ಬಂಟ್ವಾಳ: ಮನೆಯ ಮೇಲೆ ಮರ ಉರುಳಿ ಬಿದ್ದು ಸಂಪೂರ್ಣ ನಷ್ಟ ಅನುಭವಿಸಿರುವ ತಾಲೂಕಿನ ಭಂಡಾರಿಬೆಟ್ಟು ನಿವಾಸಿ ಕೇಶವ ಕುಲಾಲ್ ಅವರ ಮನೆಗೆ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ನೆರೆವಿನ ಭರವಸೆ ನೀಡಿದ್ದಾರೆ.
ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪಾಡಿಗುತ್ತು ಭೇಟಿ ನೀಡಿ ಮನೆ ದುರಸ್ತಿಗೆ ಆರ್ಥಿಕ ನೆರವು ನೀಡಿದರು. ಈ ಸಂದರ್ಭ ಪುರಸಭಾ ಸದಸ್ಯ ದೇವದಾಸ್ ಶೆಟ್ಟಿ, ಬಿಜೆಪಿ ಪ್ರಮುಖರಾದ ಜಿ.ಆನಂದ, ದಿನೇಶ್ ಭಂಡಾರಿ, ದೇವಪ್ಪ ಪೂಜಾರಿ, ಪವನ್ ಕುಮಾರ್ ಮತ್ತಿತರರು ಹಾಜರಿದ್ದರು.
ಪುರಸಭಾಧ್ಯಕ್ಷೆ ಭೇಟಿ: ಪುರಸಭೆಯ ಅಧ್ಯಕ್ಷೆ ವಸಂತಿ ಚಂದಪ್ಪ ಭೇಟಿ ನೀಡಿ ಮನೆಮಂದಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ಪುರಸಭಾ ಸದಸ್ಯ ಜಗದೀಶ ಕುಂದರ್, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಸಮುದಾಯ ಅಧಿಕಾರಿ ಮತ್ತಡಿ, ಉಮಾವತಿ ಹಾಜರಿದ್ದರು.
ಸೋಮವಾರ ಸಂಜೆ ಸುರಿದ ಗಾಳಿ ಮಳೆಗೆ ಮನೆ ಪಕ್ಕದ ಹುಣಸೆ ಮರ ಉರುಳಿ ಬಿದ್ದು ಮನೆಗೆ ಭಾಗಶಃ ಹಾನು ಉಂಟಾಗಿತ್ತು. ಪುರಸಭಾ ಸದಸ್ಯ ಜಗದೀಶ ಕುಂದರ್ ನೇತೃತ್ವದಲ್ಲಿ ಸ್ಥಳೀಯ ಯುವಕರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಾತ್ರಿ 11.30ರವರೆಗೆ ಕಾರ್ಯಚರಣೆ ನಡೆಸಿ ಮನೆಯ ಮೇಲೆ ಬಿದ್ದಿದ್ದ ಮರವನ್ನು ತೆರವುಗೊಳಿಸಿದ್ದರು.



