ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆಯಲ್ಲಿ ವಿಶೇಷ ಅಗತ್ಯತೆಯುಳ್ಳ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗುವ ವಿಶೇಷ ಉಪಕರಣಗಳ ವಿತರಣೆಮಾಡಲಾಯಿತು. ಬಂಟ್ವಾಳ ಆರ್.ಎಂ.ಎಸ್.ಎ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ವತಿಯಿಂದ ದೊರಕಿದ ಕಲಿಕೆಗೆ ಉಪಯೋಗವಾಗುವ ಎಂ.ಆರ್.ಕಿಟ್, ಲೋವಿಶನ್ ಕಿಟ್, ವಾಕರ್ ಇತ್ಯಾದಿ ಉಪಕರಣಗಳನ್ನು ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಮೇಶ್ ಎನ್ ಇವರು ವಿದ್ಯಾರ್ಥಿಗಳಿಗೆ ಪೋಷಕರ ಮತ್ತು ಶಿಕ್ಷಕರ ಸಮಕ್ಷಮದಲ್ಲಿ ವಿತರಿಸಿದರು.

