ಬಂಟ್ವಾಳ : ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಟ್ಲ ಹೋಬಳಿಗೆ ಸೇರಿದ 11 ಗ್ರಾಮಗಳ ವಿವಿಧ ಫಲಾನುಭವಿಗಳಿಗೆ ಪರಿಹಾರ ಧನದ ಚೆಕ್ ಅನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬಿ.ಸಿ.ರೋಡ್ ನ ಕಚೇರಿಯಲ್ಲಿ ಶನಿವಾರ ವಿತರಿಸಿದರು.

ಸಚಿವ ಬಿ.ರಮಾನಾಥ ರೈ ಯವರು ಫಲಾನುಭವಿಗಳಿಗೆ ಚೆಕ್ ವಿತರಿಸುತ್ತಿರುವುದು.
3 (1)

1 (3)

2 (1)
ಪೆರಾಜೆ ಗ್ರಾಮದಲ್ಲಿ ಭಾರೀ ಮಳೆಗೆ ಕೊಚ್ಚಿ ಹೋಗಿ ಮೃತಪಟ್ಟ ಆನಂದ ಗೌಡ ರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ 1.5 ಲಕ್ಷ ಸೇರಿದಂತೆ ಪ್ರಾಕೃತಿಕ ವಿಕೋಪದ ಹಾನಿಗೆ ಸಂಭವಿಸಿ ಪೆರಾಜೆ, ಕನ್ಯಾನ, ಮಾಣಿ, ವಿಟ್ಲ ಪಡ್ನೂರು, ಅನಂತಾಡಿ, ನೆಟ್ಲ ಮುಡ್ನೂರು ಗ್ರಾಮಗಳ 68 ಫಲಾನುಭವಿಗಳಿಗೆ ಒಟ್ಟು 4,25,020 ರೂ ಮೊತ್ತದ ಚೆಕ್ ಗಳನ್ನು ಸಚಿವರು ವಿತರಿಸಿದರು. ಅಡಿಕೆ ಕೊಳೆರೋಗಕ್ಕೆ ಸಂಬಂಧಿಸಿ ಮಾಣಿ, ಪೆರಾಜೆ, ಅನಂತಾಡಿ, ನೆಟ್ಲ ಮುಡ್ನೂರು, ವೀರಕಂಭ, ವಿಟ್ಲಪಡ್ನೂರು, ಕೊಳ್ನಾಡು ,ಸಾಲೆತ್ತೂರು, ಕನ್ಯಾನ, ಕರೋಪಾಡಿ ಗ್ರಾಮಗಳ 55 ಫಲಾನುಭವಿಗಳಿಗೆ 1,39,200 ರೂ. ಹಾಗೂ 94ಸಿ ಹಕ್ಕುಪತ್ರವನ್ನು ಇದೇ ವೇಳೆ ವಿತರಿಸಲಾಯಿತು.
ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ತಾ.ಪಂ. ಸದಸ್ಯರಾದ ಮಾಧವ ಮಾವೆ, ಪದ್ಮಶೇಖರ ಜೈನ್, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ತಹಶೀಲ್ದಾರ್ ಪುರಂದರ ಹೆಗ್ಡೆ, ಅಕ್ರಮಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ವಿಟ್ಲ ಕಂದಾಯ ನಿರೀಕ್ಷಕ ದಿವಾಕರ ಮುಗುಳ್ಯ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ-ಕಿಶೋರ್ ಪೆರಾಜೆ

By Suddi9

Leave a Reply

Your email address will not be published. Required fields are marked *