ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಜೈನರಪೇಟೆ ನಿವಾಸಿ, ಜಿಲ್ಲೆಯಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಸಮಿತಿ ಸಂಸ್ಥಾಪಕರಾಗಿದ್ದ ನಿವೃತ್ತ ಪ್ರಾಂಶುಪಾಲ ಪಾ.ಅನಂತರಾಜ ಇಂದ್ರ(79) ಇವರು ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.
ಮೂಡುಬಿದ್ರೆ ಸ್ವಸ್ತಿ ಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಇವರು ಪಾಣೆಮಂಗಳೂರು ನಿವಾಸಿಯಾಗಿರುವ ಹಿನ್ನೆಲೆಯಲ್ಲಿ ಪಾ. ಅನಂತರಾಜ ಇಂದ್ರ ಎಂದೇ ಗುರುತಿಸಿಕೊಂಡಿದ್ದರು.

ಆರಂಭದಲ್ಲಿ ಮಂಗಳೂರು ಗಣಪತಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಬಳಿಕ ಪ್ರಾಂಶುಪಾಲರಾಗಿ ಅಲ್ಲಿಯೇ ನಿವೃತ್ತಿಗೊಂಡ ಬಳಿಕ ಮೂಡುಬಿದ್ರೆಯಲ್ಲಿ ಪ್ರಾಂಶುಪಾಲರಾಗಿದ್ದರು. ಉಳ್ಳಾಲ ಬಲ್ಲಾಳ್ ನರ್ಸಿಂಗ್ ಕಾಲೇಜು ಆಡಳಿತಾಧಿಕಾರಿಯಾಗಿ, ಎಲ್ಲೈಸಿ ಸಂಸ್ಥೆ ಪ್ರತಿನಿಧಿಯಾಗಿ, ಜಿಲ್ಲಾ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಪದಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.
ಬಂಟ್ವಾಳ ಜೈನ್ ಮಿಲನ್ ಸಂಸ್ಥಾಪಕರಾಗಿ, ಅವಿಭಜಿತ ಜಿಲ್ಲಾ ತೌಳವ ಇಂದ್ರ ಸಮಾಜದ ಸ್ಥಾಪಕಾಧ್ಯಕ್ಷರಾಗಿ, ಕನರ್ಾಟಕ ಇತಿಹಾಸ ಅಕಾಡೆಮಿ ನೇತೃತ್ವದಲ್ಲಿ ಕಳೆದ ಒಂದೂವರೆ ದಶಕದಲ್ಲಿ ಜಿಲ್ಲೆಯಾದ್ಯಂತ ಸಂಚರಿಸಿ ಐತಿಹಾಸಿಕ ಪರಂಪರೆ ಉಳಿಸಿ ಸಮಿತಿ ಸಂಸ್ಥಾಪಕರಾಗಿ ‘ಇತಿಹಾಸದ ಸಪ್ತಾಹ’ ಆಚರಣೆ ಮೂಲಕ ಪುರಾತನ ವಸ್ತು ವಿಷಯಗಳನ್ನು ಕಾಪಾಡುವಲ್ಲಿ ಮಾರ್ಗದರ್ಶನ ನೀಡುತ್ತಿದ್ದರು.
ಪಾಣೆಮಂಗಳೂರು ಜೈನರಪೇಟೆಯಲ್ಲಿ ಹಲವು ಬಾರಿ ವಿವಿಧ ಧಾಮರ್ಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಧರ್ಮಸ್ಥಳ ಧಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಮೆಚ್ಚುಗೆಗೆ ಪಾತ್ರವಾಗಿದ್ದರು.
—
