ಮೂಡುಬಿದಿರೆ: ಪ್ರಾಂತ್ಯ ಗ್ರಾಮದ ಲಾಡಿ ಪರಿಸರದಲ್ಲಿ ಅಘೋಷಿತ ವಿದ್ಯುತ್ ಕಡಿತವಾಗುತ್ತಿದ್ದು, ಸಮಸ್ಯೆಯನ್ನು ಸರಿಪಡಿಸುವಂತೆ ಸ್ಥಳೀಯ ನಾಗರಿಕರ ನಿಯೋಗ ಸೋಮವಾರ ಮೆಸ್ಕಾಂ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಲಾಡಿ, ಪೇಪರ್ ಮಿಲ್ ಪರಿಸರದಲ್ಲಿ ಶಾಲೆ, ವಿದ್ಯಾರ್ಥಿ ನಿಲಯ, ಮಹಿಳಾ ತರಬೇತಿ ಕೇಂದ್ರ, ಮಸೀದಿ, ದೇವಸ್ಥಾನ ಇದ್ದು ಜನವಸತಿ ಪ್ರದೇಶವಾಗಿರುತ್ತದೆ. ಇಲ್ಲಿ ಆಗಾಗ್ಗೆ ವಿದ್ಯುತ್ ಕಡಿತವಾಗುತ್ತಿರುವುದರಿಂದ ನಾಗರಿಕರಿಗೆ ಸಮಸ್ಯೆಯಾಗಿದೆ. ಈ ಪ್ರದೇಶವನ್ನು ನಗರಫೀಡರ್‍ಗೆ ಸೇರಿಸಿದರೆ ಸಮಸ್ಯೆ ಬಹುತೇಕ ಕಡಿಮೆಯಾಗುತ್ತದೆ ಎಂದು ಸ್ಥಳೀಯ ಮುಖಂಡ, ನಾಮನಿರ್ದೇಶಿತ ಪುರಸಭೆ ಸದಸ್ಯ ಇಕ್ಬಾಲ್ ಕರೀಂ ಮನವಿಯಲ್ಲಿ ತಿಳಿಸಿದರು.
23mdb1
ಎರಡು ಫೀಡರ್‍ಗೆ ಶಿಫಾರಸು: ಮನವಿ ಸ್ವೀಕರಿಸಿದ ಸಹಾಯಕ ಎಕ್ಸಿಕ್ಯುಟಿವ್ ಎಂಜಿನಿಯರ್ ಸತೀಶ್ ಕುಮಾರ್ ಸ್ಥಳೀಯ ಗುತ್ತಿಗೆದಾರರ ಮುಷ್ಕರ ಹಾಗೂ ಕಛೇರಿಯಲ್ಲಿ ಲೇನ್‍ಮೇನ್‍ಗಳ ಕೊರತೆಯಿಂದಾಗಿ ಮಳೆಗಾದಲ್ಲಿ ವಿದ್ಯುತ್ ದುರಸ್ಥಿ ಕಾರ್ಯಗಳು ವಿಳಂಬವಾಗುತ್ತಿದೆ. ಆದರೂ ಇದ್ದ ಸಿಬಂದಿಗಳನ್ನು ಅಹರ್ನಿಶಿ ದುಡಿಸಿ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದೇವೆ. ಸ್ವರಾಜ್ಯ ಮೈದಾನ ಮತ್ತು ಕೋಟೆಬಾಗಿಲು ಪ್ರದೇಶಕ್ಕೆ ಪ್ರತೇಕ ಫೀಡರ್‍ಗೆ ಶಿಫಾರಸು ಮಾಡಲಾಗಿದೆ ಎಂದರು. ವಿಭಾಗೀಯ ಅಧಿಕಾರಿ ಪ್ರಕಾಶ್ ಕುಮಾರ್ ಇದ್ದರು.

ಪುರಸಭೆ ಸದಸ್ಯೆ ವನಿತಾ, ಮೂಡಾ ಸದಸ್ಯ ಸುರೇಶ್ ಪ್ರಭು, ಯುವಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್ ಮತ್ತಿತರರಿದ್ದರು.

By Suddi9

Leave a Reply

Your email address will not be published. Required fields are marked *