರ್ಯ ನಿರ್ವಹಿಸಲು ತೊಡಕಾಗಿದೆ.
5btl-karinja
ಕಂಬ ಮುರಿದು ಬಿದ್ದ ಬಗ್ಗೆ ಮೆಸ್ಕಾಂಗೆ ತಿಳಿಸಿದ್ದರೂ ಒಂದು ಬಾರಿ ಬಂದು ಹೋದ ಅಕಾರಿಗಳು ಬಳಿಕ ಆ ಕಡೆ ತಲೆ ಹಾಕಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ದೇವಸ್ಥಾನದ ಸಿಬಂದಿಗಳು ಈ ಬಗ್ಗೆ ಅಕಾರಿಗಳ ಗಮನ ಸೆಳೆದರೂ ಯಾರೂ ಮುತುರ್ವಜಿ ವಹಿಸಿಲ್ಲವೆಂದು ಆರೋಪಿಸಿದ್ದಾರೆ. ಪದೇ ಪದೇ ಮೆಸ್ಕಾಂಗೆ ಈ ಬಗ್ಗೆ ದೂರವಾಣಿ ಕರೆ ಮಾಡಿದರೆ ಬರುತ್ತೇವೆ ಎಂಬುದಷ್ಟೇ ಉತ್ತರವೆಂದು ತಿಳಿದುಬಂದಿದೆ.
ಪ್ರಸ್ತುತ ದೇವಸ್ಥಾನದ ಆಡಳಿತ ಮಂಡಳಿ ಧಾರ್ಮಿಕ ದತ್ತಿ ಇಲಾಖೆ ಅನದಲ್ಲಿದ್ದು ವಿದ್ಯುತ್ ಸಂಪರ್ಕ ಕಡಿತದ ಬಗ್ಗೆ ಸಂಬಂಸಿದ ಅಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದರೂ ಇದುವರೆಗೆ ಸಮಸ್ಯೆ ಪರಿಹಾರವಾಗಿಲ್ಲ.
ವಿದ್ಯುತ್ ತಂತಿ ಮೇಲೆ ಬಿದ್ದ ಇನ್ನೊಂದು ಕಂಬ
ಈ ನಡುವೆ ದೇವಸ್ಥಾನದ ಗದಾತೀರ್ಥದ ಸಮೀಪ ವಿದ್ಯುತ್ ಪರಿವರ್ತಕದ ಬಳಿ ಅಳವಡಿಸಲಾದ 2 ವಿದ್ಯುತ್ ಕಂಬಗಳ ಪೈಕಿ ಒಂದು ಕಂಬ ವಾಲಿ ವಿದ್ಯುತ್ ತಂತಿಗಳ ಮೇಲೆ ಬಿದ್ದಿದೆ. ಇದರಿಂದ ಆ ಭಾಗದ ವಿದ್ಯುತ್ ಸಂಪರ್ಕ ಕಡಿದುಹೋಗಿದೆ. ಇದರಿಂದ ನೀರಿನ ಪಂಪ್  ಮೋಟಾರ್ ಸ್ಥಗಿತಗೊಂಡಿದ್ದು ದೇವಸ್ಥಾನಗಳಿಗೆ ನೀರಿನ ಸೌಲಭ್ಯ ನಿಂತುಹೋಗಿದೆ.
ಸಿಡಿಲಿನ ಹೊಡೆತ
ಸುಮಾರು 12 ದಿನಗಳ ಹಿಂದೆ ಈಶ್ವರ ದೇವಸ್ಥಾನದ ಮೇಲ್ಛಾವಣಿಗೆ ಸಿಡಿಲು ಬಡಿದಿರುವುದಾಗಿ ತಿಳಿದುಬಂದಿದೆ. ಇದರಿಂದ ದೇವಸ್ಥಾನದ ಸಿಸಿ ಟಿವಿ ನಿಷ್ಕ್ರಿಯಗೊಂಡಿದೆ.

By Suddi9

Leave a Reply

Your email address will not be published. Required fields are marked *