ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಸತ್ಯದೇವತಾ ಚಾರಿಟೇಬಲ್ ಟ್ರಸ್ಟಿನ ವತಿಯಿಂದ ಶತಮಾನೋತ್ಸವ ಸಂಭ್ರಮದಲ್ಲಿರುವ ಪಾಣೆಮಂಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಉಚಿತ ಪುಸ್ತಕ ವಿತರಿಸಲಾಯಿತು.

ಟ್ರಸ್ಟಿನ ಅಧ್ಯಕ್ಷ ಪಿ.ನಿತ್ಯಾನಂದ ಸಪಲ್ಯ, ಕೆಡಿಪಿ ಸದಸ್ಯ ಉಮೇಶ ಬೋಳಂತೂರು, ಟ್ರಸ್ಟಿನ ಮಾಜಿ ಅಧ್ಯಕ್ಷ ಲಿಂಗಪ್ಪ ಕೊಟ್ಟಾರಿ, ಉದ್ಯಮಿ ಆಂಟನಿ ಡಿಸೋಜ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಬಶೀರ್, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ, ಮುಖ್ಯಶಿಕ್ಷಕಿ ಗೀತಾ ಭಾಯಿ, ಶಿಕ್ಷಕಿ ಸವಿತಾ, ಸರೋಜ ಮತ್ತಿತರರು ಇದ್ದರು
