ಮಂಗಳೂರು: ಕುಲಶೇಖರ ಕೈಕಂಬ ಅಂಚೆಕಚೇರಿ ಬಳಿ ಅಕ್ರಮ ಪಿಸ್ತೂಲ್ ಹಾಗೂ ಸಜೀವ ಗುಂಡು ಗಳನ್ನು ಹೊಂದಿದ್ದ ಯುವಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕುಡುಪು ಕೆಲರಾಯ ಚರ್ಚ್ ಬಳಿಯ ನಿವಾಸಿ ನಿಶಾಂತ್ ಶೆಟ್ಟಿ ಎಂಬಾತನೇ ಬಂಧಿತ ಯುವಕ.

nishanth shetty copy

ಈತ ದುಷ್ಕøತ್ಯ ನಡೆಸಲು ಹೊಂಚು ಹಾಕುತ್ತಿದ್ದಾನೆಂದು ಸಿಸಿಬಿ ಪೊಲೀಸರು ಆರೋಪಿಸಿದ್ದಾರೆ. ಈತನ ವಿರುದ್ಧ ಕಾವೂರು, ಉಳ್ಳಾಲ ಹಾಗೂ ಮಂಗಳೂರು ಗ್ರಾಮಾಂತರ ಠಾಣೆಗಳಲ್ಲಿ ಕೇಸು ಹಲ್ಲೆ ಹಾಗೂ ಕೊಲೆಪ್ರಕರಣ ಸಂಬಂಧದ ಆರೋಪಿ ಎಂದು ತಿಳಿದುಬಂದಿದೆ. ಈತನ ಜೊತೆಗಿದ್ದ ಮತ್ತೋರ್ವ ಆರೋಪಿ ಬೊಂಡಾಲದ ಚಿತ್ತರಂಜನ ದಾಸ್ ಶೆಟ್ಟಿ ಎಂಬಾತ ಪರಾರಿಯಾಗಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಮಂಗಳೂರು ಪೂರ್ವ ಠಾಣೆಗೆ ಹಸ್ತಾಂತರಿಸಲಾಗಿದೆ.

By Suddi9

Leave a Reply

Your email address will not be published. Required fields are marked *