ಉಡುಪಿ: ವಲಸೆ ಕಾರ್ಮಿಕರ ಜೋಪಡಿಗಳಿಗೆ ಬೆಂಕಿ ಬಿದ್ದು ಏಳು ಜೋಪಡಿಗಳು ಸುಟ್ಟು ಭಸ್ಮವಾಗಿದ್ದು ಇದರಿಂದ ಸುಮಾರಿ 14000 ರೂ ನಷ್ಟ ಸಂಭವಿಸಿದ ಘಟನೆ ಆದಿ ಉಡುಪಿಯಲ್ಲಿ ನಿನ್ನೆ ಸಂಭವಿಸಿದೆ. ವಿಠಲ ಶೆಟ್ಟಿ ಎಂಬವರಿಗೆ ಸೇರಿದ ಜಮೀನಿನಲ್ಲಿ ವಲಸೆ ಕಾರ್ಮಿಕರು ಸುಮಾರು 45 ಜಫಡಿಗಳನ್ನು ಜೋಪಡಿಗಳನ್ನು ನಿರ್ಮಿಸಿ ವಾಸಿಸು ತ್ತಿದ್ದರು. ಇದರಲ್ಲಿ ಏಳು ಜೋಪಡಿ ಗಳು ಸುಟ್ಟು ಹೋಗಿವೆ ಎಂದು ತಿಳಿದುಬಂದಿದೆ.

manipal fire 1
ಒಂದು ಜೋಪಡಿಯಲ್ಲಿ ಸ್ಟವ್ ಉರಿಯುತ್ತಿದ್ದ ವೇಳೆ ಜೋರಾಗಿ ಗಾಳಿ ಬೀಸಿದ ಪರಿಣಾಮ ಬೆಂಕಿಯು ಜೋಪಡಿಗೆ ಹಾಕಲಾಗಿದ್ದ ಬಟ್ಟೆ ಮತ್ತು ಪ್ಲಾಸ್ಟಿಕ್ಗೆ ಪಸರಿಸಿ ಕೆಲವೇ ಕ್ಷಣಗಳಲ್ಲಿ ಏಳು ಜೋಪಡಿಗಳನ್ನು ವ್ಯಾಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಜೋಪಡಿಯಲ್ಲಿದ್ದವರು ಹೊರಗಿದ್ದ ಕಾರಣ ಅದೃಷ್ಟವಶಾತ್ ಸಾವು ನೋವು ಸಂಭವಿಸಿಲ್ಲ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

By Suddi9

Leave a Reply

Your email address will not be published. Required fields are marked *