ಬಂಟ್ವಾಳ: ಇತ್ತೀಚೆಗೆ ಕೀರ್ತನಾ ಸಂಗೀತ ಶಾಲೆ-ನರಿಕೊಂಬು ಇದರ ಆಶ್ರಯದಲ್ಲಿ ಸಂಗೀತ ತರಗತಿ ಪಾಣೆಮಂಗಳೂರು ಎಸ್.ವಿ.ಎಸ್. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪ್ರಾರಂಭಗೊಂಡಿತು. ಆ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮವನ್ನು ಶಾಲೆಯ ಸಂಚಾಲಕರಾದ ಶ್ರೀ.ಪಿ.ವೆಂಕಟ್ರಾಯ ಶೆಣೈ ಇವರು ದೀಪ ಬೆಳಗಿಸುವ ಮುಖೇನ ಉದ್ಘಾಟಿಸಿದರು.
IMG-20150623-WA0014
ಮುಖ್ಯ ಅತಿಥಿಗಳಾಗಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಮೀ ಕೆ.ಎನ್ ಮಾತನಾಡಿ ಸಂಗೀತ ಒಂದು ಅದ್ಬುತ ಕಲೆ. ಈ ಕಲೆಗೊಂದು ಪರಂಪರೆ ಇದೆ. ಪ್ರಸಕ್ತ ಸನ್ನಿವೇಶದಲ್ಲಿ ಮಕ್ಕಳು ಅನಗತ್ಯ ವಿಚಾರಗಳಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದು ಬಹಳ ಅಪಾಯ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳ ಬಿಡುವಿನ ವೇಳೆಯಲ್ಲಿ ಟಿ.ವಿ ಮೊಬೈಲ್ ಮುಂತಾದ ಮಾಧ್ಯಮಗಳಿಂದ ದೂರವಿರಿಸಿ ಸಂಗೀತ ತರಗತಿಗಳಿಗೆ ಸೇರಿಸಿದರೆ ಒಳಿತು. ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿ ಸಂಗೀತದಂತಹ ಕಲೆಗಳು ಭವಿಷ್ಯದಲ್ಲಿ ಸತ್ಪ್ರಜೆಗಳನ್ನಾಗಿ ರೂಪಿಸಲು ನಾಂದಿಯಾಗಬಹುದು. ಮಾತೆ ಸರಸ್ವತಿ ಅನುಗ್ರಹ ಎಲ್ಲಾ ವಿದ್ಯಾರ್ಥಿಗಳ ಮೇಲೆ ಇರಲಿ ಎಂದು ಶುಭ ಹಾರೈಸಿದರು. ಇನ್ನೋರ್ವ ಅತಿಥಿ ಕೀರ್ತನಾ ಸಂಗೀತ ಶಾಲೆಯ ಸಂಚಾಲಕ ಕರ್ಬೆಟ್ಟು ಕೃಷ್ಣರಾಜ ಭಟ್ ರವರು ಶುಭಕೋರಿ ಮಾತನಾಡಿದರು.
ವೇದಿಕೆಯಲ್ಲಿ ಶಾಲೆಯ ಶಿಕ್ಷಕ ಶ್ರೀ.ವಿನೋದ್, ಡಾ|| ಸುಬ್ರಹ್ಮಣ್ಯ ಭಟ್, ಸಂಗೀತ ಗುರುಗಳಾದ ಶ್ರೀ.ಎಚ್.ಕೃಷ್ಣಾಚಾರ್ಯ ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಸಂಗೀತ ಗುರುಗಳಾದ ಶ್ರೀಮತಿ ರಜತ ಕೃಷ್ಣಾಚಾರ್ಯ ಸ್ವಾಗತಿಸಿದರು. ಶ್ರೀರಾಮ್ ಸುಜೀರ್ ಕಾರ್ಯಕ್ರಮ ನಿರೂಪಿಸಿ, ಸುರೇಶ್ ಕುಮಾರ್ ವಂದಿಸಿದರು.

By Suddi9

Leave a Reply

Your email address will not be published. Required fields are marked *