ಉಳ್ಳಾಲ: ಕೊಣಾಜೆ ಬಳಿ ಸ್ಟುಡಿಯೋ, ಮೊಬೈಲ್ ಅಂಗಡಿ ಸೇರಿದಂತೆ 7 ಅಂಗಡಿಗಳಿಗೆ ಕನ್ನ ಹಾಕಿರುವ ಕಳ್ಳರು ಸುಮಾರು 5 ಲಕ್ಷಕ್ಕೂ ಅಕ ಮೌಲ್ಯದ ಸೊತ್ತನ್ನು ಕಳವುಗೈದಿದ್ದಾರೆ.
Beralachu 01

konaje Studio 01

Konaje Ganeral Store

konaje 6 Shop

Koanje Police Betti

kaonaje police 03

ಮಂಗಳೂರು ವಿಶ್ವವಿದ್ಯಾನಿಲಯದ ಲೇಡಿಸ್ ಹಾಸ್ಟೆಲ್ ಬಳಿಯ ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆಸಿರುವ ಕಳ್ಳರು ಪತ್ರಿಕಾ ಛಾಯಾಗ್ರಾಹಕ ಅಪುಲ್ ಇರಾ ಅವರ ಅಮ್ಮ ಸ್ಟುಡಿಯೋದಿಂದ 2 ಲಕ್ಷ ರೂ. ಬೆಲೆ ಬಾಳುವ ಮೂರು ಎಸ್ಎಲ್ಆರ್ ಕ್ಯಾಮರ, ಸಹಲ್ ಎಂಬವರಿಗೆ ಸೇರಿದ ಮೊಬೈಲ್ ಅಂಗಡಿ ಯಿಂದ ಸುಮಾರು 2 ಲಕ್ಷ ರೂ. ಮೌಲ್ಯದ ಮೊಬೈಲ್, ಚಾರ್ಜರ್ಗಳು, ಹರೀಶ್ ಎಂಬವರಿಗೆ ಸೇರಿದ ಮೊಬೈಲ್ ಅಂಗಡಿಯಿಂದ 20 ಸಾವಿರ ಮೌಲ್ಯದ ಮೊಬೈಲ್, ರವಿ ಜೆರಾಕ್ಸ್, ಮಹಮ್ಮದ್ ಎನ್.ಕೆ. ಅವರ ಜಿನಸು ಅಂಗಡಿ, ಸಾದಿಕ್ ಎಂಬವರ ಬೇಕರಿ,ಐಡಿಯಲ್ ಜ್ಯೂಸ್ ಸೆಂಟರ್ನಿಂದ ನಗದು ಹಣ ಮತ್ತು ಸಿಗರೇಟ್ ಪ್ಯಾಕೇಟ್ಗಳು ಕಳವಾಗಿದೆ.
ಹೆಚ್ಚಿನ ಅಂಗಡಿಗಳ ಷಟರ್ ಒಡೆದು ಒಳ ನುಗ್ಗಿರುವ ಕಳ್ಳರು ಕೆಲವೆಡೆ ಬೆರಳಚ್ಚು ಗೊತ್ತಾಗದಂತೆ ಕೆಮಿಕಲ್ ಹಾಕಿಇರುವ ಕುರುಹುಗಳು ಕಂಡು ಬಂದಿದೆ.
ಘಟನಾ ಸ್ಥಳಕ್ಕೆ ಕೊಣಾಜೆ ಪೊಲೀಸರು, ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ

By suddi9

Leave a Reply

Your email address will not be published. Required fields are marked *