ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಕಳೆದ 24ರಂದು ರಾತ್ರಿ ಪಾನಮತ್ತನಾಗಿ ರಸ್ತೆ ಬದಿ ಬಿದ್ದು ಗಂಭೀರ ಗಾಯಗೊಂಡು ಮಂಗಳೂರಿನ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಯುವಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.
ಮೃತರನ್ನು ಸ್ಥಳೀಯ ಸಜಿಪಮೂಡ ಗ್ರಾಮದ ಪಣೋಳಿಬೈಲು ನಿವಾಸಿ ಆನಂದ ನಲಿಕೆ (30) ಎಂದು ಗುರುತಿಸಲಾಗಿದೆ ಎಂದು ಇವರ ಸಹೋದರ ವಿಶ್ವನಾಥ ನಲಿಕೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
