ವಿಟ್ಲ: ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನು ಸರಕಾರ ಒದಗಿಸುತ್ತಿದ್ದರೂ, ಸರಕಾರಿ ಕನ್ನಡ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಮಾತ್ರ ಹೆಚ್ಚಾಗುವಂತೆ ಕಾಣುತ್ತಿಲ್ಲ. ಸರಕಾರಿ ಶಾಲೆಗಳಲ್ಲಿಯೇ ಕಲಿತು ಜೀವನ ರೂಪಿಸಿರುವ ಮಕ್ಕಳ ಹೆತ್ತವರಿಗೆ ಸರಕಾರಿ ಶಾಲೆಗಳ ಮೇಲಿರುವ ಅಭಿಮಾನ, ಕಾಳಜಿ ಕಡಿಮೆಯಾಗುತ್ತಿದೆ. ಸರಕಾರಿ ಶಾಲೆಗಳಲ್ಲಿ ಎಲ್ಲವೂ ಇದ್ದು, ಅದ್ಯಾಕೆ ಖಾಸಗಿ ಶಾಲೆಗಳತ್ತ ಹೆತ್ತವರು ಒಲವು ತೋರಿಸುತ್ತಿದ್ದಾರೆ ಎಂದು ಜಿಜ್ಞಾಸೆ ಕಾಡುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಬಗ್ಗೆ ಹತ್ತಾರು ಕೋನಗಳಿಂದ ಯೋಚಿಸಿಕೊಂಡು ಬಂದು, ಬೇರೆಬೇರೆ ರೀತಿಯ ಪ್ರಯೋಗಗಳನ್ನು, ಪೂರಕ ಕಾರ್ಯಕ್ರಮಗಳನ್ನು ಹಮ್ಮಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸರಕಾರಿ ಶಾಲೆಯನ್ನು ‘ಶಾಲೆಗಾಗಿ ನಾವು-ನೀವು ‘ಕಾರ್ಯಕ್ರಮದಡಿಯಲ್ಲಿ ವಿದ್ಯಾಭಿಮಾನಿಗಳು, ಕೊಡುಗೈ ದಾನಿಗಳು ದತ್ತು ಸ್ವೀಕಾರ ಪಡೆದುಕೊಂಡು ಶಾಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿದೆ. ಆದರೆ ಅಂತಹ ಇಚ್ಛಾಶಕ್ತಿರುವ ವಿದ್ಯಾಭಿಮಾನಿಗಳು ಮುಂದೆ ಬರಬೇಕು.

 

ಹಸ್ತಾಂತರ- ದತ್ತು ಸ್ವೀಕಾರ ಬಂಟ್ವಾಳ ಬಿಇಓ ಶೇಷಶಯನ ಅವರಿಂದ ದತ್ತು ಸ್ವೀಕಾರ17VTLhastanthara

ಮಾದರಿಸ್ಕೂಲ್- ವಿಟ್ಲ ಸರಕಾರಿ ಮಾದರಿ ಶಾಲೆ

17VTLmadarischool

ರಂಗಮಂದಿರ- ವಿಟ್ಲ ಭಾರತಿ ಜನಾರ್ದನ ಸೇವಾ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ರಂಗ ಮಂದಿರ 17VTLrangamandira
ಶತಮಾನೋತ್ತರ ಬೆಳ್ಳಿ ಹಬ್ಬವನ್ನಾಚರಿಸಿದ ವಿಟ್ಲ ಸರಕಾರಿ ಮಾದರಿ ಶಾಲೆಗೆ ಅಂತಹ ಸೌಭಾಗ್ಯ ಒಲಿದು ಬಂದಿದೆ. ವಿಟ್ಲ ಭಾರತಿ ಜನಾರ್ದನ ಸೇವಾ ಟ್ರಸ್ಟ್ ‘ಶಾಲೆಗಾಗಿ ನಾವು-ನೀವು’ ಕಾರ್ಯಕ್ರಮದಡಿ ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಹತ್ತಾರು ಹೊಸ ಚಿಂತನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಮಾದರಿ ಸರಕಾರಿ ಶಾಲೆಯಲ್ಲಿದ್ದ ಕೊರತೆಗಳನ್ನು ಗುರುತಿಸಿ, ಸರಕಾರಿ ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಿದೆ. ವಿಟ್ಲ ಸರಕಾರಿ ಮಾದರಿ ಶಾಲೆಯತ್ತ ಪ್ರತಿಯೊಬ್ಬರೂ ದೃಷ್ಟಿ ಹಾಯಿಸುವಂತಾಗಿದೆ.

ವಿಟ್ಲ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ: 1879ರಲ್ಲಿ ಸ್ಥಾಪನೆಯಾದ ವಿಟ್ಲ ಸರಕಾರಿ ಮಾದರಿ ಶಾಲೆಗೆ ಶತಮಾನಗಳೋತ್ತರ ಬೆಳ್ಳಿ ಹಬ್ಬ ಪೂರೈಸಿದ ಹೆಗ್ಗಳಿಕೆಯಿದೆ. ಒಂದು ಕಾಲದಲ್ಲಿ ವಿಟ್ಲ ಮಾದರಿ ಶಾಲೆಯೊಂದೇ ಇಲ್ಲಿನ ಪ್ರಮುಖ ಶಿಕ್ಷಣ ಕೇಂದ್ರ. 1917ರಲ್ಲಿ ತಾಲೂಕು ಬೋಡರ್ಿನ ಮೂಲಕ ಅಧಿಕೃತ ಸರಕಾರಿ ಶಾಲೆಯ ರೂಪ ಪಡೆಯಿತು. 1925ರಲ್ಲಿ ದಲಿತ ವಿದ್ಯಾರ್ಥಿಗಳಿಗೂ ಶಿಕ್ಷಣ ಪಡೆಯುವ ಅವಕಾಶ ಮಾಡಿಕೊಟ್ಟ ಶಾಲೆಯೆನಿಸಿದೆ.
ಕಾಲ ಕ್ರಮೇಣ ಹೈಯರ್ ಪ್ರೈಮರಿ, ಲೋವರ್ ಪ್ರೈಮರಿ ವಿಭಾಗಳಾದವು. ಸರಕಾರದ ಅಧಿಕಾರಿಗಳ ನಿಯಂತ್ರಣದಲ್ಲಿ ಶಾಲೆ ನಡೆಯುತ್ತಿತ್ತು. 1920ರಲ್ಲಿ ತಾಲೂಕು ಬೋರ್ಡ್ ವತಿಯಿಂದ ಶಾಲೆ ಕಟ್ಟಡ ವಿಸ್ತಾರಗೊಂಡಿತು. 1934ರಲ್ಲಿ ತಾಲೂಕು ಬೋರ್ಡ್ನ ಅಧೀನಕ್ಕೊಳಪಟ್ಟಿತ್ತು. 1947ರಲ್ಲಿ ವಿಟ್ಲದ ಮಹಮದೀಯ ಬಾಲಿಕಾ ಪಾಠಶಾಲೆ ಮತ್ತು ಲೇಬರ್ ಶಾಲೆಯೂ ಇದೇ ಶಾಲೆಯೊಂದಿಗೆ ಸೇರಿಕೊಂಡಿತು. 1949ರಲ್ಲಿ ವಿಟ್ಲ ಯೋಗೀಶ್ವರ ಮಠದ ರಾವ್ ಸಾಹೇಬ್ ಲಕ್ಷ್ಮೀನಾಥ ಸ್ವಾಮೀಜಿ ತನ್ನ ಹೆಸರಿನಲ್ಲಿ ಹಾಗೂ ತನ್ನ ತಾಯಿ ದಿ.ಸಾವಿತ್ರಿ ಅಮ್ಮ ಸ್ಮರಣಾರ್ಥ ಒಟ್ಟು ನಾಲ್ಕು ಕೊಠಡಿಗಳನ್ನು ನೀಡಿದ್ದಲ್ಲದೇ 6000 ರೂ. ನಿಧಿಯನ್ನು ಜಿಲ್ಲಾ ಬೋರ್ಡ್ಗೆ ಸಮರ್ಪಿಸಿ ಬಡ ಮಕ್ಕಳ ಶಾಲಾ ಶುಲ್ಕ ವಿನಾಯಿತಿಗೆ ಕಾರಣರಾದರು. ಈ ಶಾಲೆಯ ಅಭಿವೃದ್ಧಿಗೆ ಹಲವಾರು ಮುಖ್ಯ ಶಿಕ್ಷಕಕರುಗಳು, ಸಹ ಶಿಕ್ಷಕಕರುಗಳೂ ಕಾರಣರಾಗಿದ್ದಾರೆ. ಅದಲ್ಲದೇ ಹಲವಾರು ಶಿಕ್ಷಣ ಪ್ರೇಮಿಗಳು ಶಾಲೆಯನ್ನು ಉಳಿಸಿ ಬೆಳೆಸುವುದರಲ್ಲಿ ಪರಿಶ್ರಮ ಪಟ್ಟಿದ್ದಾರೆ. ಹಲವಾರು ಮಂದಿ ಶಾಲೆಯ ಏಳಿಗೆಗಾಗಿ ನಿಧಿ ಸಮರ್ಪಿಸಿದ್ದಾರೆ. ಹಳೆ ವಿದ್ಯಾರ್ಥಿಗಳು ಶಾಲಾಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. 2005 ಶಾಲೆ ಶತಮಾನೋತ್ತರ ಬೆಳ್ಳಿ ಹಬ್ಬದ ವರ್ಷವನ್ನಾಗಿ ಆಚರಿಸಿ ಸಂಭ್ರಮಿಸಿದೆ. ಆ ಬಳಿಕ 10 ವರ್ಷಗಳು ಕಳೆದು ಹೋಗಿವೆ.
ವಿಟ್ಲ ಸೀಮೆಯ ನೂರಾರು ಹಳ್ಳಿಗಳ ವಿದ್ಯಾಕಾಂಕ್ಷಿಗಳಿಗೆ ಅಕ್ಷರ ಕಲಿಸಿದ ಕೀರ್ತಿ ಈ ಶಾಲೆಗೇ ಸಲ್ಲುತ್ತದೆ.
ಇಲ್ಲಿ ಕಲಿತ ಸಹಸ್ರಾರು ವಿದ್ಯಾರ್ಥಿಗಳು ಜಗತ್ತಿನೆಲ್ಲೆಡೆ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಸರು ಮಾಡಿ ಕೀರ್ತಿ ಶೇಷರಾಗಿದ್ದಾರೆ. ಈಗಲೂ ಇಲ್ಲಿ ಕಲಿತ ಹಿರಿ ಜೀವಗಳು ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ಈ ಶಾಲೆಯಲ್ಲಿ 482 ವಿದ್ಯಾರ್ಥಿಗಳು, ಮುಖ್ಯ ಶಿಕ್ಷಕ ಸಹಿತ 15 ಸರಕಾರಿ ಶಿಕ್ಷಕರು, ಟ್ರಸ್ಟ್ ವತಿಯಿಂದ 3 ಗೌರವ ಶಿಕ್ಷಕರು ಇದ್ದಾರೆ.

ಧಾರ್ಮಿಕ, ಶೈಕ್ಷಣಿಕ, ಹಾಗೂ ನಾನಾ ಸಾಮಾಜಿಕ ಕಾರ್ಯನಡೆಸಿಕೊಂಡು ಬರುವ ಭಾರತಿ ಜನಾರ್ದನ ಸೇವಾ ಟ್ರಸ್ಟ್ ಇದೀಗ ಸರಕಾರಿ ಶಾಲೆಯೊಂದನ್ನು ದತ್ತು ಸ್ವೀಕಾರ ಮಾಡಿಕೊಂಡು ಒಂದು ಇನ್ನೊಂದು ಮಾದರಿ ಶಾಲೆಯನ್ನಾಗಿ ಪರಿವರ್ತಿಸಲು ಚಿಂತನೆ ನಡೆಸಿದ್ದಾರೆ. ಅದಮ್ಯ ಶಿಕ್ಷಣ ಪ್ರೇಮಿ, ಸಾಹಿತಿ, ಕವಿ, ಉದ್ಯಮಿಯಾಗಿ ಜನಾನುರಾಗಿಯಾಗಿದ್ದ ದಿ. ಪಲಿಮಾರು ಜನಾರ್ದನ ಪೈ ಯವರ ನೆನಪಿನಲ್ಲಿ ಈಗಾಗಲೇ 5 ಲಕ್ಷ ರೂ. ವೆಚ್ಚದಲ್ಲಿ ಸುಂದರ ರಂಗ ಮಂದಿರ ವೇದಿಕೆ ನಿರ್ಮಿಸಿ ಲೋಕಾರ್ಪಣೆಗೊಳಿಸಿದ್ದಾರೆ.

ಟ್ರಸ್ಟ್ನ ಮೂಲಕ ನಡೆಯಲಿರುವ ‘ಆಲ್ ಇನ್ ಒನ್’ ಯೋಜನೆಯ ಪಕ್ಷಿನೋಟ:

ಭಾರತಿ ಜನಾರ್ದನ ಸೇವಾ ಟ್ರಸ್ಟ್ ವಿಟ್ಲ ಸರಕಾರಿ ಮಾದರಿ ಶಾಲೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಾಲೆಗಾಗಿ ನಾವು-ನೀವು ಯೋಜನೆಯ ಮೂಲಕ ದತ್ತು ಸ್ವೀಕಾರ ಪಡೆದಿದ್ದು, ಮುಂದಿನ ದಿನಗಳಲ್ಲಿ ಶಾಲೆ ಕ್ಯಾಂಪಸ್ನೊಳಗೆ ಹಲವಾರು ಯೋಜನೆಗಳು ಕಾರ್ಯಗತವಾಗಲಿದೆ.

* ಪ್ರಸಕ್ತ ಶೈಕ್ಷಣಿಕ ವರ್ಷದಿಂದ 1 ನೇ ತರಗತಿಯಿಂದ 8ನೇ ತರಗತಿ ತನಕ ಎಲ್ಲಾ ಮಕ್ಕಳಿಗೂ ವಿಶೇಷವಾಗಿ ಇಂಗ್ಲೀಷ್ ಸ್ಪೋಕನ್ ತರಗತಿ.
* 6ನೇ ತರಗತಿಯಿಂದ 8ನೇ ತರಗತಿ ತನಕ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭ.
* ನೇಮಕಗೊಂಡ ಶಿಕ್ಷಕಿಯರಿಗೂ ಸಹ ನುರಿತ ಭಾಷಾ ಪ್ರವೀಣರಿಂದ ತರಬೇತಿ.
* ಮಕ್ಕಳಲ್ಲಿ ನೈತಿಕತೆ, ಪರಿಸರ ಪ್ರೇಮ, ರಾಷ್ಟ್ರಾಭಿಮಾನ, ಮಾನವೀಯ ಮೌಲ್ಯಗಳು ಬೆಳೆಸುವ ಶಿಕ್ಷಣ.
* ಕ್ರೀಡಾಸಕ್ತಿಯ ಮಕ್ಕಳನ್ನು ಗುರುತಿಸಿ ಅಂತಹ ಮಕ್ಕಳಿಗೆ ವಿಶೇಷ ಕ್ರೀಡಾ ತರಬೇತಿ.
* ಸುಸಜ್ಜಿತ ಕ್ರೀಡಾಂಗಣ, ಟ್ರ್ಯಾಕ್ ನಿಮರ್ಾಣ.
* ವಿಸ್ತೃತವಾಗಿ ಕಂಪ್ಯೂಟರ್ ತರಬೇತಿ.
* ಈಜುಕೊಳ ನಿರ್ಮಾಣದ ಚಿಂತನೆ.
* ಸುಂದರ ಶಾಲಾ ಉಪವನ ನಿರ್ಮಾಣ
* ಮಕ್ಕಳಿಗೆ ರಂಗ ಕಲೆ ತರಬೇತಿ
* ಚಿತ್ರಕಲೆ, ಸಂಗೀತ, ನೃತ್ಯ ತರಬೇತಿ.
* ಮಕ್ಕಳಿಗೆ ಉಚಿತ ಬಸ್ಸಿನ ವ್ಯವಸ್ಥೆ .
* 1ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಚೀಲ ವಿತರಣೆ.
* ಬಿಡುವಿನ ವೇಳೆಯಲ್ಲಿ ಜಗತ್ತಿನಲ್ಲಿ ಬದುಕಿದ ಅವತಾರ ಪುರುಷರ, ಮಹಾನ್ ವ್ಯಕ್ತಿಗಳ ಪರಿಚಯದ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶನ.
* ಪರಿಸರ ಸಂರಕ್ಷಣೆಯ ಮಹತ್ವ, ಸಾಹಸ, ಸಾಧನಾಮಾಲಿಕೆಗಳನ್ನು ಚಿತ್ರಗಳ ಪ್ರದರ್ಶನ.
* ಕೃಷಿ ಸಂಸ್ಕೃತಿಯ ಪರಿಚಯವಾಗಲು ಗದ್ದೆ, ಕೃಷಿ ಕ್ಷೇತ್ರಗಳ ಸಂದರ್ಶನ, ಕೃಷಿ ಪ್ರಾತ್ಯಕ್ಷಿಕೆ.
* ಸಾಹಿತ್ಯಗೋಷ್ಠಿ, ಮಕ್ಕಳ ಕವಿಗೋಷ್ಠಿ.
* ಮಕ್ಕಳಿಗೆ ಬ್ಯಾಂಕ್ ವ್ಯವಹಾರದ ಬಗ್ಗೆ ಬ್ಯಾಂಕ್ಗಳಲ್ಲಿಯೇ ಮಾಹಿತಿ.
* ಯೋಗಾಭ್ಯಾಸ ತರಬೇತಿ
* ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಸುಸಜ್ಜಿತ ವಿಜ್ಞಾನ, ಗಣಿತ ಪ್ರಯೋಗಾಲಯ, ವಾಚಾನಾಲಯಗಳ ನಿರ್ಮಾಣ.
* ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮಾಥ್ರ್ಯ, ಸುಪ್ತ ಪ್ರತಿಭೆಯನ್ನು ಗುರುತಿಸಿ ಸೂಕ್ತ ಪ್ರೋತ್ಸಾಹ.
,,,

ಸರಕಾರಿ ಶಾಲೆಯೊಂದನ್ನು ದತ್ತು ಸ್ವೀಕಾರ ಮಾಡಿಕೊಂಡು ಒಂದು ವ್ಯವಸ್ಥಿತವಾಗಿ ರೂಪುಗೊಳಿಸುವ ವಿದ್ಯಾಭಿಮಾನಿಗಳಿದ್ದರೆ ಹೆತ್ತವರು ಮತ್ತೆ ಸರಕಾರಿ ಶಾಲೆಗಳ ಕಡೆ ಗಮನ ಹರಿಸುತ್ತಾರೆ. ಸರಕಾರಿ ಶಾಲೆಗಳಲ್ಲಿಯ ಶಿಕ್ಷಕರು ಎಷ್ಟೇ ಪ್ರಯತ್ನಪಟ್ಟರೂ, ಊರ ವಿದ್ಯಾಭಿಮಾನಿಗಳ ಸಹಕಾರವಿಲ್ಲದೇ ಅಭಿವೃದ್ಧಿಗೊಳಿಸಲು ಸಾಧ್ಯವಿಲ್ಲ. ಭಾರತಿ ಜನಾರ್ದನ ಸೇವಾ ಟ್ರಸ್ಟ್ ಈ ನಿಟ್ಟಿನಲ್ಲಿ ಸಮಾಜಕ್ಕೆ ಮಾದರಿಯಾಗಿದೆ.

ವಿಟ್ಲ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆ ಹೆಚ್. ವಿಶ್ವನಾಥ್- ಮುಖ್ಯ ಶಿಕ್ಷಕ,
,

ಪ್ರಸ್ತುತ ಸಮಯದಲ್ಲಿ ಪ್ರೌಢಶಾಲೆಯ ಮೆಟ್ಟಿಲತ್ತಿದಾಗ ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಹೊಮ್ಮಿಂದೊಮ್ಮೆಲೇ ಕುಸಿದು ಹೋಗುವುದು ಸಾಮಾನ್ಯ ಸಂಗತಿ. ಯಾಕೆಂದರೆ ತಮಗೆ ಇಂಗ್ಲೀಷ್ ಜ್ಞಾನವಿಲ್ಲವೆಂಬ ಕೀಳರಿಮೆ ಅವರನ್ನು ಆವರಿಸಿಕೊಂಡಿರುತ್ತದೆ. ಈ ಕೀಳರಿಮೆಯ ಸುಳಿಯಿಂದ ಹೊರ ಬರಬೇಕಾದರೆ ಅವರೂ ಸಹ ಇಂಗ್ಲೀಷ್ ಭಾಷೆಯ ಬಗ್ಗೆ ಪ್ರೌಢಿಮೆಯನ್ನು ಸಾಧಿಸಬೇಕು. ನಮ್ಮ ಉದ್ದೇಶ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚುಗೊಳಿಸುವುದಲ್ಲ. ಊರವರ ಸರ್ವ ಸಹಕಾರಿದಿಂದ ಕೋಟಿಗಟ್ಟಲೆ ವೆಚ್ಚದಲ್ಲಿ ದೇಗುಲಗಳ, ದೈವಸ್ಥಾನಗಳ ಜೀರ್ಣೋದ್ಧಾರ ಪ್ರಕ್ರಿಯೆ ಅಲ್ಲಲ್ಲಿ ನಡೆಯುತ್ತಿದೆ. ಅದೇ ತೆರನಾಗಿ ಊರಿನ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಊರ ವಿದ್ಯಾಭಿಮಾನಿಗಳು, ಹೆತ್ತವರು, ಸಂಘಸಂಸ್ಥೆಗಳು ಮನಪೂರ್ವಕವಾಗಿ ಸಹಕರಿಸಿ ಅಭಿವೃದ್ಧಿಗೊಳಿಸಬೇಕು. ನಮ್ಮ ಟ್ರಸ್ಟ್ನ ಕಾರ್ಯ ಹೊಸ ಶಿಕ್ಷಣ ಕ್ರಾಂತಿಗೆ ನಾಂದಿಯಾದರೆ ನಮ್ಮ ಪರಿಶ್ರಮ ಅರ್ಥಪೂರ್ಣವೆನಿಸುತ್ತದೆ.
-ಸುಬ್ರಾಯ ಪೈ, ಸಂಚಾಲಕ, ಭಾರತಿ ಜನಾರ್ದನ ಸೇವಾ ಟ್ರಸ್ಟ್, ವಿಟ್ಲ

ರಮೇಶ್.ಕೆ ಪುಣಚ

ಚಿತ್ರ: ಶಿಲ್ಪಿ ಸ್ಟುಡಿಯೋ, ವಿಟ್ಲ

By Suddi9

Leave a Reply

Your email address will not be published. Required fields are marked *