ಬಂಟ್ವಾಳ: ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಬಿಸಿರೋಡ್ ರಂಗೋಲಿ ಹಾಲ್ ನಲ್ಲಿ ಸೇವಾ ಭಾರತಿ ಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ಸಾರ್ವ ಜನಿಕ ವಿಶ್ವಯೋಗ ದಿನಾಚರಣೆಯನ್ನು ಜೂ.21ರಂದು ಭಾನುವಾರ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಠಾಣಾ ಎ ಎಸ್ ಪಿ ರಾಹುಲ್ ಕುಮಾರ್ ವಹಿಸಿದ್ದರು. ಮಾತನಾಡಿದ ಅವರು ಯೋಗವನ್ನು ಪ್ರತಿಯೊಬ್ಬ ವ್ಯಕ್ತಿಯು ಅನುಸರಿಸಬೇಕಾದ ಅನಿವಾರ್ಯತೆ ಇಂದು ನಿರ್ಮಾಣವಾಗಿದೆ. ವಿಶ್ವ ಯೋಗದಿನದ ಈ ಶುಭ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ಕೂಡ ಯೋಗವನ್ನು ಮುಟ್ಟಿಸುವ ಸಲುವಾಗಿ ಸೇವಾ ಭಾರತಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅತ್ಯಂತ ಶ್ಲಾಂಘನೀಯವಾಗಿದೆ ಎಂದು ಶುಭ ನುಡಿದರು.
ನ್ಯಾಯವಾದಿ ಪ್ರಸಾದ್ ಕುಮಾರ್ ವಿಶ್ವಯೋಗ ದಿನದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಯೋಗ ಶಿಕ್ಷಕರಾದ ಸಂಜಯ ಸಿ ವಿ ಯೋಗ ಪ್ರಾತ್ಯಕ್ಷತೆ ಮತ್ತು ಯೋಗದಿಂದ ಜನರಿಗೆ ಪ್ರಯೋಜನಗಳ ಬಗ್ಗೆ ಮಾರ್ಗದರ್ಶನ ನೀಡಿದರು. ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಂಟ್ವಾಳ ಇದರ ಸಂಘಚಾಲಕಾಗಿರುವ ಕೊಡ್ಮಾಣ್ ಕಾಂ ತಪ್ಪ ಶೆಟ್ಟಿ, ಸೇವಾ ಭಾರತಿ ಬಂಟ್ವಾಳ ಇದರ ಅಧ್ಯಕ್ಷರಾಗಿರುವ ನ್ಯಾಯವಾದಿ ರಮೇಶ ಉಪಾದ್ಯಾಯ , ಉಪಸ್ಥಿತರಿದ್ದರು. ಆಶಾಪ್ರಸಾದ್ ವಂದೆ ಮಾತರಂ ಹಾಡಿದರು. ಸಾರ್ವಜನಿಕರಿಗೆ ಪ್ರಾಣಾಯಮ ಮತ್ತು ಸೂರ್ಯನಮಸ್ಕಾರ ಅಭ್ಯಾಸ ವರ್ಗ ನಡೆಸಲಾಯಿತು. ಅಲ್ಲದೆ ಮಧು ಮೇಹ ಮುಕ್ತ ಭಾರತ ನಿರ್ಮಾಣ ಮಾಡುವ ಕುರಿತು ವಿಶೇಷ ಮಾಹಿತಿ ನೀಡಿ -10ದಿನದ ಮಧು ಮೇಹ ಮುಕ್ತ ಯೋಗ ಶಿಬಿರವನ್ನು ಬ್ರಾಹ್ಮಣ ಪರಿಷತ್ ಬಂಟ್ವಾಳ ಇಲ್ಲಿ ಹಮ್ಮಿಕೊಳ್ಳಲಾಗುವುದು . ಪ್ರತಿದಿನ ಬೆಳಗ್ಗೆ ಯೋಗ ಶಿಕ್ಷಣ ಮುಂದುವರಿಸಲಾಗುವುದು ಎಂದು ದಾಮೋದರ ನೆತ್ತೆರ್ ಕೆರೆ ಹೇಳಿದರು. ಸತೀಶ ಪಲ್ಲಮಜಲು ಧನ್ಯವಾದವಿತ್ತರು.













