ಮಂಗಳೂರು: ಕಾವೂರು ಗಾಂಧಿನಗರ ನಿವಾಸಿ ಜಯಚಂದ್ರ ಇವರ ಪತ್ನಿ , ಹಿರಿಯ ಫಾರ್ಮಾಸಿಸ್ಟ್ ಸುಶೀಲ ಕೆ.ವಿ.(70) ಅವರು ಅಸೌಖ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನರಾದರು.

ಮೃತರಿಗೆ ಪತಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಇವರು ಬಜಪೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಂಗಳೂರು ವೆನ್ಲಾಕ್ ಆಸ್ಪತ್ರೆ, ಲೇಡಿಗೋಷನ್ ಆಸ್ಪತ್ರೆಯಲ್ಲಿ ಸುದೀರ್ಘ ಅವಧಿಗೆ ಹಿರಿಯ ಫಾರ್ಮಾಸಿಸ್ಟ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
