ಬಂಟ್ವಾಳ : ಬಂಟ್ವಾಳ-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮೂರ್ಜೆ  ಬಳಿಯ ಕುದ್ರೋಟಿಕಟ್ಟೆ ಎಂಬಲ್ಲಿ ಸರಕಾರಿ ಬಸ್ಗಳು ಮತ್ತು ಬೈಕ್ ಢಿಕ್ಕಿಯಾಗಿ ಐದು ಮಂದಿ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಸಂಭವಿಸಿದೆ.
ಬೈಕ್ ಸವಾರ ಬಳ್ಳಮಂಜದ ಕೃಷ್ಣಪ್ಪ (49), ಬಸ್ ಚಾಲಕ ಹಾಸನದ ರೇವಣ್ಣ (35), ಪ್ರಯಾಣಿಕರಾದ ಬೆಳ್ತಂಗಡಿ ಲಾಲದ ಪಾರ್ವತಿ(38), ರಾಜೇಶ್ವರಿ(30) ಬಸ್ ನಿರ್ವಾಹಕ ನಾಗರಾಜ(36) ಗಾಯಾಳುವಾಗಿದ್ದು ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸಲಾಗಿದೆ.

2606pkt G1
ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಎದುರುಗಡೆಯಿಂದ ಬರುತ್ತಿದ್ದ ಬಸ್ನ್ನು ಓವರ್ಟೇಕ್ ಮಾಡುತ್ತಿದ್ದ ಬೈಕ್ಗೆ ಢಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಬಸ್ ಮತ್ತು ಬೈಕ್  ಢಿಕ್ಕಿಯಾಗಿತ್ತು.  ಈ ವೇಳೆ ಬಸ್ ಚಾಲಕ ಬಸ್ನ್ನು ರಸ್ತೆ ಬದಿಗೆ ಇಳಿಸಿದುದರಿಂದ ಬಸ್ ನಿಯಂತ್ರಣ ತಪ್ಪಿ ಧರೆಗೆ ಬಡಿಯಿತು. ಇದರಿಂದ ಬೈಕ್ ರಸ್ತೆಗೆ ಬಿದ್ದು ಸವಾರ ಗಂಭೀರ ಗಾಯಗೊಂಡಿದ್ದರು. ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

By Suddi9

Leave a Reply

Your email address will not be published. Required fields are marked *