ಬ್ರಹ್ಮರಕೂಟ್ಲು :  ಜ್ಯೊತಿಗುಡ್ಡೆ ಹತ್ತಿರದ ರೈಲ್ವೆ ಪರಿಸರದ   ಪ್ರಿಯರ ಸಹಕಾರದೊಂದಿಗೆ ಜೂ. 21 ರಂದು ಭಾನುವಾರ  ಬೆಳಗ್ಗೆ  ಶ್ರಮ ಸೇವೆಯ ಮೂಲಕ ಗಿಡನೆಡುವ ಕಾರ್ಯವನ್ನು ತರಿಕಿಟ ಕಲಾ ಕಮ್ಮಟವು ಹಮ್ಮಿಕೊಂಡಿತು. ಜ್ಯೊತಿಗುಡ್ಡೆ ಹತ್ತಿರದ ರೈಲ್ವೆ ಪರಿಸರದ ಸ್ಥಳದಿಂದ ಆರಂಭಿಸಿ ಚಂದ್ರಿಗೆಯವರೆಗೆ ಸುಮಾರು 120 ಗಿಡಗಳನ್ನು ನೆಡಲಾಯಿತು.

IMG-20150622-WA0010

 

IMG-20150622-WA0002 (1)

IMG-20150622-WA0003

IMG-20150622-WA0004

IMG-20150622-WA0005

IMG-20150622-WA0006

IMG-20150622-WA0007

IMG-20150622-WA0008

IMG-20150622-WA0009

IMG-20150622-WA0011

IMG-20150622-WA0019
“ಈ ನೆಲ ಈ ಜಲ ಈ ಮಣ್ಣು ನಮ್ಮದು. ರಕ್ಷಿಸುವ ಹೊಣೆಗಾರಿಕೆ ನೀವೇ ಹೇಳಿ ಯಾರದು” ಹಾಡಿನ ಮೂಲಕ ಗಿಡ ನೆಡುವ ಕೆಲಸಕ್ಕೆ ನಾಂದಿ ಹಾಡಲಾಯಿತು. ಗಿಡ ನೆಟ್ಟು ಬೆಳೆಸಿದಾಗ ಪ್ರಾಣಿ ಪಕ್ಷಿಗಳಿಗೆ ನಾವು ಸಹಾಯ ಮಾಡುತ್ತಿದ್ದೇವೆ ಅನ್ನುವ ಅಂಶ ನಿಜ. ಆದರೆ ಅದಕ್ಕಿಂತಲೂ ಹೆಚ್ಚಾಗಿ ನಾವಿಲ್ಲಿ ಬದುಕಬೇಕಾದರೂ ಗಿಡಮರಗಳು ಅನಿವಾರ್ಯ. ಹಾಗೆ ನೋಡಿದಾಗ ಇದು ನಾವು ನಮಗಾಗಿಯೆ ಮಾಡುತ್ತಿರುವ ಕೆಲಸ. ಕೆಲವರು ಈ ರೀತಿಯ ಕೆಲಸವನ್ನು ಅಪಹಾಸ್ಯಮಾಡಬಹುದು. ನಾವು ಉತ್ತಮ ಕೆಲಸ ಮಾಡುತ್ತಿದ್ದೇವೆಂದು ನಮ್ಮ ಮನಸಲ್ಲಿ ಸ್ಪಷ್ಟವಾಗಿದ್ದರೆ ಅದೇ ಒಂದು ಪ್ರೇರಣೆ. ನೆಟ್ಟ ಎಲ್ಲಾ ಗಿಡಗಳು ಬದುಕುತ್ತವೆ ಎನ್ನುವ ಭರವಸೆಯು ಇಲ್ಲ. ನೂರಾರು ಗಿಡ ನೆಟ್ಟಾಗ ಹತ್ತಾರಾದರೂ ಬದುಕಿ ಉಳಿಯಬಹುದು . ಈ ಯೋಚನೆಯೊಂದಿಗೆ ಕೆಲಸ ಪ್ರಾರಂಭಿಸಲಾಯಿತು.
ಗಿಡ ನೆಡುವ ಈ ಪ್ರಕ್ರಿಯೆ ಮುಂದುವರೆಯಲು ಜೊತೆಗೆ ಈ ವಿಚಾರ ಎಲ್ಲರಿಗೂ ತಲುಪುವ ನಿಟ್ಟಿನಲ್ಲಿ ವಾಟ್ಸಾಪ್, ಫೇಸ್ಬುಕ್ ಮೊದಲಾದ ಮಾದ್ಯಮ ಬಳಸಬೇಕು. ಇನ್ನೂ ಕೆಲವರಿಗೂ ಪ್ರೇರಣೆ ಸಿಗಬಹುದು ಎಂಬ ಅಭಿಪ್ರಾಯವು ವ್ಯಕ್ತವಾಯಿತು.
ಊರ ಪ್ರಮುಖರಾದ ಸದಾಶಿವ ಡಿ ತುಂಬೆ, ಮಹಮ್ಮದ್ ವಳವೂರು, ದಿವಾಕರ್ ಪಂಬದಬೆಟ್ಟು, ಪ್ರಕಾಶ್ ಆಚಾರಿ ರಾಮಲ್ಕಟ್ಟೆ, ದಿವಾಕರ ಕುಪ್ಪಿಲ, ಉಮೇಶ್ ಪೂಜಾರಿ ರೆಂಜೋಡಿ, ಸಂತೋಷ್ ದೇವಂದಬೆಟ್ಟು, ಶಶಿಧರ್ ಬೆಟ್ಟು, ಹಮೀದ್ ಪಾದೆ ಮೊದಲಾದವರನ್ನೊಳಗೊಂಡಂತೆ ಸುಮಾರು 45 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಗಿಡ, ಮರ, ನೀರು, ಗಾಳಿ, ಮಳೆ ತನ್ನನ್ನು ಯಾವತ್ತೂ ಯಾವುದೇ ಒಂದು ಪಂಗಡಕ್ಕಾಗಿ ಮೀಸಲಿಟ್ಟಿಲ್ಲ. ಸಕಲ ಜೀವರಾಶಿಗಳನ್ನು ಸಮಾನವಾಗಿ ಕಂಡಿದೆ. ಅಂತೆಯೇ ಗಿಡ ನೆಡುವ ಈ ಕೆಲಸದಲ್ಲಿ ಕೂಡ ಜಾತಿ, ಧರ್ಮ, ಮತ, ಪಕ್ಷ ಮೀರಿ ಶ್ರಮಿಸಿದರು.
ತರಿಕಿಟ ಕಲಾ ಕಮ್ಮಟದ ಉದಯ ಕುಮಾರ್ ಸ್ವಾಗತಿಸಿದರು. ರಮ್ಯಾ ಬೀಡು ವಂದನಾರ್ಪಣೆ ಗೈದರು.
ವಾಣಿ ಪೆರಿಯೋಡಿ
ಸಹ ನಿರ್ದೇಶಕರು
ತರಿಕಿಟ ಕಲಾ ಕಮ್ಮಟ

By Suddi9

Leave a Reply

Your email address will not be published. Required fields are marked *