ಸಮಾಜವು ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದೆ. ಬದಲಾಗುತ್ತಿರುವ ಸಮಾಜಕ್ಕೆ ಅನುಗುಣವಾಗಿ ಶೈಕ್ಷಣಿಕ ಕ್ಷೇತ್ರದಲ್ಲೂ ಪಲ್ಲಟಗಳು ನಡೆಯುತ್ತಿದೆ. ವಿದ್ಯಾರ್ಥಿಗಳು ಪರಂಪರಾಗತ ಮಾದರಿಯ ಕಲಿಕೆಯ ಜೊತೆಗೆ ತಂತ್ರಜ್ಞಾನದ ಬಳಕೆಯನ್ನು ಕೂಡ ಶಿಕ್ಷಣದ ಕ್ರಮದಲ್ಲಿ ಜೋಡಿಸಬೇಕಾಗಿದೆ. ಪಠ್ಯ ಕೇಂದ್ರಿತ ಶಿಕ್ಷಣದ ಜೊತೆಯಲ್ಲಿ ಪಠ್ಯೇತರ ಶಿಕ್ಷಣವು ಕೂಡ ಅಗತ್ಯವಾದುದು.

ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಅಗತ್ಯತೆ ಇದೆ ಎಂದು ಶ್ರೀ ವೆಂಕಟರಮಣ ಸ್ವಾಮಿ ಪದವಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಿ.ವಿ. ರಘುನಂದನ್ ಅಭಿಪ್ರಾಯಪಟ್ಟರು.
INAUGURATION PHOTO
ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಪ.ಪೂ ಕಾಲೇಜಿನಲ್ಲಿ 2015-16ನೇ ಸಾಲಿನ ವಿದ್ಯಾರ್ಥಿ  ಸಂಘದ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಎಸ್.ವಿ.ಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್ ಶುಭಾಶಂಸನೆಗೈದರು. ನೂತನ ವಿದ್ಯಾರ್ಥಿ  ಸಂಘದ ಪದಾಧಿಕಾರಿಗಳಾದ ಚಿನ್ಮಯ, ಅನೂಪ್ ಸಿ., ಶ್ರೀನಿಧಿ ವಿ ಆಚಾರ್ಯ, ಪ್ರಜ್ಞಾ ಇವರನ್ನು ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಅಭಿನಂದಿಸಿದರು.
ಎಸ್.ವಿ.ಎಸ್ ಕಾಲೇಜುಗಳ ಸಂಚಾಲಕ ಕೂಡಿಗೆ ಪ್ರಕಾಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳ ಜ್ಞಾನ ವಿಕಾಸಕ್ಕೆ ಪೂರಕವಾಗುವ ಎಲ್ಲಾ ಸವಲತ್ತುಗಳು ವಿದ್ಯಾ ಸಂಸ್ಥೆಯಲ್ಲಿದೆ ಎಂದರು.
ವಿದ್ಯಾರ್ಥಿ  ಕ್ಷೇಮಪಾಲನಾಧಿಕಾರಿ ಬಾಲಕೃಷ್ಣ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾಥರ್ಿನಿಯರಾದ ಶ್ರೀಧನ್ಯಾ, ಸೌಭಾಗ್ಯ ಎ. , ರಾಜಶ್ರೀ ಪ್ರಾರ್ಥಿಸಿದರು.
ವಿದ್ಯಾರ್ಥಿ  ಸಂಘದ ನಾಯಕ ಚಿನ್ಮಯ ಸ್ವಾಗತಿಸಿ, ಜೊತೆ ಕಾರ್ಯದರ್ಶಿ  ಪ್ರಜ್ಞಾ ವಂದಿಸಿದರು. ಕಾರ್ಯದರ್ಶಿ  ಶ್ರೀನಿಧಿ ವಿ. ಆಚಾರ್ಯ ಸದ್ರಿ ವರ್ಷದ ವಿದ್ಯಾರ್ಥಿ  ಸಂಘದ ವರದಿ ವಾಚಿಸಿದರು. ಸ್ವಾತಿ ಸಮಂತ ಸೊರಾಸ್ ಕಾರ್ಯಕ್ರಮ ನಿರ್ವಹಿಸಿದರು.
ಲಲಿತಕಲಾ ಸಂಘದ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

– ಪ್ರೊ ಬಿ.ವಿ. ರಘುನಂದನ್

By Suddi9

Leave a Reply

Your email address will not be published. Required fields are marked *