ಸಿಲಿಗುರಿ: ಭೂಕುಸಿತಕ್ಕೆ 28 ಮಂದಿ ಬಲಿಯಾದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ಇದಕ್ಕೆ ಇಲ್ಲಿ ಸುರಿದ ಭಾರೀ ಮಳೆಯೇ ಕಾರಣವಾಗಿದೆ. ಡಾರ್ಜಿಲಿಂಗ್, ಕಲಿಂಪೊಂಗ್ ಹಾಗೂ ಕುರ್ಸೆಂಗ್ ಪ್ರದೇಶದಲ್ಲಿ ಕಳೆದ ರಾತ್ರಿಯಿಂದ ಭಾರೀ ಮಳೆ ಸುರಿದಿದ್ದು ಅಲ್ಲಲ್ಲಿ ವ್ಯಾಪಕ ಜೀವಹಾನಿ ಸಂಭವಿಸಿದೆ.
pb
ಭೂಕುಸಿತದಿಂದ ರಾಷ್ಟ್ರೀಯ ಹೆದ್ದಾರಿ 10 ಹಾಗೂ ರಾಷ್ಟ್ರೀಯ ಹೆದ್ದಾರಿ 55ರ ರಸ್ತೆಗೆ ಭಾರಿ ಹಾನಿಯಾಗಿದ್ದು, ರಸ್ತೆ ಸಂಚಾರ ಸ್ಥಗಿತವಾಗಿದೆ. ಜೊತೆಗೆ ಡಾರ್ಜಿಲಿಂಗ್ ಹಾಗೂ ಸಿಕ್ಕಿಂಗೆ ದೂರವಾಣಿ ಸಂಪರ್ಕ ಕಡಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸ್‍ಎಸ್‍ಬಿ ತಂಡ ಘಟನಾ ಸ್ಥಳಕ್ಕೆ ಧಾವಿಸಿದೆ. ಕಲಿಂಪೊಂಗ್ ಪ್ರದೇಶದಲ್ಲಿ ಇನ್ನೂ 15 ಮಂದಿ ಕಾಣೆಯಾಗಿರುವ ವರದಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಮಾಡಲಾಗುತ್ತಿದೆ.

By Suddi9

Leave a Reply

Your email address will not be published. Required fields are marked *