ವಾಮಂಜೂರು: ವೃದ್ಧರೊಬ್ಬರು ಕುಡಿದು ಬಂದು ಹೆಂಡತಿ ಮಗನಿಗೆ ಕಿರುಕುಳ ನೀಡುತ್ತಿದ್ದರು. ಇದೇ ಕಾರಣಕ್ಕೆ ಊರಿನ ಜನರು ಆ ವೃದ್ಧನಿಗೆ ಹಿಗ್ಗಾ-ಮುಗ್ಗಾ ಥಳಿಸಿದ್ದರು. ಅಷ್ಟೇ ಅಲ್ಲದೇ ಥಳಿಸುವ ದೃಶ್ಯವನ್ನು ವಾಟ್ಸಾಪ್ನಲ್ಲಿ ಹಾಕಿದ್ದರು. ಇದರಿಂದ ನೊಂದ ಆ ವೃದ್ಧ ಈಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

bhat1
ಮಂಗಳೂರಿನ ವಾಮಂಜೂರು ಸಮೀಪದ ಜ್ಯೋತಿನಗರ ನಿವಾಸಿ 58 ವರ್ಷದ ವಾಸುದೇವ ಭಟ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವಾಸುದೇವ್ ಅವರು ಪ್ರತಿದಿನ ಕುಡಿದು ಬಂದು ಪತ್ನಿ, ಮಗನಿಗೆ ಹೊಡೆಯುತ್ತಿದ್ದರಂತೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರಂತೆ. ಹೀಗಾಗಿ ಒಂದು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಜನ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ಹೀಗೆ ಥಳಿಸುತ್ತಿರುವುದನ್ನು ಜನರೇ ವಿಡಿಯೋ ಮಾಡಿ ವಾಟ್ಸಪ್ನಲ್ಲಿ ಹಾಕಿದ್ದಾರೆ ಎಂದು ಸ್ಥಳೀಯ ಕಾರ್ಪೊರೇಟರ್ ಹೇಮಲತಾ ತಿಳಿಸಿದ್ದಾರೆ.

ಪತಿಯ ಕಿರುಕುಳ ತಾಳಲಾರದೇ ಪತ್ನಿ, ಮಗನ ಜೊತೆ ಪಕ್ಕದ ಮನೆಯಲ್ಲಿ ಮಲಗುತ್ತಿದ್ದರು. ಹೀಗಾಗಿ ಜನರೇ ವಾಸುದೇವ್ಭಟ್ಗೆ ಬುದ್ದಿವಾದ ಹೇಳಿದ್ದರು. ಆಗ ಕುಡಿದ ಮತ್ತಿನಲ್ಲಿದ್ದ ಭಟ್ ಅವಾಚ್ಯಶಬ್ದಗಳಿಂದ ನಿಂದಿಸಿದ್ದರಂತೆ. ಇದರಿಂದ ಕೆರಳಿದ ಜನ ಕಣ್ಣಿಗೆ ಮೆಣಸಿನಪುಡಿ ಹಾಕಿ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಇದರಿಂದ ಅವಮಾನಕ್ಕೊಳಗಾದ ವೃದ್ಧ ವಾಸುದೇವ್ಭಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸದ್ಯಕ್ಕೆ ಈಗ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆದರೆ ಈ ಕೇಸನ್ನು ಮುಚ್ಚಲು ಪ್ರಯತ್ನಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿದೆ

By Suddi9

Leave a Reply

Your email address will not be published. Required fields are marked *